ಶುದ್ದ ಸಾವಯುವ ಬೆಲ್ಲ ತಾಳೆ, ತೆಂಗಿನ ಮರದ ನೀರಾದಲ್ಲಿ ತಯಾರಾಗುವ ಸ್ವಾದಿಷ್ಟ ಬೆಲ್ಲ. ಇದನ್ನು ವಾಲೆ ಬೆಲ್ಲ, ಓಲೆ ಬೆಲ್ಲ ಎಂಬ ನೀರಾ ಬೆಲ್ಲ ಅಂತಲೂ ಕರೆಯುತ್ತಾರೆ, ಈ ಬೆಲ್ಲವನ್ನು ನೈಸರ್ಗಿಕವಾಗಿ ಪ್ಯಾಕ್ ಮಾಡಿ ಸಂರಕ್ಷಿಸಿ ಇಡಲಾಗುತ್ತದೆ. ಇದರ ಕುರಿತು ಅರುಣ್ ಪ್ರಸಾದ್ ಅವರು ಬರೆದ ಒಂದು ಪುಟ್ಟ ಲೇಖನ ತಪ್ಪದೆ ಓದಿ…
ಕಬ್ಬಿನಿಂದ ತಯಾರಿಸಿದ ಬೆಲ್ಲ ಹಾಗೂ ಸಕ್ಕರೆ ಎಲ್ಲರಿಗೂ ಪರಿಚಿತ. ಆದರೆ ತಾಳೆ ಮರದ ಹಾಗೂ ತೆಂಗಿನ ಮರದಿಂದ ಇಳಿಸಿದ ನೀರಾ (ಕಳ್ಳು ಅಥವ ಶೇಂದಿ) ದಿಂದ ತಯಾರಿಸುವ ಬೆಲ್ಲ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ .
ಫೋಟೋ ಕೃಪೆ : google
ಈ ಬೆಲ್ಲ ಮೊದಲೆಲ್ಲ ಕರಾವಳಿಯಲ್ಲಿ ಎಲ್ಲಾ ಕಡೆ ಸಿಗುತ್ತಿತ್ತು, ರುಚಿಯು ವಿಶಿಷ್ಟ ಮತ್ತು ಇದನ್ನ ಗಾಲಿ ಆಕಾರದಲ್ಲಿ ಅಚ್ಚಿನಲ್ಲಿ ಹೋಯ್ದು ಅದಕ್ಕೆ ಅಂಚಿಗೆ ತಾಳೆ ಮರದ ಗರಿಯನ್ನ ಸುತ್ತುತ್ತಾರೆ. ಹತ್ತಾರು ವಾಲೆ ಬೆಲ್ಲದ ಗಾಲಿಗಳನ್ನ ದೊಡ್ಡದಾದ ತಾಳೆ ಎಲೆಯ ಕೊಟ್ಟೆಯಲ್ಲಿ ಕಟ್ಟಿರುತ್ತಾರೆ. ಇದನ್ನ ತಯಾರಿಸಿ ಪ್ಯಾಕ್ ಮಾಡುವುದು ಒಂದು ಕಲೆಯೇ ಸರಿ.
ಇದು ಶುದ್ದ ಸಾವಯವ ಬೆಲ್ಲ ಮತ್ತು ಇದನ್ನ ನೈಸಗಿ೯ಕವಾಗಿ ಪ್ಯಾಕ್ ಮಾಡಿ ಸಂರಕ್ಷಿಸುವ ಕಾಯಕ ಈಗ ಕ್ರಮೇಣ ಮಾಯವಾಗಿದೆ.
ಫೋಟೋ ಕೃಪೆ : flirt
ಅನೇಕ ಬಾರಿ ಕರಾವಳಿಗೆ ಹೋದಾಗ ಇದನ್ನ ಹುಡುಕಿದರೂ ಸಿಗಲಿಲ್ಲ. ಕಾರಣ ಕೇಳಿದರೆ ಈಗ ಯಾರೂ ಇದನ್ನ ಕೇಳುವುದಿಲ್ಲ, ಮತ್ತು ಇದನ್ನ ತಯಾರಿಸುವವರೂ ಕಡಿಮೆ ಅಂದರು.
ಕುಂದಾಪುರದ ಸಮೀಪದ ಕೋಟೇಶ್ವರದಿಂದ ಹುಡುಕಿದೆ. ಎರೆಡು ಕೊಟ್ಟೆ ವಾಲೆ ಬೆಲ್ಲ ಬಂಧುಗಳಾದ ಹಿರಿಯರು ಶ್ರೀ ನಾರಾಯಣ ಮೆಂಡನ್ ಉಪ್ಪಿನಕೋಟೆಯವರು ತಂದು ಕೊಟ್ಟಿದ್ದಾರೆ.
ಇದು ನೋಡಲಿಕ್ಕೆ ಇಷ್ಟು ಸುಂದರವಾಗಿದೆ ಇನ್ನು ಇದರ ರುಚಿ ?! ಹುಡುಕಿ ಖರೀದಿಸಿ ತಿಂದು ನೋಡಿ.
- ಅರುಣ್ ಪ್ರಸಾದ್