ಚಿರತೆಯಲ್ಲಿ ಮೂರು ಬಗೆಯ ವ್ಯತ್ಯಾಸ ತಿಳಿಯಿರಿ…

ಮೂರು ಚಿತ್ರಗಳನ್ನು ತೋರಿಸಿ ನನ್ನ ಸ್ನೇಹಿತನನ್ನು ಇದೇನೆಂದು ಕೇಳಿದೆ. ಮೂರು ಚಿತ್ರಗಳನ್ನು ಚಿರತೆಯೇ ಎಂದ. ಆದರೆ ಆ ಮೂರೂ ಚಿರತೆಯಲ್ಲಿಯೂ ವ್ಯತ್ಯಾಸವಿದೆ. ನಾವು ವನ್ಯ ಜೀವಿಯ ಬಗ್ಗೆ ಸಾಮಾನ್ಯ ಜ್ಞಾನ ಪಡೆಯೋಣ ಹಾಗೂ ಪ್ರೀತಿಸೋಣ.

ಚಿರತೆ (ಪಂಥೆರಾ ಬಾರ್ಡರ್)

(Cheetha, Leopard, Jaguar, Panther)

ಹಳದಿ ಮಿಶ್ರಿತ ಕಂದು ಬಣ್ಣದ ಪ್ರಾಣಿ ಚಿರತೆ. ಇದಕ್ಕೆ ಮಲೆನಾಡು ಕಡೆ ಚಿಟ್ಟೆ ಹುಲಿ ಅಂತಾನೂ ಕರೆಯುತಾರೆ. ಆದರೆ ಸಾಮಾನ್ಯವಾಗಿ ಹೇಳುವ ಹೆಸರು ‘ಚಿರತೆ ‘ ಹಾಗೂ ಮೂಲ ನಾಮ ಪ್ಯಾಂಥೇರಾ (Pantheras). ಹುಲಿ, ಚಿರತೆ, ಸಿಂಹ, ಹಾಗೂ ಅನೇಕ ಬೆಕ್ಕಿನ ಜಾತಿಯ ಪ್ರಾಣಿಗಳಿಗೆ Pantheras ಮೂಲ ನಾಮ.

ಈ ಲೇಖನದ ಉದ್ದೇಶ ಇದರ ಪ್ರಭೇದಗಳನ್ನು ಜನಸಾಮಾನ್ಯರಿಗೆ ತಿಳಿಸುವುದು.

ನಾನು ಮೂರು ಚಿತ್ರಗಳನ್ನು ನನ್ನ ಮಿತ್ರನೊಬ್ಬನಿಗೆ ತೋರಿಸಿ ಇದೇನೆಂದು ಕೇಳಿದೆ.

ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ನಗುವಿನಿಂದ ‘ಸರ್ ಇದೇನಿದು ತಮಾಷೆ’ ಅಂದ.

ನಾನು ಇಲ್ಲಾ ಕಣೋ ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಅಂದು ಹೇಳಿದೆ.

arunima

ಅವು (Cheetha, Leopard, Jaguar) ಅಂತ ನಾನು ತಿಳಿದುದ್ದನು ಹೇಳಿದೆ.

ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ನಗುವಿನಿಂದ ‘ಸರ್ ಇದೇನಿದು ತಮಾಷೆ’ ಅಂದ.

ನಾನು ಇಲ್ಲಾ ಕಣೋ ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಅಂದು ಹೇಳಿದೆ.

ಅವು(Cheetha, Leopard, Jaguar) ಅಂತ ನಾನು ತಿಳಿದುದ್ದನು ಹೇಳಿದೆ.

ಚೀತಾ (Cheetha)

ಇವು ಗಾತ್ರದಲ್ಲಿ ಬೆಕ್ಕಿಗಿಂತ ಎರಡು ಪಟ್ಟು ಉದ್ಧ ಹಾಗೂ ಹಗಲ, ಮುಖ ಮಾತ್ರ ಸಣ್ಣದು ಬೆಕ್ಕಿನಂತೆ ಹಾಗೂ ಕಣ್ಣಿನ ಸುತ್ತ ನಮ್ಮ ರಾಮದೇವರ ನಾಮದಂತೆ ಒಂದು ಪಟ್ಟಿ ಹಾಗೂ ಮೈ ತುಂಬಾ ಸಣ್ಣಕಪ್ಪು ಚುಕ್ಕಿಗಳು.

ಇದರ ಗುರುತುವಿಕೆ ಅದರ ಮುಖ.

ಇದರ ವೇಗ ಬೆಳಕಿನ ವೇಗ (lightning Speed) ಅಂತಾನೆ ಹೇಳಬಹುದು.

ಇವು ಕಾಣಸಿಗುವುದು ಆಫ್ರಿಕಾ ಖಂಡದಲ್ಲಿ ಮಾತ್ರ.

ಲೆಪರ್ಡ್ (Leopard)

ನಮ್ಮ ಭಾರತದಲ್ಲಿ ಹಾಗೂ ಇಡೀ ಏಷ್ಯಾ ಖಂಡದ ತುಂಬಾ ಹೇರಳವಾಗಿ ಸಿಗುತ್ತವೆ.

ಇವು ಗಾತ್ರದಲ್ಲಿ ದೊಡ್ಡದು ನಾಲ್ಕು ಅಡಿ ಹಾಗೂ 5 ಅಡಿ ಒಮ್ಮೊಮ್ಮೆ ಏಳು ಅಡಿಗಲಸ್ಟು ಬೆಳೆದಿರುತ್ತವೆ.

ಇದರ ಗುರುತುವಿಕೆ ವೃತಾಕಾರದ ಕಪ್ಪು ಚುಕ್ಕೆ.

ಜಾಗ್ವರ್ (Jaguar)

ಇವು ಗಾತ್ರದಲ್ಲಿ ಲೆಪರ್ಡ್ (Leopard) ತರ. ಆದರೆ ಮೈ ತುಂಬಾ ಚೌಕಾಕಾರದ ಕಪ್ಪು ಚುಕ್ಕೆಗಳು, ಹಾಗೂ ಇದರ ಮೂಲ ನಿವಾಸ ಅಮೇರಿಕಾ ಖಂಡದ ಅಮೇಝೋನ್ ಕಾಡಿನಲ್ಲಿ.

ಈ ಮೂರು ಪ್ರಭೇದಗಳು ಮೇಲ್ಕಂಡಂತೆ. ಈ ಜಾತಿಯ ಇನ್ನೊಂದು ಜೀವಿ ಕರಿ ಚಿರತೆ (Black Panther)

ಇವು ಚಿರತೆಯ ಸಂತತಿಯೇ ಆದರೆ ಹಾರ್ಮೋನ್ ವ್ಯತಾಸದಿಂದ ನೂರರಲ್ಲಿ ಕೇವಲ 5 ಜೀವಿಗಳು ಈ ರೀತಿ ಹುಟ್ಟುತದೆ.

ಇದರ ಸಂಗತಿ ಶ್ರೀ ‘ಕೆನ್ನೆತ್ ಆಂಡರ್ಸನ್’ ರವರು ತಮ್ಮ ” ಬ್ಲ್ಯಾಕ್ ಪ್ಯಾಂಥರ್ಸ್ ಆಫ್ ಶಿವನಪಲ್ಲಿ ” ಕೃತಿಯಲ್ಲಿ ಬರೆದಿದ್ದಾರೆ.

ಸೃಷ್ಟಿ ವಿಸ್ಮಯದಲ್ಲಿ ಭಗವಂತನ ಕೃಪೆ ಅಪಾರ.

ನಾವು ವನ್ಯ ಜೀವಿಯ ಬಗ್ಗೆ ಸಾಮಾನ್ಯ ಜ್ಞಾನ ಪಡೆಯೋಣ ಹಾಗೂ ಪ್ರೀತಿಸೋಣ.

  • ಚಂದ್ರಶೇಖರ್ ಕುಲಗಾಣ

arunima

 

0 0 votes
Article Rating

Leave a Reply

1 Comment
Inline Feedbacks
View all comments
Linganna Bhakthilatha Yaduraiah

Thank You.

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW