ಪರ್ವತವಾಣಿಯವರ ಕುರಿತ ಲೇಖನ ಮೆಚ್ಚಿ ಬರೆದ ಪ್ರತಿಕ್ರಿಯೆ

(ಆಕೃತಿ ಕನ್ನಡದಲ್ಲಿ ಹೂಲಿಶೇಖರ್ ಅವರೂ ಬರೆದ ಶ್ರೀ ಪರ್ವತವಾಣಿಯವರ ಕುರಿತ ಲೇಖನ ಮೆಚ್ಚಿ ಧಾರವಾಡದ ಪ್ರೊ ಎಸ್.ಆರ್.ತೋಂಟದಾರ್ಯ ಅವರೂ ಪ್ರತಿಕ್ರಿಯೆ ನಿಡುತ್ತ ಇನ್ನಷ್ಟು ವಿವರಗಳನ್ನು ನೀಡಿದ್ದಾರೆ. ಅವರ ಪುಟ್ಟ ಪ್ರತಿಕ್ರಿಯೆಯನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇವೆ.)

(ಪ್ರೊ ಎಸ್.ಆರ್.ತೋಂಟದಾರ್ಯ)

ಪರ್ವತ ವಾಣಿಯವರ ಲೇಖನ ತುಂಬಾ ಚೆನ್ನಾಗಿದೆ. ಮೆಲುಕು ಹಾಕುವಂತಿದೆ. ನಿಜ, ಇಂತಹ ಸನ್ನಿವೇಶಗಳು ಅವಿಸ್ಮರಣೀಯವಾದವು. ಹೂಲಿಶೇಖರ್ ನೀವು ಮೊದಲೇ ಬೆಂಗಳೂರಿನಲ್ಲಿ ಇದ್ದಿದ್ದರೆ ಹೆಚ್ಚು ಪ್ರಕಾಶಮಾನಕ್ಕೆ ಬರುತ್ತಿದ್ದಿರಿ. ನಿಮ್ಮ ನಾಟಕಗಳ ಬಗ್ಗೆ ಸಮಗ್ರವಾದ ಅಧ್ಯಯನ ಯಾರಾದರೂ ಕೈಗೊಳ್ಳುವುದು ಅವಶ್ಯ. ವಿಮರ್ಶಕರು ತಮಗೆ ಬೇಕಾದ ನಾಟಕದ ಬಗ್ಗೆ, ನಾಟಕದ ಬಗ್ಗೆ ಬರೆಯಲು ಸ್ವತಂತ್ರರು ಎಂಬುದನ್ನು ಒಪ್ಪಿಯೂ ಹೇಳುವುದೆಂದರೆ ಅವರು ಸ್ವಲ್ಪ ಪಕ್ಷಪಾತಿಗಳು ಎಂದರೆ ತಪ್ಪಾಗುತ್ತದೆಯೇ? ನಿಮ್ಮ ನಾಟಕಗಳ ಅಧ್ಯಯನ ಬೇಗ ಬರಲಿ ಎಂದು ಹಾರೈಸುತ್ತೇನೆ.

ಲೇಖನದ ಕೊನೆ ಸಾಲು ನಿಜ, ಯಾಕೆ ಈ ಕಲಾ ತಂಡಗಳು ಲೇಖನವನನ್ನು ಉದಾಸೀನವಾಗಿ ಕಾಣುತ್ತಾರೋ ಗೊತ್ತಿಲ್ಲ. ಪರ್ವತವಾಣಿಯವರದು ಮುಕ್ತ ಮನಸ್ಸು. ಚಿಕ್ಕವರಿರಲಿ ದೊಡ್ಡವರಿರಲಿ ಎಲ್ಲರ ಬಗ್ಗೆ ಪ್ರೀತಿ ತೋರುವವರು. ಅವರ ಪ್ರೀತಿಯ ಹೊಳೆಯಲಿ ಮಿಂದವರಲಿ ನಾನು ಒಬ್ಬ. ನಮ್ಮ ತಂಡದಿಂದ ಅವರಿಗೆ ಒಂದು ಬಿನ್ನವತ್ತಳೆ ಕೂಡ ಅರ್ಪಿಸಿದ್ದೇವೆ.

ಮರಿತಿದ್ದೆ,

ಧಾರವಾಡದ ಆಕಾಶವಾಣಿಯಲ್ಲಿ ಮೂರೂ ತಿಂಗಳಿಗೊಮ್ಮೆ ವಿಶೇಷ ನಾಟಕ ಪ್ರಸಾರವಾಗುತ್ತಿತ್ತು. ಅದಕ್ಕೆ ‘ಕಾನನ ಡಯಲ್’ನ ಕಥೆಯೊಂದನ್ನು ಆಧರಿಸಿ ಎರಡೇ ಪಾತ್ರಗಳಿರುವ ಒಂದೂವರೆ ಗಂಟೆ ನಾಟಕ ದೀಪ ಪಿಶಾಚಿ ಬರೆದಿದ್ದರು. ಇದರ ಇನ್ನೂ ವಿಶೇಷವೆಂದರೆ ಖ್ಯಾತ ಸಿನಿಮಾ ನಟರಾದ ಅಶ್ವಥ್ ಅವರು ಒಂದು ಪಾತ್ರ ಮಾಡಲು ಒಪ್ಪಿ ಧಾರವಾಡಕ್ಕೆ ಬಂದಿದ್ದು, ಇನ್ನೊಂದು ಪಾತ್ರಕ್ಕೆ ನಾಟಕ ನಿರ್ದೇಶಕರಾಗಿದ್ದ ಯಮುನಾ ಮೂರ್ತಿಯವರು ನನ್ನನ್ನು ಆರಿಸಿದ್ದರು. ಅದಕ್ಕೆ ಪರ್ವತವಾಣಿಯವರ ಒಪ್ಪಿಗೆ ಸಹಾ ಇತ್ತು. ಇದೊಂದು ನನಗೆ ಸ್ಮರಣೀಯ ಅವಕಾಶವಾಗಿತ್ತು.

ಇಂತಹ ಅನೇಕ ಅವಕಾಶಗಳನ್ನು ಯಮುನಾಮೂರ್ತಿ ಅವರು ನನಗೆ ನೀಡಿದ್ದಾರೆ. ಆಗ ಪರ್ವತವಾಣಿ ಒಂದೆರಡು ತಿಂಗಳಕಾಲ ಧಾರಾವಾಡದಲ್ಲಿದ್ದರು. ಆಗ ಅದೇ ಒದಗಿದಂತೆ ಖ್ಯಾತ ಲೇಖಕರಾಗಿದ್ದ ಅಹೋಬಲ ಶಂಕರ ಅವರೂ ಧಾರವಾಡದಲ್ಲಿ ವಾಸ್ತವ್ಯ ಮಾಡಿದ್ದರು. ಯಮುನಾಮೂರ್ತಿ ಅವರ ಮನೆಯಲ್ಲಿ ಎಲ್ಲರೂ ಸೇರಿ ಪಟ್ಟಾಂಗ ಹೊಡೆಯುತ್ತಿದ್ದೆವು. ನನಗೆ ಆಗ ನಾಟಕಕಾರರ, ನಾಟಕಗಳ, ಸಾಹಿತ್ಯವವಲಯದ ರಾಜಕೀಯದ ಇತ್ಯಾದಿ ವಿಷಯಗಳ ಕುರಿತು ಅನೇಕ ಹೊಸ ವಿಷಯಗಳು ಗೊತ್ತಾದವು. ಆಗಲೇ ಜಡ ಭರತರ ಬಹು ಪ್ರಶಂಸಿತ ನಾಟಕ ‘ಕದಡಿದ ನೀರು’ ಕುರಿತು ಕೆಲವು ರಹಸ್ಯ ಮಾಹಿತಿಗಳು ಗೊತ್ತಾಗಿದ್ದು, ಅದೂ ಕುದುರೆ ಮುಖದಿಂದಲೇ ಅಹೋಬಲ ಶಂಕರರಿಂದ ನಂತರ ಪರ್ವತ ವಾಣಿಯವರೂ ಬೇರೆ ನಾಟಕಗಳ ಬಗ್ಗೆಯೂ ರಹಸ್ಯ ಮಾಹಿತಿಗಳನ್ನು ನೀಡಿದರು. ನಾನು ಈ ಕೃತಿ ಚೌರ್ಯ ಕುರಿತು ಕನ್ನಡ ಪ್ರಭದಲ್ಲಿ ಸುಮತಿಂದ್ರ ನಾಡಿಗ ಅವರ ಲೇಖನ, ಗಿರಡ್ಡಿಯವರು ‘ಹಯವದನ’ ಕುರಿತು ಬರೆದ ಲೇಖನ ಹಾಗು ಚಂಪಾ ಅವರ ನಾಟಕ ಗೋಕರ್ಣದ ಗೌಡಶಾನಿ ಕುರಿತು ಪ್ರಸ್ತಾಪಿಸಿದ್ದು ಇದಕ್ಕೆಲ್ಲ ಕಾರಣವಾಗಿತ್ತು.

ನಾವೆಲ್ಲ ಸಂಜೆ ವಾಕಿಂಗ್ ಕಾಮ್ ಕಾಫಿ ಸೇವನೆಗೆ ಧಾರವಾಡ ರೆಸ್ಟೋರೆಂಟ್ ಗೆ ನಡೆದು ಹೋಗುತ್ತಿದ್ದೆವು. ಈ ನಿಮ್ಮ ಲೇಖನದ ದೆಸೆಯಿಂದ ಅವೆಲ್ಲ ನೆನಪಿಗೆ ಬಂದವು. ಅದಕ್ಕಾಗಿ ನಿಮಗೆ ಧನ್ಯವಾದಗಳು. ಲೇಖನಕ್ಕೆ ಧನ್ಯವಾದಗಳು.

(ಸಂಬಂಧಪಟ್ಟ ಲೇಖನಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.)

Home
Search
All Articles
Videos
About
%d bloggers like this:
Aakruti Kannada

FREE
VIEW