‘ಪ್ರೀತಿ ಮಳೆ’ ಕವನ – ಫಣಿರಾಜು ಎಸ್

ನನ್ನ ನೆನಪು ಬರದೆ ಇನ್ನೂ, ಕಾದು ಕಾದೇ ಕರಗಲೇನು? … ಕವಿ ಫಣಿರಾಜು ಎಸ್ ಕಡೂರು ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಅಂದು ನನ್ನ ಹೃದಯ ಪೊರೆದು
ಭಾವ ತುಂಬಿ ಹರಿಸಿದವಳು
ನನ್ನ ನೆನಪು ಬರದೆ ಇನ್ನೂ ? //

ಯಾವ ಗಾಳಿ ಬೀಸಿ ಬಂತೋ
ಯಾರ ಮನವ ತಣಿಯಲೆಂದೋ
ಕಾದು ಕುಳಿತೆ ಕಾಯುತಿರುವೆ
ನನ್ನ ನೆನಪು ಬರದೆ ಇನ್ನೂ ? //

ಗಾಳಿ ಬೀಸಿ ಮೊಡ ಚದುರಿ
ಮಳೆ ತರದು ದೂರ ಸರಿದು
ಎಲ್ಲೋ ಸುರಿದೆ ನನ್ನ ತೊರೆದು
ನನ್ನ ನೆನಪು ಬರದೆ ಇನ್ನೂ ? //

ಕಡಲ ಒಡಲ ತೊರೆದೆ ನೀನು
ಮುಗಿಲು ಸೇರಿ ಕವಿಯಲೇನು?
ಕಾದು ಕಾದೇ ಕರಗಲೇನು?
ನನ್ನ ನೆನಪು ಬರದೆ ಇನ್ನೂ ? //

ನಿನ್ನ ಪ್ರೀತಿ ಮಳೆಯ ಕಾದೆ
ಹನಿ ಹನಿಗೆ ಹೃದಯ ತೆರೆದೆ
ಸನಿಹ ತೊರೆದೆ ವಿರಹ ತರದೆ?
ನನ್ನ ನೆನಪು ಬರದೆ ಇನ್ನೂ ? //


  • ಫಣಿರಾಜು ಎಸ್ ಕಡೂರು (ಫಣಿರಾಜು ಎಸ್)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW