ಕವಿ ಎಂದೇ ಖ್ಯಾತಿ ಪಡೆದ ಬಿ.ಆರ್. ಲಕ್ಷ್ಮಣ ರಾವ್ ಅವರು ಕವನಗಳಿಗೆ ಹೋಲಿಸಿದರೆ ಕಥೆಗಳನ್ನು ಬರೆದಿದ್ದು ಕಡಿಮೆ. ಕಳೆದ ೫ ದಶಕಗಳಲ್ಲಿ ಅವರು ಬರೆದ ೨೦ ಕಥೆಗಳನ್ನು ಈ ಸಂಕಲನದಲ್ಲಿ ಪ್ರಕಟಿಸಲಾಗಿದೆ. ಅವುಗಳೆಲ್ಲವೂ ಕೂಡ ಕಾವ್ಯದಂತೆ ಸುಂದರವಾಗಿದೆ. ಅವರ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ ತಪ್ಪದೆ ಮುಂದೆ ಓದಿ…
ಕೃತಿ : ಪ್ರೀತಿಯ ಬೆಳಕು
ಲೇಖಕರು: ಬಿ.ಆರ್. ಲಕ್ಷ್ಮಣ ರಾವ್
ಮಂಗಳ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: ೨೦೧೪
ಪುಟಗಳು:೨೩೯
ಬೆಲೆ: ರೂ.೧೫೦
ಕೆಲವು ಕಥೆಗಳ ಸಂಕ್ಷಿಪ್ತ ಸಾರಾಂಶ :
*ಯಾಕೆಂದರೆ : ಉಮಾ ಒಳ್ಳೆಯ ಹುಡುಗಿ. ಆದರೆ ವಯಸ್ಸು ಮೀರುತ್ತಿದ್ದರೂ ಮದುವೆಯಾಗಿಲ್ಲ. ಅವಳನ್ನು ತಾನು ಮದುವೆಯಾಗಲು ಹಿರಿಯರು ಒಪ್ಪುವುದಿಲ್ಲ. ಯಾಕೆಂದರೆ ಪಂಗಡ ಬೇರೆ. ಮತ್ತೆ ಅವಳ ತಂದೆ ಅಂತಹ ಸ್ಥಿತಿವಂತರೂ ಅಲ್ಲ. ಅದೂ ಅಲ್ಲದೇ ಅವನಿಗೂ ಮದುವೆಯಾಗುವ ತಂಗಿಯರಿದ್ದಾರೆ. ಇದು ಹುಡುಗನ ಅಸಹಾಯಕತೆಯನ್ನು ತಿಳಿಸುವ ಕಥೆ.
* ನಿರಂತರ : ಅವನ ತಂಗಿ ಸುಮಾ ಬೆಳಗಿನಿಂದ ಕಾಣದಿದ್ದಾಗ ಆಕೆ ತನ್ನ ಪ್ರೇಮಿ ರೆಡ್ಡಿಯೊಂದಿಗೆ ಮನೆಬಿಟ್ಟು ಹೋಗಿರ ಬಹುದೆಂದು ಎಲ್ಲಾ ಅಂದಾಜಿಸಿದ್ದರು.ಹಾಗಾದರೆ ಅವಳು ಹೋಗಿದ್ದೆಲ್ಲಿಗೆ ?. ಅವಳ ಪ್ರೇಮ ಪ್ರಸಂಗದ ಬಗ್ಗೆ ಕೊಂಚ ಸಹಾನುಭೂತಿ ತೋರಿದವನೆಂದರೆ ಅಣ್ಣನಾದ ಅವನೊಬ್ಬನೇ. ಯಾಕೆಂದರೆ ಕೆಲವು ವರ್ಷಗಳ ಹಿಂದೆ ಅವನೂ ಇಂತದ್ದೇ ಒಂದು ಪ್ರಸಂಗದಲ್ಲಿ ಸಿಕ್ಕಿ ಆ ಪ್ರೇಮ ಫಲಿಸದೇ ಮುಂದೆ ಬೇರೆ ಮದುವೆಯಾಗಿದ್ದ.

ಈಗ ಅವನ ತಂಗಿ ಇಂತದೇ ಒಂದು ಸುಳಿಯಲ್ಲಿ ಸಿಕ್ಕಿದ್ದಾಳೆ.ಅವಳನ್ನು ಹೇಗೆ ಪಾರು ಮಾಡಬೇಕೆಂದು ಚಿಂತಿಸಿದ ಅಣ್ಣ ನಿರ್ಧರಿಸಿದ್ದೇನು?
* ಹೀಗೂ ಆಗುವುದುಂಟು : ಆತನೊಬ್ಬ ಕಾಲೇಜು ಅಧ್ಯಾಪಕ. ಅವನ ಬಿ.ಎ.ತರಗತಿಗೆ ಬರುವ ಬ್ರಾಹ್ಮಣರ ಹುಡುಗಿ ರಾಧಾಳನ್ನು ಕಂಡರೆ ಅವನಿಗೆ ಅದೇನೋ ಪ್ರೀತಿಯ ಸೆಳೆತ. ಮೂರು ದಿನಗಳಿಂದ ಆಕೆ ಕಾಲೇಜಿಗೆ ಬರದಿದ್ದು ಅವಳನ್ನು ನೋಡಲು ವರ ಬಂದಿದ್ದು ಎಲ್ಲಾ ಕೇಳಿ ಇವನ ತಲೆ ಕೆಟ್ಟಿತ್ತು. ಅವಳನ್ನು ತಾನು ಪ್ರೀತಿಸುವ ವಿಷಯವನ್ನು ಅದೇ ಊರಲ್ಲಿದ್ದ ತನ್ನ ಅಕ್ಕನಿಗೆ ಹೇಳಿ ಹೇಗಾದರೂ ಅವಳನ್ನು ಒಪ್ಪಿಸು ಎಂದು ರಾಧೆಯನ್ನು ಮನೆಗೆ ಕರೆಸಿದ್ದ. ರಾಧೆ ಕಣ್ಣೀರು ಸುರಿಸುತ್ತಾ, ತಾನೆಂದೂ ಅವರನ್ನು ಆ ದೃಷ್ಟಿಯಿಂದ ನೋಡಿಲ್ಲ. ಅವರು ‘ತನ್ನ ಅಣ್ಣನಂತೆ’ ಎಂದು ಮದುವೆಯನ್ನು ನಿರಾಕರಿಸಿದ್ದಳು.
ಇದನ್ನು ಕೇಳಿ ದುಃಖದಿಂದ ಚಳಿ ಜ್ವರದಿಂದ ಹಾಸಿಗೆ ಹಿಡಿದ ಅವನನ್ನು ನೋಡಲು ಬಂದ ರಾಧೆ ‘ತಾನೇಕೆ ಸುಳ್ಳು ಹೇಳಿದ್ದು’ ಎನ್ನುವುದನ್ನು ತಿಳಿಸಿ ಅಳುವಾಗ ಇವನಿಗೆ ಒಳಗೊಳಗೇ ಸಂತೋಷವಾಗಿತ್ತು. ಕಡೆಗೂ ಅಂತೂ ಎಲ್ಲಾ ಅಡೆತಡೆಗಳನ್ನೂ ದಾಟಿ ಅವರಿಬ್ಬರ ಮದುವೆಯಾಗಿತ್ತು.

ಮೊದಲನೇ ರಾತ್ರಿ ಹಾಲು ಹಿಡಿದು ಬಂದ ಹೆಂಡತಿಯ ಮುಖ ನೋಡದೇ ಕೊಸರಿಕೊಂಡು ನಿಂತವನ ವರ್ತನೆಗೆ ಬೆದರಿದ ರಾಧೆಗೆ ‘ನೋಡು ಈ ಜನ್ಮದಲ್ಲಿ ನಾವು ಒಂದಾಗಲು ಸಾಧ್ಯವಿಲ್ಲ. ನನಗೆ ತಂಗಿಯರಿಲ್ಲ. ನಾನು ನಿನ್ನನ್ನು ತಂಗಿ ಎಂದು ತಿಳಿದಿದ್ದೇನೆ. ‘ ಎಂದು ಅಣಕಿಸಿದಾಗ ರಾಧೆ ಮಾಡಿದ್ದೇನು?.
ಗಂಡು ಹೆಣ್ಣಿನ ಪ್ರೀತಿ ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗ ಬಾರದು ಎಂಬ ದೃಷ್ಟಿಕೋನ ಲೇಖಕರದು. ಕಥೆ ಮುಕ್ತಾಯವನ್ನು ನಾವೇ ಕಲ್ಪಿಸಿ ಕೊಳ್ಳುವಂತ ಒಂದು ರೀತಿಯ ವಿಶೇಷತೆಯನ್ನು ನಾವಿಲ್ಲಿ ಕಾಣ ಬಹುದು. ಇದೇ ಮೂಲ ಉದ್ದೇಶ ಹೊಂದಿದ ಬಹುತೇಕ ಕಥೆಗಳು ಇಲ್ಲಿವೆ. ನೀವೂ ಓದಿ…
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕತ್ತಲೆಕಾನು’ ಕೃತಿ ಪರಿಚಯ
- ‘ನಿರುತ್ತರ’ ಪುಸ್ತಕ ಪರಿಚಯ
- ‘ಈಸಾಡತಾವ ಜೀವಾ’ ಕೃತಿ ಪರಿಚಯ
- ‘ಪ್ರಾಣೇಶ್ PUNCH ಪಕ್ವಾನ್ನ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
