ಪ್ರೀತಿಯ ಹಾಲ್ಗಡಲು ವಿಷವಾದಾಗ

ಕವನ :  ಅಮೃತ ಎಂ

ಪರಿಚಯ : ಅಮೃತ ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ  ಎಂ ಎಸ್ಸಿ ಓದುತ್ತಿದ್ದು, ಕವನ, ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. 

ಕನಸಿನ ಜೋಪಡಿಯಲ್ಲಿ
ಕಟ್ಟಿದ ಸೂತಕದ ಅರಮನೆ ಇದೆ..!
ಸೂರ್ಯನಂತೆ ಪ್ರಜ್ವಲಿಸಿದ
ದೀಪ ನಂದಿ ಹೋಗುತ್ತಲಿದೆ..!

ಬಾಳ ಬೆಳಗ ಬೇಕಿದ್ದ ಜ್ಯೋತಿ
ಬದುಕನ್ನೇ ನಂದಿಸುತ್ತಿದೆ .!
ಉಸಿರಾಗಬೇಕಿದ್ದ ಒಡನಾಡಿಯೇ
ಉಸಿರ ಬಿಗಿಹಿಡಿಯುತ್ತಲಿದೆ.!

ಬೇಲಿಯೇ ಎದ್ದು ಹೊಲವ ಮೇಯ್ದಂತೆ
ಪ್ರೀತಿಸಿದ ಜೀವವೇ ದ್ವೇಷಿಸುತ್ತಿದೆ ..!
ಹೂವಿನಂತೆ ಇರುವ ಮೃದು ಪ್ರೀತಿ
ಇಂದು ಮುಳ್ಳಾಗಿ ತರಚುತ್ತಿದೆ..!

ಕಣ್ಣೀರ ತಾಪಕ್ಕೂ ಜಗ್ಗದ
ಕಲ್ಲು ಹೃದಯದ ಸಂಗಡವಿದೆ..!
ಮಾತಿಗೂ ಬಗ್ಗದ ಮನಸ್ಸು
ಹೃದಯವನ್ನೇ ಹಿಂಡುತ್ತಲಿದೆ..!

ಯಾವ ಜನ್ಮದಲ್ಲೂ ಸಿಗದ ಪ್ರೀತಿಯ
ಗಣಿ ನೀ ಎಂದು ಭಾವಿಸಿದ್ದೆ..!
ನನ್ನ ನಂಬಿಕೆಯ ಮೇರು ಪರ್ವತವೇ
ದಿಕ್ಕೇ ಕಾಣದೆ ದಿಕ್ಕಾಪಾಲಾಗಿ ಹೋಗಿದೆ..!

Screenshot_20200524-142513~2

ಕವನ :  ಅಮೃತ ಎಂ

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com  ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು.)

ಇನ್ನಷ್ಟು ಕವನಗಳು :

0 0 votes
Article Rating

Leave a Reply

1 Comment
Inline Feedbacks
View all comments
ರೇಶ್ಮಾ ಗುಳೇದಗುಡ್ಡಾಕರ್

ಕವನ ಚೆಂದ ಇದೆ ಅಮೃತಾ

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW