ರಕ್ಷಾಬಂಧನ – ಪದ್ಮನಾಭ. ಡಿ

ಕವಿ ಪದ್ಮನಾಭ. ಡಿ ಅವರು ರಕ್ಷಾಬಂಧನ ಕುರಿತು ಬರೆದ ಆಪ್ತ ಕವಿತೆಯನ್ನು ತಪ್ಪದೆ ಓದಿ…

ಕೈಗೆ ಸೋದರಿ ಕಟ್ಟಿದಂತ ರಾಖಿಯು
ಬೆಲೆ ಕಟ್ಟಲಾಗದ ಭಾವದೊಡವೆಯು
ಒಲವು ತುಂಬಿದ ಮನದ ಬೆಸುಗೆಯು
ಸೋದರತ್ವಕೆ ಎಂದೆಂದೂ ಸಾಕ್ಷಿಯು//

ಹರಿವ ನೀರಿನ ತೆರದಿ ಶುದ್ಧವು
ಅಣ್ಣ ತಂಗಿಯ ಮಧುರ ಭಾವವು
ಮುರಿಯದಂತಹ ಮಮತೆ ಬಂಧನ
ಸೂಚಿಸುತಿಹುದು ಈ ರಕ್ಷಾಬಂಧನ//

ಹರುಷದಲೆಗಳ ಸಂಭ್ರಮ ಕಾಣಲಿ
ದೈವಕರುಣೆ ನಿನ್ಞ ಬಾಳ ಬೆಳಗಲಿ
ನಿನ್ನ ಬಾಳಿನ ಸವಿಬುತ್ತಿಯೂಟದಿ
ನನ್ನ ನೆನಪು ಒಂದು ತುತ್ತಾಗಿರಲಿ//

ಕಷ್ಟ ಬಂದಾಗ ಮನ ನನ್ನ ನೆನೆಯಲಿ
ಭರವಸೆಯೊಂದು ಮನದಿ ಮೂಡಲಿ
ಎಲ್ಲೇ ಇದ್ದರೂ ಶುಭವ ಕೋರುವೆ
ಎಂಬ ನೆನಪನು ಈ ರಾಖಿ ಸಾರಲಿ//


  • ಪದ್ಮನಾಭ. ಡಿ.  ( ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ
    – 2022 ಕವಿಗಳು, ಲೇಖಕರು) ಮೈಸೂರು.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW