ಎಲ್ಲರಿಗೂ ಆಕೃತಿ ಕನ್ನಡದಿಂದ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತಾ, ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಂಗಿಯ ಮೇಲೆ ಬೆರೆದ ಸುಂದರ ಕವಿತೆಯನ್ನು ತಪ್ಪದೆ ಓದಿ….
ಬಾಲ್ಯದೊಳಗೆ ಆಡಿದಂತ
ಆಟನೂರು ನೆನಪಿವೆ
ಬಳಿಯಲಿದ್ದು ಬಳಲಿದಾಗ
ತಂಪುಗಾಳಿ ಬೀಸಿದೆ
ಮರೆಯಲಾರೆ ಗಳಿಗೆಕೂಡ
ನಿನ್ನ ತುಂಟ ಮೊಗವನು
ನನ್ನ ಚಿವುಟಿ ತಲೆಯ ಕೆದರಿ
ಕಾಡಿದಂತ ದಿನವನು
ನಾನತ್ತರೆ ನೀನಳುತಲಿ
ಕೆನ್ನೆ ನೀರ ಒರೆಸಿದೆ
ನನ್ನೊಳಗಡೆ ತಾಯಿಯಾಗಿ
ಪ್ರೀತಿ ಧಾರೆ ಹರಿಸಿದೆ
ನೀ ಹುಟ್ಟಿದ ದಿನದಿಂದಲೆ
ಮನೆ ಬೆಳಗಿತು ಸತ್ಯವು
ಮನೆತನದಲಿ ಹೆಸರುಳಿಸಿದೆ
ನಿನ್ನಿಂದಲೆ ನಿತ್ಯವು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
