ವಿಶ್ರಾಂತಿ ಧಾಮವಾದ ‘ರುದ್ರಭೂಮಿ’…!!!



ರಣ ರಣ ಬಿಸಿಲಿರುವ ವಿಜಯಪುರ ಜಿಲ್ಲೆ‌ಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಅರಣ್ಯಭೂಮಿ ಹೊಂದಿರುವ ಜಿಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಈ ಜಿಲ್ಲೆಯಲ್ಲಿ ಅರಣ್ಯೀಕರಣಗೊಳಿಸುವ ಮೂಲಕ ಅಲ್ಲಿಯ ಅರಣ್ಯ ಇಲಾಖೆ ಮಹತ್ತರ ಹೆಜ್ಜೆಯನಿಟ್ಟಿದೆ. ಈ ಕುರಿತು ಕತೆಗಾರ ಪ್ರಶಾಂತ ಹೊಸಮನಿ ಅವರು ಜನರ ಗಮನಕ್ಕೆ ತರುವುದರ ಮೂಲಕ ಅರಣ್ಯ ಇಲಾಖೆಯ ಕೆಲಸಕ್ಕೆ ಶಾಘಿಸಿದ್ದಾರೆ.ಮುಂದೆ ಓದಿ…

ಬಿಸಿಲನಾಡು, ಬರಡು ಭೂಮಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆ‌. ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಅರಣ್ಯಭೂಮಿ ಹೊಂದಿರುವ ಜಿಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು, ಜಿಲ್ಲೆಯಲ್ಲಿ ಅರಣ್ಯೀಕರಣಗೊಳಿಸುವತ್ತ ಉತ್ತಮ ಹೆಜ್ಜೆಯನಿಟ್ಟಿದೆ. ವಿಜಯಪುರ ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳ ಪರಿಶ್ರಮದ ಫಲವಾಗಿ ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದ ರುದ್ರಭೂಮಿಯಲ್ಲಿ , ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2019 ರಿಂದ ಇಲ್ಲಿಯವರೆಗೆ ನೆಡುತೋಪು ನಿರ್ಮಾಣ ಮಾಡಿ, ಸುಮಾರು ಐದು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಮರಗಳನ್ನು ನೆಡುವುದರ ಮೂಲಕ ಪರಿಸರ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದೆ.

ಐದು ವರ್ಷಗಳ ಹಿಂದೆ ಗ್ರಾಮದ ರುದ್ರಭೂಮಿ ಸಂಪೂರ್ಣ ಹಾಳಾಗಿತ್ತು. ಕುರುಚಲ ,ಕಂಟಿ ,ಮುಳ್ಳುಗಳಿಂದ ಆವೃತ್ತಗೊಂಡಿದ್ದ, ಸೂಕ್ತ ವ್ಯವಸ್ಥೆಯಿಲ್ಲದೇ ಹಾಳು ಕೊಂಪೆಯಾಗಿತ್ತು. ಶವಸಂಸ್ಕಾರಕ್ಕಾಗಿ ರುದ್ರಭೂಮಿಗೆ ಆಗಮಿಸುವ ಜನತೆ, ಶಪಿಸುವಂಥ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ಪ್ರಸ್ತುತ ಗ್ರಾಮದ ರುದ್ರಭೂಮಿಯ ಚಿತ್ರಣವೇ ಬದಲಾಗಿದೆ.

This slideshow requires JavaScript.

ಒಂಭತ್ತು ಎಕರೆ ವಿಸ್ತಾರದ ವ್ಯಾಪ್ತಿಯಲ್ಲಿ ಹೊಂಗೆ, ಬೇವು, ಹುಣಸೆ, ಆಲ, ಅರಳಿ, ಬಸರಿ, ಮತ್ತಿ, ಮಹಾಗನಿ, ಬಸವನಪಾದ, ಜಂಬೂನಿಲ, ಸಂಕೇಶ್ವರ, ಪೆಲಟೋಫಾರ್ಮ, ತಪಸಿ ಮುಂತಾದ ವಿವಿಧ ಜಾತಿಯ ಮರಗಳನ್ನು ಬೆಳೆಸಲಾಗುತ್ತಿದ್ದು, ದಾರಿಹೋಕರನ್ನು ತನ್ನತ್ತ ಸೆಳೆದು ವಿಶ್ರಾಂತಿ ಧಾಮವಾಗುತ್ತಿದೆ. ರುದ್ರಭೂಮಿಯ ಅರಿವಿಲ್ಲದೆ ದಣಿವರಿಸಿಕೊಳ್ಳುವ ತಾಣವಾಗಿ ಮಾರ್ಪಟ್ಟಿದೆ.

ಬರಡುಭೂಮಿಯಾಗಿದ್ದ ಈ ಸ್ಥಳದಲ್ಲೀಗ ಪಕ್ಷಿಗಳ ಹಾಗೂ ಪ್ರಾಣಿಗಳ ಕಲರವ ಹೆಚ್ಚಳಗೊಂಡಿದೆ. ವಿವಿಧ ಮಾದರಿಯ ಪಕ್ಷಿಗಳು ಹಲವು ಮರಗಳಲ್ಲಿ ಗೂಡುಗಳನ್ನು ಕಟ್ಟಿ ,ತಮ್ಮ ವಾಸಸ್ಥಾನವನ್ನು ಪ್ರಾರಂಭಿಸಿವೆ,ಇದಲ್ಲದೇ ಅಳಿಲು, ತೋಳ, ಮುಳ್ಳುಹಂದಿ, ನರಿ, ಮುಂಗುಸಿ, ಮೊಲ, ಕಾಡು ಹಂದಿ, ಮುಂತಾದ ಪ್ರಾಣಿಗಳು ಇತ್ತಿಚೇಗೆ ಕಂಡು ಬರುತ್ತಿವೆ. ಮರಗಳ ಉತ್ತಮ ಬೆಳವಣಿಗಾಗಿ ಹಾಗೂ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ವೀಕ್ಷಕರನ್ನು ನೇಮಿಸಿದ್ದು, ಗ್ರಾಮ ಪಂಚಾಯತಿ ಒಡೆತನದ ಬೊರೆವೆಲ್, ಮರಗಳಿಗೆ ನೀರನ್ನು ಉಪಯೋಗಿಸಿಕೊಳ್ಳಲು ಸಹಕಾರ ನೀಡಿದೆ.

ಗ್ರಾಮದ ಜನತೆಯ ಸಹಕಾರ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಶ್ರಮದ ಫಲವಾಗಿ ಇನ್ನೂ ಹೆಚ್ಚು ಮರಗಳನ್ನು ಬೆಳೆಸುವುದರ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ತಾಣವಾಗಿ ಕಾರ್ಯರೂಪಗೊಳ್ಳಲು ಪ್ರಯತ್ನಿಸುತ್ತೇವೆ.ಎಂದು ಅರಣ್ಯ ರಕ್ಷಕರಾದ ಪ್ರಭಾಕರ್ ಸಮಗೊಂಡ ರವರು ಹೆಮ್ಮೆಯಿಂದ ಹೇಳುತ್ತಾರೆ.ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶ್ರಮವನ್ನು ಗ್ರಾಮದ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ಸನ್ಮಾನಿಸುವುದರ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ.


  •  ಪ್ರಶಾಂತ ಹೊಸಮನಿ (ಕತೆಗಾರರು, ಲೇಖಕರು) ನಾಗಠಾಣ ತಾ.ಜಿ.ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW