ಅವರೆಕಾಳು ಸಬ್ಬಸಿಗೆ ಸೊಪ್ಪಿನ ಉಪ್ಪಿಟ್ಟು

ತರಕಾರಿ ಹಾಕಿದ ಉಪ್ಪಿಟ್ಟು ತಿಂದಿರಬಹುದು. ಆದರೆ ಸಬ್ಬಸಿಗೆ, ಅವರೇಕಾಳು ಹಾಕಿ ಉಪ್ಪಿಟ್ಟು ಸವಿದಿದ್ದೀರಾ? ಸವಿಯದೇ ಹೋದರೆ ಸಬ್ಬಸಿಗೆ ಮತ್ತು ಅವರೇಕಾಳು ಹಾಕಿ ಒಮ್ಮೆ ಉಪ್ಪಿಟ್ಟು ಮಾಡಿ ನೋಡಿ ಎನ್ನುತ್ತಾರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು, ತಪ್ಪದೆ ಮಾಡಿ ನೋಡಿ …

ಬೇಕಾಗುವ ಪದಾರ್ಥಗಳು :

  • ಮಿಡಿಯಂ ರವೆ – ಒಂದು ಕಪ್
  • ಅವರೆಕಾಳು – ಒಂದು ಕಪ್
  • ಸಬ್ಬಸಿಗೆ ಸೊಪ್ಪು – ಎರಡು ಕಂತೆ
  • ಮಾಮೂಲಿ ಒಗ್ಗರಣೆಗೆ
  • ಸಾಸಿವೆ -ಸ್ವಲ್ಪ
  • ಕಡ್ಲೆಬೇಳೆ -ಸ್ವಲ್ಪ
  •  ಉದ್ದಿನಬೇಳೆ -ಸ್ವಲ್ಪ
  • ಹಸಿಮೆಣಸಿನಕಾಯಿ – 5
  • ಈರುಳ್ಳಿ – ಎರಡು ದೊಡ್ಡದು
  • ತೆಂಗಿನ ತುರಿ – ಸ್ವಲ್ಪ
  • ಕೊತ್ತಂಬರಿ ಸೊಪ್ಪು
  • ಲಿಂಬೆಹಣ್ಣು – ಒಂದು

ಮಾಡುವ ವಿಧಾನ :
ಮೊದಲಿಗೆ ರವೆಯನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಿ. ಅವರೆಕಾಳು ಬೇಯಿಸಿ ಇಟ್ಟು ಕೊಳ್ಳಿ. ಬಾಣಲಿಗೆ ಮೂರು ಸ್ಪೂನ್ ಎಣ್ಣೆ ಹಾಕಿ ಬಿಸಿ ಆದಮೇಲೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಮೆಣಸಿನ ಕಾಯಿ, ಈರುಳ್ಳಿ, ಸಬ್ಬಸಿಗೆ ಸೊಪ್ಪು ಎಲ್ಲವನ್ನೂ ಒಂದೊ0ದಾಗಿ ಹಾಕಿ ಫ್ರೈ ಮಾಡಿಕೊಳ್ಳಿ.

ಫ್ರೈ ಆದಮೇಲೆ ಅದಕ್ಕೆ ಬೇಯಿಸಿದ ಅವರೆಕಾಳು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನೀರು ಹಾಕಿ. ಕುದಿಯಲು ಇಡಿ. ಈಗ ನೀರು ಕುದಿಯುವಾಗ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಪ್ಲೇಟ್ ಮುಚ್ಚಿ ಹತ್ತು ನಿಮಿಷ ಇಡಿ.

ಈಗ ಉಪ್ಪಿಟ್ಟು ರೆಡಿಯಾದ ಮೇಲೆ ನಿಂಬೆರಸ, 1 ಸ್ಪೂನ್ ತುಪ್ಪ , ತೆಂಗಿನತುರಿ, ಕೊತ್ತಂಬರಿ ಸೊಪ್ಪು ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡಿ. ರುಚಿಯಾದ ಅವರೆಕಾಳು ಸಬ್ಬಸಿಗೆ ಸೊಪ್ಪಿನ ಉಪ್ಪಿಟ್ಟು ರೆಡಿ.


  • ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading