ಪವಾಡ ಪುರುಷರು ಸಾಯಿಬಾಬಾ ಹಾಗೂ ರಾಯರ ಕುರಿತು ಹ ರಾ ಕೆಂಪು ಅವರ ರಚನೆಯ ಕವನವನ್ನು ತಪ್ಪದೆ ಮುಂದೆ ಓದಿ…
ಪವಾಡ
ತಿಳಿ ಮನುಜ
ಅವತರಿಸಿಹರು
ಭಕ್ತರಿಗಾಗಿ
ಪವಾಡ ಪುರುಷರು
ಸಾಯಿಬಾಬಾ ರಾಯರು
ಶ್ರೀ ಸಾಯಿಬಾಬಾ
ನೆಲೆಸಿಹರು
ಶಿರಡಿ ಕ್ಷೇತ್ರದೊಳು
ಶ್ರೀ ಸಾಯಿಬಾಬಾ
ಕಷ್ಟ ನಿವಾರಣೆಗೆ
ಪೂಜಿಸಿ ಭೃಗುವಾರ
ಗುರು
ತುಪ್ಪದ ದೀಪ
ಹಚ್ಚುತ ನೆನೆಯಿರಿ
ಮಂತ್ರಾಲಯದ
ಗುರು ರಾಘವೇಂದ್ರರ
ಆಗಲಿ ಕಷ್ಟ ದೂರ
ರುಬಾಯಿ
ಬೃಂದಾವನ
ಮಂತ್ರಾಲಯದ ಬೃಂದಾವನ
ಗುರು ರಾಯರ ತಪೋವನ
ಸಿದ್ಧಿಗಾಗಿ ತೆರಳಿ ನೀವು
ಗುರುವಾರ ಮಾಡಿ ದರ್ಶನ
ಪರಿಹಾರ
ಹೋದರೆ ಶಿರಡಿಗೆ ಭೃಗುವಾರ
ನೆಲ ಸಮ ಶತ್ರುಗಳ ಹುನ್ನಾರ
ನಿಶ್ಚಲ ಮನದಿ ಬೇಡಿಕೊಳ್ಳಲು
ಸೂಚಿಸುವರು ಬಾಬಾ ಪರಿಹಾರ
- ಹ ರಾ ಕೆಂಪು – ಬೆಂಗಳೂರು
