‘ನಮ್ಮ ರಾಜ್ಯದ ಏಕ್ಯೆಕ ಉಪ್ಪು ತಯಾರಾಗುವ ಸಾಣಿಕಟ್ಟು ಉಪ್ಪು ಕೇಂದ್ರಕ್ಕೆ ಕೆಳದಿ ಅರಸರ ಕಾಲದಲ್ಲಿ ಪ್ರೋತ್ಸಾಹವಿತ್ತು ಮತ್ತು ತೆರಿಗೆ ಇರಲಿಲ್ಲ’. – ಅರುಣ ಪ್ರಸಾದ, ತಪ್ಪದೆ ಮುಂದೆ ಓದಿ…
ಸಾಣಿಕಟ್ಟು ಉಪ್ಪು ಸದ್ಯದಲ್ಲೇ ಬರಲಿರುವ ಮಾವಿನ ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿಗಾಗಿ ಹುಡುಕಾಡಿದರೂ ಸಾಗರದಲ್ಲಿ ಇದು ಅಲಭ್ಯ. ಒಂದು ಅಂಗಡಿಯವರು ಒ0ದೆರೆಡು ದಿನ ಕಾಯಿಸಿ ತಂದು ಕೊಟ್ಟರು. ಸಾಣಿಕಟ್ಟು ಉಪ್ಪಿಗೆ ಕರ್ನಾಟಕ ಮಾತ್ರವಲ್ಲ ಗೋವಾ ರಾಜ್ಯದಲ್ಲೂ ಅಪಾರ ಬೇಡಿಕೆ ಇದೆ ಕಾರಣ ಈ ಉಪ್ಪು ಪ್ರಕೃತಿ ದತ್ತವಾದ ಭೌಗೋಳಿಕ ಪರಿಸರವನ್ನು ಬಳಸಿ ಆಘನಾಶಿನಿ ನದಿ ಅರಬ್ಬಿ ಸಮುದ್ರ ಸೇರುವ ಗೋಕರ್ಣದಲ್ಲಿ ತಯಾರು ಆಗುವುದು ಒಂದು ಕಾರಣ ಇರಬಹುದು.
ನಮ್ಮ ರಾಜ್ಯದ ಏಕ್ಯೆಕ ಉಪ್ಪು ತಯಾರಾಗುವ ಈ ಕೇಂದ್ರಕ್ಕೆ ಕೆಳದಿ ಅರಸರ ಕಾಲದಲ್ಲಿ ಪ್ರೋತ್ಸಾಹವಿತ್ತು ಮತ್ತು ತೆರಿಗೆ ಇರಲಿಲ್ಲ. ಆದರೆ ಕೆಳದಿ ಸಂಸ್ಥಾನ ಟಿಪ್ಪು ಸುಲ್ತಾನರ ಆಳ್ವಿಕೆ ವಶಕ್ಕೆ ಬಂದ ನಂತರದಲ್ಲಿ ಮೈಸೂರು ಸಂಸ್ಥಾನ ಉಪ್ಪು ಸರ್ಕಾರದ ಆದಾಯದ ಮೂಲವಾಗಿ ಕರ ವಿದಿಸಿದ ದಾಖಲೆಗಳು ಇದೆ.
1720 ರಲ್ಲಿ ಕೇವಲ 50 ಎಕರೆ ಪ್ರದೇಶದಲ್ಲಿ ಕೆಲವೇ ಕುಟುಂಬಗಳು ವಂಶ ಪಾರಂಪರ್ಯ ವೃತ್ತಿಯಾಗಿ ಗೋಕರ್ಣದ ಅಘನಾಶಿನಿ ಜಲಾನಯನ ಪ್ರದೇಶದಲ್ಲಿ ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ಉಪ್ಪು 1975ರಲ್ಲಿ ಸಮುದ್ರದ ಹಿನ್ನೀರು ಅಘನಾಶಿನಿ ನದಿಯ ಅಳಿವೆ ಮೂಲಕ ಒಳನುಸುಳುವ ಕೊಲ್ಲಿಗೆ ಗೋಕರ್ಣ ಮತ್ತು ತೊರ್ಕೆ ಗುಡ್ಡ ಜೋಡಿಸುವ ಒಂದು ಒಡ್ಡು ನಿರ್ಮಿಸಿದ್ದರಿಂದ ಉಪ್ಪು ಉತ್ಪಾದನಾ ಪ್ರದೇಶ 50 ಎಕರೆಯಿಂದ 500 ಎಕರೆಗೆ ವಿಸ್ತಾರವಾಗಿ ಈಗ ವಾರ್ಷಿಕ 15 ಸಾವಿರ ಟನ್ ಉಪ್ಪು ಉತ್ಪಾದನೆಗೆ ಕಾರಣವಾಗಿದೆ.
ಇದಕ್ಕೆ ಕಾರಣವಾದವರು ಪಾರಂಪಾರಿಕ ಉಪ್ಪು ಉತ್ಪಾದಿಸುವ ಹಿಂದುಳಿದ ನಾಡವ ನಾಯಕ ಸಮಾಜದ ಅವಿದ್ಯಾವಂತ ಹಳ್ಳಿಯ ಯುವಕ ಸಾನು ನಾಯ್ಕ,ಈತ ತನ್ನ ತಾಂತ್ರಿಕ ಕೌಶಲ್ಯದ ಯುವಕನಾಗಿದ್ದರಿಂದ ಉಪ್ಪಿನ ಘಟಕಗಳ ಮಾಲೀಕರುಗಳು ಸಾನು ನಾಯ್ಕನ ನೇತೃತ್ವದಲ್ಲಿ ಒಡ್ಡು ಕಟ್ಟಿದ್ದರಿಂದ ಸ್ಥಳಿಯ ಉಪ್ಪು ಉತ್ಪಾದನೆ ಹೆಚ್ಚಾಗಲು ಕಾರಣವಾದ ಸಾನು ನಾಯಕರ ಕೌಶಲ್ಯಕ್ಕಾಗಿ ಈ ಒಡ್ಡಿಗೆ ಸಾಣಿಕಟ್ಟು ಎಂದು ಹೆಸರಾಯಿತು. ಈ ಹೆಸರಲ್ಲೇ ಇಲ್ಲಿನ ಉಪ್ಪಿಗೆ ಸಾಣಿಕಟ್ಟು ಉಪ್ಪು ಎಂದು ಪ್ರಸಿದ್ಧಿ ಆಯಿತು.
1952 ರಲ್ಲಿ ಉಪ್ಪು ಉತ್ಪಾದಕರ ಸಹಕಾರ ಸಂಘ ನೊ೦ದಾವಣೆ ಆಯಿತು, 1993 ರಲ್ಲಿ ಸರ್ಕಾರದ ನಿಯಮಾವಳಿಯಂತೆ ಅಯೋಡಿನ್ ಯುಕ್ತ ಉಪ್ಪು ಉತ್ಪಾದಿಸುತ್ತಿದೆ.
ಈಗ 350 ಸದಸ್ಯರ ಈ ಸಾಣೆಕಟ್ಟು ಉಪ್ಪು ಉತ್ಪಾದಕರ ಸಹಕಾರ ಸಂಘ 500 ಎಕರೆ ಪ್ರದೇಶದಲ್ಲಿ 300 ಕುಟುಂಬಗಳ ಸಹಬಾಗಿತ್ವದ ಶ್ರಮದಲ್ಲಿ ವಾರ್ಷಿಕ 15 ಸಾವಿರ ಟನ್ ಉಪ್ಪು ಉತ್ಪಾದಿಸಿದರೂ ಅದರ ಬೇಡಿಕೆಯ ಗುರಿ ಮುಟ್ಟಲಾಗುತ್ತಿಲ್ಲ.
ದೇಶದಲ್ಲಿ ಗುಜರಾತ್, ತಮಿಳುನಾಡುಗಳು ಮತ್ತು ರಾಜಸ್ತಾನ ಉಪ್ಪು ಉತ್ಪಾದನೆಯಲ್ಲಿ ಮುಂದಿರುವ ರಾಜ್ಯಗಳು ಮತ್ತು ದೇಶದ ಉಪ್ಪು ಉತ್ಪಾದನೆ ಮತ್ತು ಮಾರಾಟದಲ್ಲಿ ಬಹುಪಾಲು ಹೊ೦ದಿರುವ ಟಾಟಾ ಸಾಲ್ಟ್ ಗಳ ಮಧ್ಯೆ ಕನಾ೯ಟಕದ ಸಾಣಿಕಟ್ಟು ಉಪ್ಪು ಬಹು ಬೇಡಿಕೆ ಪಡೆದಿರುವುದಕ್ಕೆ ಕಾರಣ ಕುಲಷಿತಗೊಳ್ಳದ ಅಘನಾಶಿನಿ ನದಿಯೂ ಒಂದು ಕಾರಣ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಸಂಪ್ರದಾಯಿಕ ಉಪ್ಪಿಗೆ ಜೀಯೋ ಗ್ರಾಪಿಕಲ್ ಇಂಡಿಕೇಶನ್ ಟ್ಯಾಗ್ (G I Tag ) ನೀಡಿ ಪ್ರೋತ್ಸಾಹಿಸಲು ವಿಳಂಬ ಮಾಡುತ್ತಿರುವುದು ವಿಷಾದನೀಯ ಆಗಿದೆ..
- ಅರುಣ ಪ್ರಸಾದ