‘ಮತ್ತೆ ಮತ್ತೆ ಸಾರುವುದು ಜೋಪಾನ, ಜಾತ್ರೆಯಲಿರುವ ಆಟಿಕೆಗಳಲ್ಲ ಜೀವನ…ಕವಿ ನಾರಾಯಣ ಸ್ವಾಮಿ ಅವರು ಬರೆದಿರುವ ಸುಂದರ ಸಾಲುಗಳು ಓದುಗರ ಮಡಿಲಿಗೆ, ಮುಂದೆ ಓದಿ….
ಸಂಜೆಯಾದರೊಂದು ತಲ್ಲಣ
ಹೃದಯದನ್ನೆಯಡೆಗೆ ಪಯಣ
ಮನವಾಗಿತ್ತು ಮೌನದ ತಾಣ
ಸಾಗುತಲಿರುವೆ ನೋಡುತಾ ಪಡವಣ……
ರಾತ್ರಿಯಾದರೊಂದು ಕಂಪನ
ಕನಸಿನೊಳಗೆ ಕೂಡಲು ತಲ್ಲಿನ
ಮಾತಿನೊಳಗೊಂದು ಸಾಂತ್ವನ
ಮತ್ತೆ ನಾಳೆಗೊಂದು ಆಹ್ವಾನ…..
ಮತ್ತೆ ಮತ್ತೆ ಸಾರುವುದು ಜೋಪಾನ
ಜಾತ್ರೆಯಲಿರುವ ಆಟಿಕೆಗಳಲ್ಲ ಜೀವನ
ಮತ್ತೆಷ್ಟು ದಿನ ಈಗೆ ಬದುಕುವುದು ಕಾಂಚನ
ಪ್ರೀತಿಸಿ ಕಳೆಯಲಾರವೆ ಶಾಶ್ವತವಿಲ್ಲದ ಬದುಕನ್ನ …
ಸಂತೆಯೊಳಗಿನ ಮಾರಾಟವಲ್ಲ ಈ ಬದುಕು
ಚೌಕಾಸಿಗೆ ಕೊಳ್ಳಲು ಮಾರಲು ಸರಕು
ದೇಹವನು ಮಾರಿಕೊಳ್ಳಬಹುದು ಜೀವಿಸಲಿಕ್ಕೂ
ಮನವನು ಮಾರಿಕೊಳ್ಳಬಹುದೆ? ಕ್ಷಣ ಕ್ಷಣಕ್ಕೂ….
- ನಾರಾಯಣ ಸ್ವಾಮಿ (ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಗಳು) ಮಾಲೂರು.
