ಬೆಂಕಿ ನಿಯಂತ್ರಣಕ್ಕೆ ಪರಿಸರವಾದಿಗಳ ಒತ್ತಾಯ…

‘ಅಮೆಜಾನ್ ನಂತಹ ದಟ್ಟ ಕಾಡುಗಳು ಬೆಂಕಿಗೆ ಸಿಲುಕಿ ಬೇಯುತ್ತಿರುವಾಗ ನನಗನಿಸಿದ್ದು ಇಡೀ ಪ್ರಪಂಚವೇ ಪರಿಸರದ ಕುರಿತು ಆಲೋಚಿಸುವಲ್ಲಿ ಸೋಲುತ್ತಿದೆ ಎನಿಸುತ್ತದೆ’. – ಚಿದು ಯುವ ಸಂಚಲನ, ತಪ್ಪದೆ ಮುಂದೆ ಓದಿ ಅರಣ್ಯ ಇಲಾಖೆಯು ಬೆಂಕಿಯನ್ನು ನಂದಿಸಲು ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಚಿದು ಅವರು ಹಂಚಿಕೊಂಡಿರುವ ಲೇಖನ, ತಪ್ಪದೆ ಓದಿ…

ನಮ್ಮ ಭಾಗದಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಂಭವಿಸಲು ಸಾಧ್ಯವೇ ಇಲ್ಲ. ಆದರೂ ಬೇಸಿಗೆಯಲ್ಲಿ ತಾಲೂಕಿನ ಅರಣ್ಯ ಪ್ರದೇಶಗಳಿಗೆ ಪ್ರತಿವರ್ಷವೂ ಬೆಂಕಿ ಬೀಳುವುದು ಹೆಚ್ಚು ಕಂಡುಬರುತ್ತಿದ್ದು, ಇದಕ್ಕೆ ಮೂಲ ಕಾರಣ ತಂಬಾಕು ವ್ಯಸನಿಗಳು, ಕಿಡಿಗೇಡಿಗಳು ಹಾಗೂ ನಷ್ಟದ ಅರಿವಿಲ್ಲದ ಕೆಲ ಜನರು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ 14 ಮೀಸಲು ಅರಣ್ಯ ಪ್ರದೇಶಗಳು ಸೇರಿ 20, 296 ಎಕರೆ ಅರಣ್ಯ ಪ್ರದೇಶವಿದೆ. ಮಾಕಳಿದುರ್ಗ, ಉಜ್ಜನಿ, ಮುದ್ದೇನಹಳ್ಳಿ, ಘಾಟಿ ಸುಬ್ರಹ್ಮಣ್ಯ, ಹುಲುಕುಡಿ, ದೇವರ ಬೆಟ್ಟ, ಗಂಡ್ರಗೋಳಿಪುರ ಪುರದ ಅರಣ್ಯದ ಸುತ್ತಮುತ್ತಲಿನಲ್ಲಿ, ಕಲ್ಲು ಕೋಟೆಯೂ ಸೇರಿದಂತೆ ಸುಮಾರು 5,000 ಎಕರೆ ಗಳಿಗಿಂತಲೂ ಹೆಚ್ಚು ಅರಣ್ಯ ಪ್ರದೇಶವು ಬೆಂಕಿಯಲ್ಲಿ ಸಿಲುಕಿ ಸುಟ್ಟು ಕರಕಲಾಗಿವೆ.

ಫೋಟೋ ಕೃಪೆ : tripadviso

ಅರಣ್ಯ ಇಲಾಖೆ ಬೆಂಕಿಯನ್ನು ನಂದಿಸಲು ಕೈಗೊಂಡಿರುವ ಕಾರ್ಯಕ್ರಮಗಳು :

• ಅರಣ್ಯದ ಮಧ್ಯೆಯೇ ಫೈಯರ್ ಕಂಟ್ರೋಲಿಂಗ್ ರೂಮ್ ಗಳನ್ನು ನಿರ್ಮಿಸಿರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗ್ರತ ವಾಗಿ ಅರಣ್ಯದಲ್ಲಿ ತಂಗಿದ್ದು ಬೆಂಕಿ ಕಂಡಕೂಡಲೆ ನಿಯಂತ್ರಿಸುವ ಕೆಲಸ ಮಾಡಲು ಇದು ಸಹಕಾರಿಯಾಗಿದೆ.

• ಬೆಂಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹರಡುವುದನ್ನು ತಡೆಯುವುದಕ್ಕೆ ಹಾಗೂ ಜನರು ಧೂಮಪಾನ ಮಾಡಿ ಬೀಸಾಡುವ ಸಿಗರೇಟ್‌, ಬೀಡಿಯ ಕಿಡಿಹೊತ್ತಿ ಬೆಂಕಿ ತಗಲುವ ಸಾಧ್ಯತೆಗಳೇ ಹೆಚ್ಚಿರುವುದರಿಂದ. ಅರಣ್ಯದಲ್ಲಿ ಈ ರೀತಿ ಏಕಾಏಕಿ ಉಂಟಾಗುವ ಬೆಂಕಿಯನ್ನು ತಡೆಯುವ ಅಥವಾ ದೂರದವರೆಗೆ ವ್ಯಾಪಿಸದಂತೆ ಬೆಂಕಿ ರೇಖೆ (ಫೈರ್‌ ಲೈನ್‌) ತಂತ್ರ ಬಳಕೆ ಮಾಡಲಾಗುತ್ತದೆ. ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ-ಪಕ್ಕ, ಕಾಡಿನ ಕಾಲು ದಾರಿಗಳು, ಬೆಂಕಿ ಸ್ಥಳಗಳನ್ನು ಗುರುತಿಸಿ ನಂತರ ಮೂರು ಮೀಟರ್‌ ಅಗಲದ ಅಂತರದಲ್ಲಿ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಒಣಗಿದ ಹುಲ್ಲು, ತರಗು ಗಿಡಗಳನ್ನು ಸುಟ್ಟು ನಾಶಪಡಿಸುತ್ತಾರೆ.

• ಅರಣ್ಯವನ್ನು ಬೆಂಕಿಯಿಂದ ರಕ್ಷಣೆ ಮಾಡಲು ಅಗ್ನಿಶಾಮಕ ಸಾಧನಗಳ ಜೊತೆಗೆ ಮಾನವನ ಶಕ್ತಿಯು ಸಹ ತುಂಬಾ ಮುಖ್ಯ ಆದಕಾರಣ ಅರಣ್ಯ ಇಲಾಖೆಯು ಆತ್ಮೀಯ ನಾಗರಿಕರಲ್ಲಿ ಬೆಂಕಿಯನ್ನು ಪತ್ತೆಹಚ್ಚಲು, ನಿಯಂತ್ರಿಸಲು ಹಾಗೂ ನಂದಿಸಲು ಸಹಾಯ ಮಾಡುವುದಕ್ಕೆ ಮುಂದೆ ಬಂದು ಸ್ವಯಂಸೇವಕರಾಗಿ ಈ ಮಹತ್ಕಾರ್ಯಕ್ಕೆ ಅರಣ್ಯ ಇಲಾಖೆಯ ಆಭಾರಿಯಾಗಲಿದೆ. ಹತ್ತಿರದಲ್ಲಿರುವ ಅರಣ್ಯ ಕಚೇರಿಗೆ ಭೇಟಿ ನೀಡಿ ಈ ಕೂಡಲೇ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಕರ್ನಾಟಕ ಅರಣ್ಯ ಇಲಾಖೆ ಕೇಳಿಕೊಂಡಿದ್ದೆ.

• ವಲಯ ಅರಣ್ಯ ಇಲಾಖೆ ಜಾಗೃತಿ ಬೀದಿ ನಾಟಕ ಮಾಡುವುದರಿಂದ ಜನರಲ್ಲಿ ತಿಳುವಳಿಕೆ ಜೊತೆಗೆ ಅವರ ಮನಸ್ಥಿತಿಗಳು ಬದಲಾಗುತ್ತದೆ. ಇದರಿಂದ ಗ್ರಾಮಸ್ಥರೇ ಬೆಂಕಿಯನ್ನು ನಂದಿಸುವ ಅಥವಾ ಅರಣ್ಯ ಇಲಾಖೆಯ ಗಮನಕ್ಕೆ ತರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಗಮನಕ್ಕೆ ಬರುತ್ತಿರುವುದರಿಂದ ಹೆಚ್ಚಿನ ನಷ್ಟ ಸಂಭವಿಸುವ ಮುನ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಬಹುದಾಗಿದೆ.

ಫೋಟೋ ಕೃಪೆ : tripadviso

ಕೈಗೊಂಡಿರುವ ಕ್ರಮಗಳು ಕೈಕೊಡಲು ಕಾರಣಗಳು :

• ಮೊದಲನೆಯದಾಗಿ ಅರಣ್ಯದ ವಿಸ್ತೀರ್ಣಕ್ಕೆ ತಕ್ಕಂತೆ ಇರಬೇಕಾದ ಅರಣ್ಯ ಪಾಲಕರು ಹಾಗೂ ಇದರ ಸಿಬ್ಬಂದಿಗಳ ಅತಿವ ಕೊರತೆ. ಈ ಕೊರತೆಯಿಂದ ಮಾಹಿತಿ ದೊರೆತರೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ.

• ಅರಣ್ಯ ಇಲಾಖೆಗೂ ಸಾರ್ವಜನಿಕರಿಗೂ ಇರುವ ಅಂತರದಿಂದ ಅರಣ್ಯ ಇಲಾಖೆ ಜೊತೆಗೆ ಜನರ ಸಂಪರ್ಕಗಳು ಸಹ ತುಂಬಾ ಕಡಿಮೆ. ಹಾಗಾಗಿ ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಸಹಭಾಗಿತ್ವದ ಬಗ್ಗೆ ನಾವು ಮಾತನಾಡುವುದು ಸಹ ತಪ್ಪಾಗುತ್ತದೆ.

• ಈ ದೇಶ ಅಭಿವೃದ್ಧಿಯ ಕಡೆಗೆ ಓಡುತ್ತಿದೆ ಮುತ್ತು ಹೊಸ ಯಂತ್ರೋಪಕರಣಗಳ ಬಗ್ಗೆ ಆದ್ಯತೆ ನೀಡುತ್ತಿದೆ ಆದರೆ ಪರಿಸರಕ್ಕೆ ಸಂಬಂಧಪಟ್ಟಂತೆ ಇದೇ ಕಾಳಜಿಯನ್ನು ಸರ್ಕಾರಗಳು ಆಲೋಚಿಸುವುದು ಶೋಚನೀಯ ಸಂಗತಿ. ಅರಣ್ಯ ಪ್ರದೇಶಗಳಿಗೆ ಬೆಂಕಿ ನಿಯಂತ್ರಣವಿಲ್ಲ. ತಾಲೂಕಿನ ಅರಣ್ಯ ಪ್ರದೇಶಗಳಿಗೆ ಪ್ರತಿ ವರ್ಷ ಬೆಂಕಿ ಬೀಳುತ್ತಿರುವುದು ಸಾಮಾನ್ಯ. ಬೆಂಕಿ ಬೀಳದಂತೆ ಮತ್ತು ಬೆಂಕಿ ನಿಯಂತ್ರಿಸಲು ಯಂತ್ರೋಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹೋಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿರುವ ಉದಾಹರಣೆಗಳು ಸಹ ನಮ್ಮ ಕಣ್ಣಮುಂದಿದೆ. ಅಮೆಜಾನ್ ನಂತಹ ದಟ್ಟ ಕಾಡುಗಳು ಬೆಂಕಿಗೆ ಸಿಲುಕಿ ಬೇಯುತ್ತಿರುವಾಗ ನನಗನಿಸಿದ್ದು ಇಡೀ ಪ್ರಪಂಚವೇ ಪರಿಸರದ ಕುರಿತು ಆಲೋಚಿಸುವಲ್ಲಿ ಸೋಲುತ್ತಿದೆ ಎನಿಸುತ್ತದೆ.

• ಈಗಿನ ದಿನಗಳಲ್ಲಿ ಮರ ಕಡಿಯಲು ಅನುಮತಿ ನೀಡುವುದು ಅರಣ್ಯ ಇಲಾಖೆಯ ಕೆಲಸವಾಗಿದೆ. ನನ್ನಲ್ಲಿರುವ ಅನುಮಾನವೆಂದರೆ ಅರಣ್ಯ ಇಲಾಖೆಯ ಕೆಲಸ ಅರಣ್ಯ ಸಂರಕ್ಷಣೆಗಾಗಿಯೆ ಅಥವಾ ಅರಣ್ಯದ ಅವನತಿಗೆ ಅನುಮತಿ ನೀಡುವುದೇ ಎಂದು.

• ಜೀವವೈವಿಧ್ಯತೆಗೆ ಆದ್ಯತೆ ನೀಡಿ ನಮ್ಮೆಲ್ಲಾ ಅರಣ್ಯಪ್ರದೇಶಗಳಲ್ಲಿ ಸಸ್ಯ ವೈವಿಧ್ಯತೆಯನ್ನು ನಾವು ಕಾಣಬೇಕಿದೆ ಆದರೆ ಒಟ್ಟಾರೆ ನಮ್ಮ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ನೀಲಗಿರಿ, ಅಕೇಶಿಯಾ, ಲಂಟನಾ ಆದಂತಹ ಬೇಲಿ ಗಿಡಗಳು ಇಡೀ ಅರಣ್ಯವನ್ನೇ ಆವರಿಸಿರುವುದು ಬೆಂಕಿ ಕ್ಷಣಮಾತ್ರದಲ್ಲಿ ಇಡಿ ಅರಣ್ಯಪ್ರದೇಶವನ್ನು ಸುಡಲು ಕಾರಣವಾಗುತ್ತಿದೆ. ಇದಕ್ಕೆ ಪೂರಕವಾಗಿ ಸಾರ್ವಜನಿಕರು ಅರಣ್ಯದಲ್ಲಿ ಬಿಸಾಡುವ ಕಸದ ರಾಶಿಗಳು ಸಹ ಮುಖ್ಯವಾಗಿ ಪ್ಲಾಸ್ಟಿಕ್ ನಂತಹ ವಸ್ತುಗಳು ಬೆಂಕಿಯನ್ನು ನಂದಿಸಲು ಸಹ ಆಗದಂತೆ ತಮ್ಮ ಮೇಲುಗೈ ಸಾಧಿಸುತ್ತಿದೆ.

ಅರಣ್ಯ ಇಲಾಖೆಯವರು ತಮ್ಮ ಪ್ರಾಮಾಣಿಕ ಪ್ರಯತ್ನದೊಂದಿಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಇಂತಹ ಸಮಸ್ಯೆಗಳನ್ನು ಎದುರಿಸಲಿ ಎಂದು ವಿನಂತಿಸಿಕೊಳ್ಳುತ್ತೇನೆ.
ಇದರಲ್ಲಿ ಇನ್ನೂ ಪ್ರಸ್ತಾಪಿಸಲು ತುಂಬಾ ವಿಚಾರಗಳು ಬಿಟ್ಟುಹೋಗಿವೆ ಮತ್ತೊಮ್ಮೆ ಪ್ರಸ್ತಾಪಿಸುತ್ತೇನೆ.


  • ಚಿದು ಯುವ ಸಂಚಲನ – ಪರಿಸರವಾದಿ, ಲೇಖಕರು, ದೊಡ್ಡಬಳ್ಳಾಪುರ.

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW