ಹೆಣ್ಣಿಗೆ ಸ್ಥಿರತೆ ಬೇಕು. ಆ ಸ್ಥಿರತೆಯೆಂದರೇನು? ಜೀವನದಲ್ಲಿ ಸ್ಥಿರತೆ ಇಲ್ಲದೆ ಅವಳು ಹರಿಯಲು ಸಾಧ್ಯವೇ ?. ಪರೀಕ್ಷಿತ ಗೌಡ ಅವರು ಬರೆದ ಈ ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ…
“ಸ್ತ್ರೀ ಎಂದರೆ.” ಸ್ತ್ರೀಯ ಮೂಲ ಸ್ವಭಾವವು ಅವಳು ನಿರಂತರವಾಗಿ ಹರಿಯುವುದು. ಅವಳು ಒಂದೆಡೆ ನಿಲ್ಲದೆ ನದಿಯಂತೆ ಹರಿಯಲು ಇಷ್ಟಪಡುತ್ತಾಳೆ. ಅವಳು ಹರಿಯಬೇಕು. ಕಲೆ, ಸೃಜನಶೀಲತೆ, ಸಂಗೀತ, ಸಾಹಿತ್ಯ, ನೃತ್ಯ, ಕ್ರೀಡೆ ಹೀಗೆ ಅನೇಕ ಹರಿವಿನಲ್ಲಿ ಮಾತ್ರ ಅವಳು ತನ್ನನ್ನು ತಾನು ಸಂಪೂರ್ಣವಾಗಿಸಿಕೊಳ್ಳಬಲ್ಲಳು ಮತ್ತು ಅವಳಾಗಬಹುದು.
ಹರಿಯಲು ಅವಳ ಜೀವನದಲ್ಲಿ ಒಂದು ಸ್ಥಿರತೆ ಬೇಕು, ಹರಿಯಲು ಒಂದು ಸ್ಥಿರತೆಯ ಘನಬಿಂದು ಅವಳಿಗೆ ಬೇಕು. ಅದೇ ಸ್ಥಿರತೆಯು ಘನಬಿಂದು ಅವಳ ಹರಿಯುವಿಕೆಯನ್ನು ಸಾಧ್ಯವಾಗಿಸುತ್ತದೆ. ಈ ಸ್ಥಿರತೆಯು ಬಹುತೇಕ ಅದು ಅವಳು ಆಯ್ಕೆಮಾಡಿಕೊಳ್ಳುವ ಸಂಗಾತಿ, ಉದ್ಯೋಗ, ಸ್ವಯಕೃಷಿಯ ಮೂಲಕವೂ ದೊರಕಬಹುದು. ಇಂತಹ ಸ್ಥಿರತೆಯನ್ನು ಹೊಂದಿರುವುದು ಅವಳಿಗೆ ಹರಿಯುವಿಕೆ ಸುರಕ್ಷತೆಯನ್ನು ನೀಡುತ್ತದೆ.
ಅವಳು ತನ್ನ ಸೃಜನಶೀಲತೆಯ ಮೂಲಕ ಹರಿಯುತ್ತಾಳೆ, ಜೀವನದ ಅಸೀಮ ಅಸ್ತಿತ್ವದ ಮಾಂತ್ರಿಕ ದೃಷ್ಟಿಕೋನಗಳನ್ನೇ ಸೃಷ್ಟಿಸುತ್ತಾಳೆ. ಜೀವನದಲ್ಲಿ ಸ್ಥಿರತೆ ಇಲ್ಲದೆ ಅವಳು ಹರಿಯುವ ಸಾಧ್ಯತೆ ಬಹಳ ಕಡಿಮೆ, ಸ್ತ್ರೀ ಶಕ್ತಿಯಾದ ಅವಳು ತನ್ನ ಸ್ಥಿರತೆಯನ್ನು ಕಂಡುಕೊಂಡ ತಕ್ಷಣ – ಎಲ್ಲಾ ಗಡಿಗಳು, ಚೌಕಟ್ಟು, ಕಟ್ಟುಪಾಡು, ನಿರ್ಬಂಧದ ಮಿತಿಗಳನ್ನು ದಾಟಿ ತನ್ನಂತೆ ತಾ ಅವಳು ಹರಿಯವುದು ಸಾಧ್ಯವಾಗಿಸಿಕೊಳ್ಳುತ್ತಾಳೆ. ಅವಳ ಹರಿಯುವಿಕೆಯನ್ನು ನೋಡುವುದೇ ಇಲ್ಲಿ ಹೆಮ್ಮೆಯ ವಿಷಯವಾಗಿದೆ.
- ಪರೀಕ್ಷಿತ ಗೌಡ
