ಒಂದಷ್ಟು ಆಶಯಗಳನ್ನು ಹೊತ್ತು ತಂದ ಸಿಂಹದ ಹಾದಿ ಟೆಲಿಚಿತ್ರ

ನಾವು ಮಾಡುವ ಸಹಾಯ ಮತ್ತೊಬ್ಬರಿಗೆ ತಿಳಿಯಬಾರದು ಅದು ಯಾರಿಗೆ ಸೇರಬೇಕೋ ಅವರಿಗೆ ಸರಿಯಾದ ಸಮಯಕ್ಕೆ ಸೇರಬೇಕು ಈ ಮಾತು ಸಿಂಹದ ಹಾದಿ ಟೆಲಿ ಚಿತ್ರಧಲ್ಲಿ ವಿಷ್ಣುವರ್ಧನ್ ನಂಬಿದ್ದ ಆಶಯವನ್ನು ಪ್ರಾರ್ಥನಾ ಹೇಳುವ ಮಾತು.ಈ ಸಿನಿಮಾದ ಕುರಿತು ಕವಿ, ವಕೀಲರಾದ ನಾರಾಯಣಸ್ವಾಮಿ (ನಾನಿ) ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಟೆಲಿ ಚಿತ್ರ : ಸಿಂಹದ ಹಾದಿ
ನಿರ್ದೇಶನ : ಜಿ ಕೆ ಶಶಿರಾಜ್ ದೊರೆ
ನಿರ್ಮಾಪಕರು : ವೀರಕಪುತ್ರ ಶ್ರೀನಿವಾಸ
ತಾರಾಗಣ : ಸಾಯಿ ಜ್ಯೋತಿ , ಸವಿತಕ್ಕ, ಪಲ್ಲವಿ ರಾವ್ ಮುಂತಾದವರು.

ನಾನು ಸಿನಿಮಾ ನೋಡಿ ಸುಮಾರು ಇಪ್ಪತ್ತು ವರುಷಗಳು ಕಳೆದಿರಬಹುದೇನೋ… ಬಹಳಷ್ಟು ಸಿನಿಮಾ ನೋಡುವ ಹುಚ್ಚು ಮೊದಲಿನಿಂದಲೂ ಇತ್ತು ಅದರೆ ಬೆಂಗಳೂರು ಜೀವನದ ಬದುಕಿನ ಹೋರಾಟದಲ್ಲಿ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವುದಾಗಲಿ ಟಿವಿಯ ಪರದೆಯ ಮೇಲೆ ನೋಡುವುದಾಗಲಿ ಇತ್ತೀಚೆಗೆ ಮರೀಚಿಕೆಯಾಯಿತು ಎನ್ನಬಹುದು. ಈ ಮಾಯಲೋಕವೆಂಬ ಮೊಬೈಲ್ ಹಲವಾರು ಹವ್ಯಾಸಗಳನ್ನು ತೊರೆಯಿಸಿ ತನ್ನಲ್ಲಿ ಬಂಧಿಯಾಗಿಸಿ ಬಿಟ್ಟಿದೆ.

ಸುಮಾರು ನಲವತ್ತ ಒಂಭತ್ತು ನಿಮಿಷ ಮೊಬೈಲ್ ನಲ್ಲಿ ಟೆಲಿ ಸಿನಿಮಾ ನೋಡಿದ್ದು ಜೀವನದಲ್ಲಿ ಇದೇ ಮೊದಲು. ನಾನು ಸಿನಿಮಾ ನೋಡಿದ ಉದ್ದೇಶ ಸಿಂಹದ ಹಾದಿ ಎಂಬ ಹೆಸರು ನನ್ನನ್ನು ಆರ್ಕಷಿತು. ಸುಮಾರು ಮೂಕ್ಕಾಲು ಗಂಟೆಗೂ ಹೆಚ್ಚಿನ ಸಮಯವಿರುವ ಈ ಟೆಲಿ ಚಿತ್ರ ನೋಡುವಾಗ ಸಮಯ ಕಳೆಯುವುದು ತಿಳಿಯುವುದಿಲ್ಲ. ಯಾಕೆಂದರೆ ಈ ಚಿತ್ರದಲ್ಲಿ ಕನ್ನಡದ ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ರವರು ಹೊಂದಿದ್ದ ಆಶಯಗಳು ಹಲವು ಹಲವರಿಗೆ ನೀಡದ ಸಹಾಯ ಹಸ್ತ ಅದರಿಂದ ಅವರು ಬದುಕು ಕಟ್ಟಿಕೊಂಡು ಅವರು ದೇವರಾಗಿ ಪೂಜಿಸುವ ಚಿತ್ರಕಥೆ ಸೊಗಸಾಗಿ ಮೂಡಿಬಂದಿದೆ. ಆರಂಭದಲ್ಲಿ ನೃತ್ಯ ಶಿಕ್ಷಕಿ ಮಕ್ಕಳನ್ನು ನೃತ್ಯ ಸ್ವರ್ಧೆಗೆ ತಯಾರು ಮಾಡುವಾಗ, ಆ ಮಕ್ಕಳು ಶಿಕ್ಷಕಿಯು ನಿರಿಕ್ಷೆ ಮಾಡುವ ಮಟ್ಟದಲ್ಲಿ ಇರುವುದಿಲ್ಲ. ನೀವು ರೀತಿಯಲ್ಲಿ ಗಮನವಿಟ್ಟು ಕಲಿಯದಿದ್ದರೆ ನಾವು ಸ್ವರ್ಧೆಯಲ್ಲಿ ಗೆಲ್ಲುವುದು ಹೇಗೆ ಅಂದಾಗ, ಆ ನೃತ್ಯ ತಂಡದ ನಾಯಕಿ ಮಾನಸಿಕವಾಗಿ ನೊಂದಿರುವ ವಿಷಯ ತಿಳಿದಾಗ ಶಿಕ್ಷಕಿಯು ಪ್ರಾರ್ಥನಾ ಎಂಬ ಹುಡುಗಿಯು ಜೀವನ ಚರಿತೆಯನ್ನು ಕಥೆಯಾಗಿ ಹೇಳಿ ಆ ಹೆಣ್ಣುಮಕ್ಕಳಲ್ಲಿ ಉತ್ಸಾಹ ತುಂಬುವ ಶಿಕ್ಷಕಿಯ ಪಾತ್ರ ಸೊಗಸಾಗಿ ಮೂಡಿ ಬಂದಿದೆ. ನಂತರ ಪ್ರಾರ್ಥನಾ ವಿಷ್ಣುವರ್ಧನ್ ಅಭಿಮಾನಿಯಾದ ತಮಿಳು ಭಾಷೆಯ ಮಂಗಳ ಮುಖಿಯನ್ನು ಪ್ರೋಟೊಗ್ರಾಪರ್ ಅಗಿ ನೇಮಿಸಿಕೊಂಡು ದಟ್ಟವಾದ ಕಾಡಿನಲ್ಲಿ ಸಂಜು ರವರ ಮನೆಯನ್ನು ಹುಡುಕಿ ಕಾಡಿಗೆ ಹೊರಡುವುದು, ದಾರಿಯಲ್ಲಿ ಬಹಳಷ್ಟು ಜನರನ್ನು ಸಂಜುವಿನ ಮನೆಯ ವಿಳಾಸ ಕೇಳಿದಾಗ ಯಾರು ತಿಳಿಸುವುದಿಲ್ಲ ನಂತರದಲ್ಲಿ ಅ ದಾರಿಯಲ್ಲಿ ಒಬ್ಬ ಭಗ್ನ ಪೇಮಿ ಇವರಿಗೆ ಸಿಗುವುದು ನಂತರದಲ್ಲಿ ಮತ್ತೊಬ್ಬ ಬಂದು ಅವನನ್ನು ಓಡಿಸಿ ಸಂಜು ಮನೆಯನ್ನು ತೋರಿಸುವುದು.

ಸಂಜು ಮನೆಯನ್ನು ಸೇರಿದಾಗ ಅವರ ತಾಯಿ ವಿಷ್ಣುವರ್ಧನ್ ರನ್ನು ಗುರುವಾಗಿ ದೈವಾಗಿ ಪೋಟೋ ಇಟ್ಟು ಆರಾಧಿಸುತ್ತಿರುವುದನ್ನು ಕುತೂಹಲದಿಂದ ಕಂಡು ಕೇಳಿದಾಗ ಅವರು ವಿಷ್ಣುವರ್ಧನ್ ರವರು ಮಾಡಿದ ಸಹಾಯದಿಂದ ಮಗ ಸೈನಿಕನಾಗಿ ಸೇರಿದ್ದನ್ನು ಮತ್ತು ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿರುವಾಗ ತನ್ನ ತಾಯಿಗೆ ಬರೆದ ಪತ್ರವನ್ನು ಓದುವುದು ನಂತರದಲ್ಲಿ ಸಂಜು ವೀರ ಮರಣವನ್ನು ಅಪ್ಪಿರುವ ವಿಷಯ ತಿಳಿದು ಪ್ರಾರ್ಥನಾ ಅವರ ತಾಯಿಗೆ ಗೊತ್ತಾಗದ ರೀತಿಯಲ್ಲಿ ಸಹಾಯ ಮಾಡುವುದು. ನಂತರದ ಪ್ರಾರ್ಥನಾ ಮತ್ತು ಪೋಟೋಗ್ರಾಪರ್ ಗೆ ನಡುವೆ ಮನಸ್ತಾಪವಾಗಿ ನಂತರ ಪರಿಹರಿಸಿಕೊಂಡು ಸ್ನೇಹಿತರಾಗಿ ಕಾಡಿನಿಂದ ವಾಪಸ್ ಆಗುವುದು ನಂತರದಲ್ಲಿ ಪ್ರಾರ್ಥನಾ ವಿಷ್ಣುವರ್ಧನ್ ರವರ ಬಗ್ಗೆ ಅಪ್ಪಾಜಿ ಎಂಬ ಪುಸ್ತಕ ಬರೆಯುವುದು. ಆ ಪುಸ್ತಕವನ್ನು ಸಂಜು ತಾಯಿ ಮತ್ತು ಸಂಜು ಮನೆಯನ್ನು ತೋರಿದ ಮತ್ತು ತನ್ನ ಸಂಶೋಧನೆಗೆ ಪ್ರೋಟೋಗ್ರಾಪರ್ ಆಗಿದ್ದ ಮಂಗಳ ಮುಖಿ ಇವರಿಂದ ವಿಷ್ಣುದಾದ ರವರ ಸಮಾಧಿಯ ಸ್ಥಳದಲ್ಲಿ ಪುಸ್ತಕ ಬಿಡುಗಡೆ ಮಾಡಿ ಖುಷಿ ಪಡುವುದು ಮುಂತಾದ ಉತ್ತಮ ವಿಷಯಗಳ ನಿರೂಪಣೆಯಿಂದ ಈ ಟೆಲಿ ಚಿತ್ರ ಆತ್ಯುತ್ತಮ ಚಿತ್ರವಾಗಿ ಮೂಡಿ ಬಂದಿದೆ. ಸಂಜುವಿನ ತಾಯಿಯ ಪಾತ್ರದಲ್ಲಿ ನಟಿಸಿರುವ ಸವಿತಕ್ಕನ ನೋಡಿ ಖುಷಿ ಅಯಿತು ಮತ್ತು ಮಧ್ಯ ಮಧ್ಯ ಬರುವ ಹಾಡುಗಳು ಕೂಡ ಮನಸ್ಸು ಸೆಳೆದು ಮನಸ್ಸಿಗೆ ಮುದವೀಡುತ್ತವೆ. ಯಾವುದೇ ಸಿನಿಮಾಗೆ ಕಡಿಮೆ ಇಲ್ಲದಂತೆ ಈ ಟೆಲಿಚಿತ್ರ ಅದ್ದೂರಿಯಾಗಿ ಚಿತ್ರಿಕರಣವನ್ನು ಮಾಡಲಾಗಿದೆ. ಸುಂದರವಾದ ಕಾಡು, ಮಾತುಗಳ ಸ್ವಷ್ಠಿಕರಣ ಸೊಗಸಾಗಿದ್ದು ಬಹಳಷ್ಟು ರಾಷ್ಟ್ರಿಯ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಈ ಟೆಲಿಚಿತ್ರ ಮನೆಮಂದಿಯೆಲ್ಲಾ ಕುಳಿತು ಸಿನಿಮಾ ನೋಡುವ ಕಾಲವೇ ಮುಗಿದು ಹೋಗಿರುವ ಈ ಕಾಲಘಟ್ಟದಲ್ಲಿ ಎಲ್ಲಾರೂ ಕೂಡಿ ಸಿನಿಮಾ ನೋಡುವ, ಒಂದಷ್ಟು ಸಮಯ ಮನಸ್ಸಿಗೆ ಮುದ ನೀಡುವ ಇಂತಹ ಚಿತ್ರಗಳು ಇನ್ನಷ್ಟು ಬರಲಿ ಎನ್ನುವ ಆಶಯ ಭಾವ ನನ್ನದು.


  • ನಾರಾಯಣಸ್ವಾಮಿ (ನಾನಿ) – ವಕೀಲರು ಮತ್ತು ಲೇಖಕರು, ಬಂಡಹಟ್ಟಿ ಮಾಸ್ತಿ ಕೋಲಾರ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading