ಅಂಟುವಾಳ (ನೊರೆ ಕಾಯಿ)

ಅಂಟುವಾಳ ಕಾಯಿಗಳನ್ನು ಬೇರ್ಪಡಿಸಿ ಸಿಪ್ಪೆಗಳನ್ನು ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಮುಲಾಮು ತಯಾರಿಸಿ ಚರ್ಮಕ್ಕೆ ಹಚ್ಚಿದರೆ ಚರ್ಮರೋಗ ಗುಣವಾಗುವುದು. ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಅಂಟುವಾಳ ಕಾಯಿಯ ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅಂಟುವಾಳ ಕಾಯಿ ಎಲ್ಲರಿಗೂ ಚಿರಪರಿಚಿತ. ಪ್ರಾಚೀನ ಕಾಲದಿಂದಲೂ ಬಟ್ಟೆ ತೊಳೆಯಲು ಹಾಗೂ ಬೆಳ್ಳಿ ಆಭರಣಗಳನ್ನು ತೊಳೆಯಲು ಬಳಸುತ್ತಿದ್ದಾರೆ. ಇದಲ್ಲದೇ ಸೀಗೆ ಕಾಯಿ ನೆಲ್ಲಿಕಾಯಿ ಅಂಟುವಾಳ ಕಾಯಿ ಸೇರಿಸಿ ಶಾಂಪೂ ತರಹ ಬಳಸುತ್ತಾರೆ. ಸಾಬೂನು ಮತ್ತು ಶಾಂಪೂ ತಯಾರಿಕೆಯಲ್ಲಿ ಕೂಡ ಬಳಸುತ್ತಾರೆ. ಪಾರಂಪರಿಕ ಚಿಕಿತ್ಸೆಗಳಲ್ಲಿ ವಿಷಾಹಾರ ಸೇವಿಸಿದಾಗ ವಾಂತಿ ಮಾಡಿಸಲು ಇತರೆ ಕಾಯಿಲೆ ಗಳಿಗೆ ಉಪಯೋಗಿಸುತ್ತಾರೆ.

 

  • ಈ ಕಾಯಿಯನ್ನು ತೇಯ್ದು ವಾಸನೆಯನ್ನು ಆಘ್ರಾಣಿ ಸುವ ಮಾತ್ರದಿಂದ ದಮ್ಮು ನಿವಾರಣೆಯಾಗುತ್ತದೆ.
  • ಕಾಯಿ ಒಳಗಿನ ಭಾಗವನ್ನು ಬೆಲ್ಲ ಸೇರಿಸಿ ಅರ್ಧ ಗ್ರಾಂ ನಷ್ಟು ಸೇವಿಸಿದರೆ ಬಾಯಿಯ ಅರುಚಿ ನಿವಾರಣೆಯಾಗುತ್ತದೆ.
  • ಅರ್ಧ ತಲೆ ನೋವಿಗೆ ಅಂಟುವಾಳ ಕಾಯಿ ಹಾಗೂ ಎರಡು ಕರಿ ಮೆಣಸು ನೀರಿನಲ್ಲಿ ತೇಯ್ದು ನಾಲೈದು ಹನಿ ಮೂಗಿನಲ್ಲಿ ಹಾಕಬಹುದು.
  • ಹಲ್ಲು ನೋವಿಗೆ ಅಂಟುವಾಳ ಕಾಯಿಗಳನ್ನು ಹೆಂಚಿನ ಮೇಲೆ ಕರಕಾಗುವಂತೆ ಹುರಿದು, ಪಟಕ ಬೆರೆಸಿ ನಯವಾದ ಚೂರ್ಣ ಮಾಡಿ ಹಲ್ಲುಗಳ ಮೇಲೆ ಉಜ್ಜಬೇಕು.
  • ಚೇಳು ಕಚ್ಚಿದಾಗ ಕಾಯಿಯನ್ನು ತೇಯ್ದು ಕಚ್ಚಿದ ಜಾಗದಲ್ಲಿ ಹಚ್ಚಿ, ತೇಯ್ದ ಗಂಧವನ್ನು ಕಣ್ಣುಗಳಿಗೆ ಅಂಜನದಂತೆ ಹಚ್ಚಬೇಕು.
  • ಚರ್ಮರೋಗಗಳಿಗೆ ಬೀಜಗಳನ್ನು ಬೇರ್ಪಡಿಸಿ, ಸಿಪ್ಪೆಗಳನ್ನು ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಮುಲಾಮು ತಯಾರಿಸಿ ಹಚ್ಚಿದರೆ ಗುಣವಾಗುವುದು.
  • ಬೇರನ್ನು ಯಾವುದೇ ಹಾವು ಕಡಿದಾಗ ನಿಂಬೆ ರಸ ಅಥವಾ ಗೋಮೂತ್ರದಲ್ಲಿ ತೈದು ಹಚ್ಚಿ ಮತ್ತು ಹೊಟ್ಟೆಗೆ ತೆಗೆದುಕೊಂಡರೆ ನಂಜು ನೀವಾರಣೆ ಆಗುತ್ತದೆ. ⁠
  • ಅಂಟುವಾಳ ಕಾಯಿ/ ಸೀಗೆ ಕಾಯಿ/ ನೆಲ್ಲಿ ಕಾಯಿ, ಈ ಮೂರೂ ಕಾಯಿಗಳ ಮಿಶ್ರಣದಿಂದ ಕೂದಲು ತೊಳೆಯುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ಹಾಗೂ ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿ ಯಾಗಿದೆ.
  • ಅಂಟ್ವಾಳದ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ತೆಗೆದು ಬಿಳಿ ಬಟ್ಟೆಗೆ ಹಚ್ಚಿ ಒಣಗಿಸಬೇಕು. ಹೀಗೆ 15 ಅಥವಾ 20 ದಿನಗಳವರೆಗೆ ಪ್ರತಿದಿನ ಒಣಗಿಸಿ ತಯಾರಿಸಿದ ಬಟ್ಟೆಯನ್ನು ನೀಟಾಗಿ ಸುತ್ತಿ ಇಟ್ಟುಕೊಂಡು ಗೊಣ್ಣೆ ಹೆಚ್ಚಾದಾಗ ಮೂಗಿಗೆ ನೀರಿನಲ್ಲಿ ನೆನೆಸಿ ಎರಡರಿಂದ ಮೂರು ಡ್ರಾಪ್ ಬಿಡುವುದರಿಂದ ಬೇಗನೆ ನಿವಾರಣೆ ಆಗುತ್ತದೆ.
  • ನಾನು ತಯಾರಿಸುವ ಸೋಪ್ನಲ್ಲಿ ನೊರೆಗಾಗಿ ಅಂಟವಾಳ ಹಣ್ಣಿನ ಒಳಗಡೆ ಇರುವ ಪಲ್ಪ್ ತೆಗೆದು ಉಪಯೋಗಿಸುತ್ತೇನೆ.

ವಿಶೇಷ ಸೂಚನೆ : ಅಂಟುವಾಳ ಕಾಯಿಯನ್ನು ನೇರವಾಗಿ ಒಂದನ್ನೇ ಉಪಯೋಗಿಸಿದರೆ ಕೂದಲು ಒರಟಾಗುತ್ತದೆ ಮತ್ತು ಬೇಗನೆ ಹಣ್ಣಾಗುತ್ತದೆ. ಅಂಟುವಾಳದ ಯಾವುದೇ ಔಷಧಿಯನ್ನು ತಯಾರಿಸುವಾಗ ಎಚ್ಚರಿಕೆ ಇರಲಿ ಇದರಿಂದ ವಾಂತಿ ಮತ್ತು ಅತಿಸಾರ ಭೇದಿ ಆಗುವ ಸಾಧ್ಯತೆ ಇದೆ.

ಇದಲ್ಲದೇ ಇನ್ನೂ ಹಲವಾರು ಕಾಯಿಲೆಗಳಿಗೆ ಈ ಅಂಟುವಾಳ ಕಾಯಿ ಹಿಂದಿನಿಂದಲೂ ಮನೆ ಮದ್ದಾಗಿ ಬಳಕೆಯಲ್ಲಿದೆ.


  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading