ಸೋಯಾ ಚಂಕ್ಸ್ ಬಿರ್ಯಾನಿ ಮಾಡುವುದು ಹೇಗೆ ಎನ್ನುವುದು ನಳಪಾಕ ಪ್ರವೀಣೆ ಹೇಮಾವತಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮನೆಯಲ್ಲಿ ಮಾಡಿ ನೋಡಿ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ…
ಅಕ್ಕಿಯನ್ನು ತೊಳೆದು ಹತ್ತು ನಿಮಿಷ ನೆನಿಸಿಡಿ.

ಬೇಕಾಗುವ ಸಾಮಗ್ರಿಗಳು :
ತೆಂಗಿನಕಾಯಿತುರಿ – ಒಂದು ಸಣ್ಣ ಕಪ್
ಚಕ್ಕೆ – ಒಂದು ಇಂಚು
ಲವಂಗ – 2-3 ,
ಶುಂಠಿ – 1 ಇಂಚು
ಬೆಳ್ಳುಳ್ಳಿ ಎಸಳು – 4-5
ಗಸಗಸೆ – 1 ಚಮಚ
ಪುದಿನಾ ಮತ್ತು ಕೊತ್ತಂಬರಿ ಸೊಪ್ಪು – 2 ಚಮಚ
ಮೇಲೆ ಹೇಳಿದ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಚನ್ನಾಗಿ ರುಬ್ಬಿ ಸಣ್ಣ ಮಾಡಿಟ್ಟುಕೊಳ್ಳಿ.
ಮಾಡುವ ವಿಧಾನ :
ಕುಕ್ಕರ್ ಗೆ 2 ಚಮಚ ಎಣ್ಣೆ, 1 ಚಮಚ ತುಪ್ಪ ಹಾಕಿ 2 ಏಲಕ್ಕಿ,1 ದೊಡ್ಡ ಪಲಾವ್ ಎಲೆ, ಮೂರು ಸೀಳಿದ ಹಸಿಮೆಣಸಿನಕಾಯಿ ಹಾಕಿ ಹುರಿದು, ರುಬ್ಬಿದ ಮಿಶ್ರಣ ಹಾಕಿ ಇದಕ್ಕೆ ತೊಳೆದು ನೆನೆಸಿಟ್ಟುಕೊಂಡಿದ್ದ ಅಕ್ಕಿ, ರುಚಿಗೆ ತಕ್ಕಂತೆ ಉಪ್ಪು,1 ಚಮಚ ಕಸೂರಿ ಮೇತಿ ಮತ್ತು ನೀರಲ್ಲಿ ನೆನೆಸಿ ಹಿಂಡಿ ತೆಗೆದ ಸೋಯಾ ಚುಂಕ್ಸ್ ಹಾಕಿ , ಅರ್ಧ ಹೋಳು ನಿಂಬೆರಸ ಹಿಂಡಿ ಎರಡು ವಿಷಲ್ ಕೂಗಿಸಿ. ಆಗ ಆಯ್ತು ನೋಡಿ ಘಮ ಘಮ ಹಾಗೂ ರುಚಿಕರ ಸೋಯಾ ಚಂಕ್ಸ್ ಬಿರ್ಯಾನಿ ರೆಡಿ.
- ಕೈಚಳಕ : ಹೇಮಾವತಿ
