ನಮ್ಮಲ್ಲಿ ಎಲ್ಲಾ ತರಕಾರಿ ಅಂಗಡಿಯಲ್ಲಿ ಸಿಗುವ ಹೀರೇಕಾಯಿಗಿಂತ ತುಪ್ಪದ ಹೀರೇಕಾಯಿ ವಿಭಿನ್ನವಾಗಿರುತ್ತದೆ ಮತ್ತು ಅದರ ಔಷಧೀಯ ಗುಣಗಳ ಕುರಿತು ಮಂಜುನಾಥ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ತುಪ್ಪದ ಹೀರೇಕಾಯಿ / ತುಪ್ಪಿರೇಕಾಯಿ / ಬೋಡು ಹೀರೇಕಾಯಿ. ಇಂಗ್ಲಿಷ್ ನಲ್ಲಿ Sponge Gourd ಎಂದು ಕರೆಯಲ್ಪಡುವ ಇದನ್ನು ಎಲ್ಲೆಡೆ Lufa ಎಂದು ಸಹಾ ಕರೆಯುತ್ತಾರೆ. ಸಸ್ಯಶಾಸ್ತ್ರೀಯವಾಗಿ Cucurbitaceae ಕುಟುಂಬಕ್ಕೆ ಸೇರಿದ ವರ್ಷ ಪೂರ್ತಿ ಫಲ ಕೊಡುವ ಬಳ್ಳಿ. ನಮ್ಮಲ್ಲಿ ಎಲ್ಲಾ ತರಕಾರಿ ಅಂಗಡಿಯಲ್ಲಿ ಸಿಗುವ ಹೀರೇಕಾಯಿಗಿಂತ ( Ridge gourd ) ಇದು ವಿಭಿನ್ನ. ಇದರ ಮೇಲ್ಮೈ ಪೂರ್ತಿ ಬೋಡು.
ಸಸ್ಯ ಶಾಸ್ತ್ರದ ಪ್ರಕಾರ ಇದು ಒಂದು ಹಣ್ಣು, ತರಕಾರಿ ಪ್ರಕಾರಕ್ಕೆ ಸೇರುವುದಿಲ್ಲ. ಅಧಿಕ ನಾರಿನಂಶದ ಜೊತೆ Vitamin A ಮತ್ತು C ಹೇರಳವಾಗಿದೆ.
ಇದರ ಕೆಲವು ಔಷಧೀಯ ಗುಣಗಳು ಹೀಗಿವೆ. ಇದು ಅತ್ಯುತ್ತಮ ರಕ್ತ ಶುದ್ಧಿಕಾರಕ. ರಕ್ತದಲ್ಲಿರುವ toxins ಗಳನ್ನು ಹೊರಹಾಕಿ ರಕ್ತವನ್ನು ಶುದ್ಧಿಮಾಡುತ್ತದೆ. ರಕ್ತ ಕೆಟ್ಟಿದ್ದರೆ ಇದರ ಸೇವನೆಯಿಂದ ರಕ್ತ ಶುದ್ಧವಾಗುವುದು.
ಫೋಟೋ ಕೃಪೆ : google
ಇದರಲ್ಲಿ ಸಾಕಷ್ಟು Insulin ಅಂಶ ಇರುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಸ ಹಾಗೂ ಹಣ್ಣಿನ ಸೇವನೆ ಒಳ್ಳೆಯದು. ಅಜೀರ್ಣ ಆದಾಗ ಹೊಟ್ಟೆಯ ಉಬ್ಬರವನ್ನು ಸಮ ಸ್ಥಿತಿಗೆ ತಂದು, ಜೀರ್ಣ ಶಕ್ತಿ ಹೆಚ್ಚು ಮಾಡುತ್ತೆ. ನಾರಿನ ಅಂಶ ಅತೀ ಹೆಚ್ಚು ಇರುವುದರಿಂದ ಮಲಬದ್ಧತೆ ( constipation ) ಆಗುವುದಿಲ್ಲ. Piles / Fistula ತೊಂದರೆ ಕಮ್ಮಿಯಾಗುತ್ತೆ.
ಕೆಟ್ಟ ಕೊಬ್ಬನ್ನು ( bad cholesterol ) ಕರಗಿಸುವ ಗುಣ ಇರುವುದರಿಂದ, ಹೃದಯದ ಆರೋಗ್ಯಕ್ಕೆ ಉತ್ತಮ. ಅಲ್ಲದೆ ಬೊಜ್ಜು ನಿವಾರಕ. ರಸದ ಸೇವನೆಯಿಂದ ಅಧಿಕವಾದ ಬೊಜ್ಜು ಕರಗಿ ತೂಕ ಸಾಕಷ್ಟು ಕಡಿಮೆಯಾಗುತ್ತದೆ.
ಇದರ ರಸದ ಸೇವನೆಯಿಂದ ಕಾಮಾಲೆ ( Jaundice ) ನಿವಾರಣೆಯಾಗಿ, ಪಿತ್ತಕೋಶ – Liver – ಸಹಜ ಸ್ಥಿತಿಗೆ ಬರುತ್ತೆ. Hepatitis ವಾಸಿಯಾಗುತ್ತೆ..
ಇದು ತಂಪುಕಾರಕವಾದ್ದರಿಂದ, ದೇಹದ ಉಷ್ಣ ಜಾಸ್ತಿಯಾಗಿದ್ದಲ್ಲಿ ಅಂದರೆ ಮಲದಲ್ಲಿ ರಕ್ತ ಹೋಗುವುದು, piles, fistula, ಕಣ್ಣು ಹಾಗೂ ಪಾದಗಳಲ್ಲಿ ಉರಿ ಇತ್ಯಾದಿ ನಿವಾರಣೆಯಾಗಿ ದೇಹ ಸಹಜ ಸ್ಥಿತಿಗೆ ಬರುವುದು. ಉರಿಮೂತ್ರ, ಮೂತ್ರನಾಳದ ಸೋಂಕು, ಮೂತ್ರ ವಿಸರ್ಜನೆ ಸರಿಯಾಗಿ ಆಗದಿರುವುದು ಇತ್ಯಾದಿ ತೊಂದರೆಗಳಿಗೆ ತುಪ್ಪದ ಹೀರೇಕಾಯಿಯ ನಿಯಮಿತ ಸೇವನೆ ಉತ್ತಮ ಹಾಗೂ ಆರೋಗ್ಯಕರ ಪರಿಹಾರ.
ತುಪ್ಪದ ಹೀರೇಕಾಯಿಯ ಪಲ್ಯ, ಸಾಂಬಾರ್, ಗೊಜ್ಜು, ಪಪ್ಪು ಇತ್ಯಾದಿ ಮನೆಯಲ್ಲಿ ಮಾಡಿ ಸೇವಿಸಿ. ಬೋಂಡ, ಬಜ್ಜಿ ಕೂಡ ರುಚಿಯಾಗಿರುತ್ತೆ. ಇದರ ಸಿಪ್ಪೆಯನ್ನು ಮೆಣಸಿನಕಾಯಿ ಜೊತೆ ಹುರಿದುಕೊಂಡು, ತೆಂಗಿನ ತುರಿ ಹಾಕಿ ಚಟ್ನಿ ಮಾಡಬಹುದು. ಈ ಚಟ್ನಿಗೆ ಮೊಸರು ಅಥವಾ ಗಟ್ಟಿ ಮಜ್ಜಿಗೆಯನ್ನು ಬೆರೆಸಿ ಒಗ್ಗರಣೆ ಹಾಕಿದರೆ ತಂಬುಳಿ ರೆಡಿ. ಚಟ್ನಿಯನ್ನು ಇಡ್ಲಿ ದೋಸೆ ಚಪಾತಿ ಅಲ್ಲದೆ ಅನ್ನದ ಜೊತೆ ಸಹ ತಿನ್ನಬಹುದು.
ಒಳ್ಳೆಯ ತುಪ್ಪ ಹಾಕಿ ಮಾಡಿದ ಹಲ್ವಾ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಉಣಗಿಸಿ ಬರುವ ನಾರಿನಿಂದ ಸ್ನಾನ ಮಾಡುವಾಗ ದೇಹವನ್ನು ಉಜ್ಜಿಕೊಳ್ಳುವುದರಿಂದ ಚರ್ಮದ ಮೇಲ್ಪದರದ ಸತ್ತ ಕೋಶಗಳು ಹೋಗಿ ಹೊಸದಾದ ಆರೋಗ್ಯವಂತ ಹೊಸ ಚರ್ಮ ಬರಲು ಸಹಾಯಕ. ಪಾತ್ರೆಗಳನ್ನು ತೊಳೆಯಲೂ ಉಪಯೋಗಿಸಬಹುದು.
ಬೆಂಗಳೂರಿನಂತ city ಯಲ್ಲಿ ತುಪ್ಪದ ಹೀರೇಕಾಯಿ ಸಿಗುವುದು ಬಹಳ ಅಪರೂಪ. ಹಾಗಾಗಿ ಸಾಧ್ಯವಾದಷ್ಟು ಮನೆಯಲ್ಲಿ ಬೆಳೆದುಕೊಳ್ಳಿ. Pot ನಲ್ಲಿ ಸಹಾ ಬೆಳೆಸಬಹುದು. ಬೀಜಗಳು ಗಾಂಧಿನಗರದ ಹಲವು ಅಂಗಡಿಗಳಲ್ಲಿ ಸಿಗುತ್ತೆ.
- ಮಂಜುನಾಥ್ ಪ್ರಸಾದ್