ಚೆನ್ನಾಗಿರಿಯ ಬೆಟ್ಟದ ಬಂಡೆಗಳು ಒಂದೊಂದು ಒಂದು ಕತೆಗಳನ್ನ ಹೇಳುತ್ತಾ ಹೋಗುತ್ತದೆ, ಪರಿಸರವಾದಿ ಚಿದು ಯುವ ಸಂಚಲನ ಅವರು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಅವುಗಳನ್ನು ಸೆರೆ ಹಿಡಿದು ಪ್ರಕೃತಿ ಪ್ರಿಯರ ಮಡಿಲಿಗೆ ಹಾಕಿದ್ದಾರೆ, ನೋಡಿ ಆನಂದಿಸಿ ..
ನಮ್ಮ ಪಂಚಗಿರಿಗಳ ಸಾಲಿನ ಚೆನ್ನಾಗಿರಿಯ ಬೆಟ್ಟದಲ್ಲಿ ಕಂಡುಬರಂತಹ ಈ ಬಂಡೆಗಳು ನನ್ನನ್ನು ಪ್ರತಿ ಬಾರಿಯೂ ತನ್ನಡೆಗೆ ಗಮನ ಸೆಳೆಯುತ್ತಿದ್ದವು, ನೋಡುತ್ತಾ ನಿಂತರೆ ಯಾವುದು ಕಥೆ ಹೇಳಲು ಪ್ರಾರಂಭಿಸಿದಂತೆ ಬಾಸವಾಗುತ್ತದೆ. ಮನದಲ್ಲಿ ಹಲವಾರು ಚಿತ್ರ ರೂಪಕಗಳು ಪೋಣಿಸಿಕೊಂಡು ಕಲ್ಪನಾ ಲೋಕದಲ್ಲಿ ತೆಲಿಸಿಬಿಡುತ್ತವೆ.
ಒಮ್ಮೆ ನೋಡಿ, ಓ ಈ ಬಂಡೆ ಈ ಆಕಾರದಲ್ಲಿ ಕಾಣುತ್ತಿದೆ ಎಂದು ನಿರ್ಧರಿಸಿ ಇದೆ ಅಂತಿಮ ಆಕೃತಿ ಎಂದುಕೊಂಡು ಬಂದರು ಮತ್ತೊಂದು ಬಾರಿ ಭೇಟಿ ನೀಡಿದಾಗ ಅದು ಇನ್ಯಾವುದೋ ಆಕೃತಿಯನ್ನು ಹೋಲುವಂತೆ ಆಶ್ಚರ್ಯ ಪಡಿಸುತ್ತದೆ. ಈ ಬಂಡೆಗಳೆಲ್ಲವೂ ಒಂದೇ ಸ್ಥಳದಲ್ಲಿ ದೂರದ ದೂರದಲ್ಲಿ ಕಾಣಿಸುತ್ತದೆ ಒಂದನ್ನು ನೋಡಿ ಮತ್ತೊಂದು ನೋಡಿದರೆ ಅದಕ್ಕೂ ಇದಕ್ಕೂ ಏನೋ ಸಂಬಂಧವಿರಬೇಕು, ಅದು ಇದರ ಮುಂದುವರೆದ ಭಾಗವಾಗಿರಬೇಕು ಎಂದಲ್ಲ ಸಹ ಅನಿಸುತ್ತಿರುತ್ತದೆ.
ಬಹುಶಃ ಇದೇ ರೀತಿ ಬಯಲಲ್ಲಿ ಆಕಾಶ ಕಾಣುವಂತೆ ಮಲಗಿದಾಗ ಮೋಡಗಳನ್ನು ನೋಡುತ್ತಾ ಇದ್ದಾಗ ಈ ರೀತಿ ಅನುಭವ ಖಂಡಿತವಾಗಿಯೂ ಆಗಿರುತ್ತದೆ. ಇದು ಸಹ ಕೆಲವೊಮ್ಮೆ ಅದೇ ರೀತಿ ತಲೆಕೆಡಿಸಿಬಿಡುತ್ತವೆ. ಇವೆಲ್ಲದರ ಜೊತೆಗೆ ನನ್ನ ಕಲ್ಪನೆ ಒಂದಾದರೆ ನಿಮ್ಮ ಕಲ್ಪನೆ ಇನ್ನೊಂದು ನಿಮ್ಮ ಕಲ್ಪನೆಯಲ್ಲಿ ಇವುಗಳನ್ನು ಒಮ್ಮೆ ನೋಡಿಬಿಡಿ.
- ಕ್ಯಾಮೆರಾ ಹಿಂದಿನ ಕಣ್ಣು : ಚಿದು ಯುವ ಸಂಚಲನ – ಪರಿಸರವಾದಿ, ಲೇಖಕರು, ದೊಡ್ಡಬಳ್ಳಾಪುರ.