ಕಾರ್ಮೂಡ ಕರಗಬೇಕಿದೆ ತಿಳಿವಿನ ಹೊಳೆ ಹರಿಯ ಬೇಕಿದೆ



ಕರೋನಾ ಕರಿ ನೆರಳು ಕವಿದ ಜಗತ್ತು ನಿಧಾನವಾಗಿ ಸಹಜ ಸ್ಥಿತಿಯ ಕಡೆ ಮರಳುತ್ತಿರುವಾಗ ಮಕ್ಕಳ ಉಜ್ವಲ ಭವಿಷ್ಯ ನಂದದಿರಲಿ. ಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಒಂದು ಚಿಂತನ ಲೇಖನ ಓದುಗರಿಗಾಗಿ, ಮುಂದೆ ಓದಿ…

ಕರೋನಾ ಕರಿ ನೆರಳು ಕವಿದ ಜಗತ್ತು ನಿಧಾನವಾಗಿ ಸಹಜ ಸ್ಥಿತಿಯ ಕಡೆ ಮರಳುತ್ತಿದೆ …ಸಾಕಷ್ಟು ನೋವು , ಅಧಿರತೆ, ಅನಾಥ ಭಾವ, ವ್ಯತಿರಿಕ್ತ ತಿರುವುಗಳು ಕಂಡ ಜೀವನ ಮತ್ತೆ ಭರವಸೆಯ ಬೆಳಕಿನ ಕಿರಣ ಕಾಣಲು ತವಕಿಸುತ್ತಿದೆ .

ಈ ತವಕ ನಮ್ಮ‌ದೇಶಕ್ಕೂ ಇದೆ ಸ್ತಬ್ಧವಾಗಿದ್ದ ವಾಣಿಜ್ಯ ಚಟುವಟಿಕೆಗಳು ಜೀವ ತಳೆದು ನಿಂತರೆ ,ಮೆಲ್ಲಗೆ ಸೇವಾ ವಲಯ ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಕಣಲು ಹಂಬಲಿಸುತ್ತಾ ಸಾಗುತ್ತದೆ .
ಸೇವಾವಲಯದ ಮಹತ್ತರ ಭಾಗ ಶಿಕ್ಷಣ ಕ್ಷೇತ್ರ ಇಲ್ಲಿ ನಾವು ಕಳೆದ ದಿನಗಳ ಫಸಲು ಮರಳಿ ಪಡೆಯಲು ಬಹು ಪ್ರಯಾಸವೇ ಪಡಬೇಕಾಗಿದೆ …. “ಕೊವಿಡ್ ಪಾಸ್ ” ಎಂಬ ಈ ಶಬ್ದ ಮುಂದಿನ ಭವಿಷ್ಯದಲ್ಲಿ ಒಂದು ಕಂಟಕವೇ ಆಗಿ ಕಾಡಲಿದೆ .. ಕಾರಣ ನಾವು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಲು ಹಲವು ಸವಾಲುಗಳ ಶಿಖರವೇ ಎದ್ದು ನಿಂತಿವೆ . ಚರ್ಚೆ ಯಾಗ ಬೇಕಾದ ,ಪರಿ ಹರಿಸ ಬೇಕಾದ , ಅನುಷ್ಠಾನಕ್ಕೆ ತರುವ ಹಲವು ಯೋಜನೆ , ಕಾರ್ಯಕ್ರಮಗಳು ನೆನೆಗುದಿಗೆ ಬಿದ್ದು ಅನಗತ್ಯ ಸಂಘರ್ಷ ಕ್ಕೆ ವಿದ್ಯಾಮಂದಿರ ತತ್ತರಿಸುತ್ತಿದೆ .

ಸರ್ವ ಸ್ವತಂತ್ರ ಭಾರತದಲ್ಲಿ ಆಧುನಿಕತೆಯ ಮಡಿಲಲ್ಲಿ ಇದ್ದವೇ ಎಂದು ನಾವು ಬೀಗಿದರು .ಹೆಣ್ಣುಮಕ್ಕಳ ಶಾಲೆ – ಕಾಲೇಜು ಗಳಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ . ಸಮಯಕ್ಕೆ ಸರಿಯಾಗಿ ಮಕ್ಕಳು ಕಾಲೇಜು ತಲುಪಲು ಸಾರಿಗೆ ವ್ಯವಸ್ಥೆ ಇಲ್ಲ , ಕುಡಿಯುವ ನೀರಿನ ಸೌಲಭ್ಯ ಇಲ್ಲ , ಅಷ್ಟೇ ಅಲ್ಲದೇ ಎಷ್ಟೋ ಶಾಲೆ, ಕಾಲೇಜುಗಳಿಗೆ ಶಿಕ್ಷಕ, ಭೋದಕರ ಕೊರತೆ ಇದೆ ..!!!??? .

ಇನ್ನು ಕೆಲವು ತರಗತಿಗಳಿಗೆ ಪ್ರಯೋಗಾಲಯ ಬಹು ಅಗತ್ಯ ಮತ್ತು ಮುಖ್ಯ ಪ್ರಾಯೋಗಿಕ ಅಧ್ಯಯ ಮೂಲ ವಿಜ್ಞಾನದ ಕಣ್ಣು. ಈ ವಿಷಯಕ್ಕಾಗಿ ಸೂಕ್ತ ಸಲಕರಣೆಗಳು ,ಭೋದಕರ ಅಗತ್ಯವಿದೆ . ಪಟ್ಟಿ ಮಾಡುತ್ತಾ ಹೋದರೆ ಅನೇಕ ಸಮಸ್ಯೆಗಳು ಬೃಹದಾಕಾರವಾಗಿ ನಮ್ಮೆದುರು ನಿಲ್ಲುತ್ತವೆ .



ಹೀಗಿರುವಾಗ ಅನಗತ್ಯ ಚರ್ಚೆಯ ಹುಟ್ಟನ್ನು ಆರಂಭದಲ್ಲೆ ಸಮಕಿತ್ತೊಗೆಯಬೇಕೆ ಹೊರತು ಪ್ರಚಾರಕ್ಕೆ ಎಡೆಮಾಡಿಕೊಂಡು ರಾಜಕೀಯ ಬಣ್ಣ ಲೇಪಿಸಲಾಗಿದೆ. “ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ” ಎಂದರೆ ಭಾವಿ ಪ್ರಜೆಗಳ ರೂಪಿಸುವ ಹೊಣೆಗಾರಿಕೆ ಯಾರದ್ದು ? ನಿರಂತರವಾಗಿರ ಬೇಕಾದ ಕಲಿಕೆ” ನಿಂತು” ಹಲವು ಸಮಸ್ಯೆಗಳಿಗೆ ದಾರಿ ಮಾಡಿದೆ , ಶಾಲೆ ಬಿಟ್ಟ ಮಕ್ಕಳೆಷ್ಷೊ, ಬಾಲಕಾರ್ಮಿಕರಾದ ಮಕ್ಕಳು , ಬಾಲ್ಯ ವಿವಾಹಕ್ಕೆ ಕೊರಳು ನೀಡಿದ ಮಕ್ಕಳು , ಒಂದು ವರದಿಯ ಪ್ರಕಾರ ಬಾಲಾಪರಾಧವು ಕರೋನಾ ಸಂಕಟದಲ್ಲಿ ಹಬ್ಬಿದೆ .ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ಸಮಯ ಮತ್ತು ಕಲಿಕೆಗೆ ಪೊರಕವಾದ ವಾತವಾರಣ ನಿರ್ಮಿಸ ಬೇಕಾದ್ದು ನಿಜವಾದ ಹೊಣೆಗಾರಿಕೆ .

ನಿರುದ್ಯೋಗ, ಖಿನ್ನತೆ, ಅಪರಾಧಗಳು ಇಷ್ಟೇ ಅಲ್ಲದೆ ಉಳ್ಳವರು ಡ್ರಗ್ ದಂಧೆಗೆ ಬಲಿಯಾಗುವ ಮುಗ್ಧ ಮನಗಳು . ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತಲೇ ಇರುವಾಗ ದೇಶವ ಮುನ್ನಡೆಸುವ ನಾಯಕರಿಗೆ ಇದೆಲ್ಲರ ಅರಿವಿಲ್ಲದಿರುವುದು ವಿಷಾದನೀಯವೊ ವಿಪರೀತವೊ ತಿಳಿಯುತ್ತಿಲ್ಲ .

ಉತ್ತಮ ಅಂಕ ಬಂದರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ,ಹಲವು ಮಾನದಂಡಗಳು …ಜೊತೆ ಭ್ರಷ್ಟಾಚಾರ ದ ಪೆಡಂಬೂತ ಎಲ್ಲ ವಲಯವನ್ನು ಬಿಡದೆ ತುಕ್ಕು ಹಿಡಿಸಿದೆ .
ಕಾರ್ಯದಲ್ಲಿ ದಕ್ಷತೆ, ಕ್ಷಮತೆ, ಪ್ರಮಾಣಿಕತೆ , ಆಳುವ ನಾಯಕರಲ್ಲೆ ಕಾಣಲಾಗದ ಮೇಲೆ ನಾವು ಎಂತಹ ಸಮಾಜವನ್ನು ನಿರೀಕ್ಷಸಲಾಗುವದು ವಾಸ್ತವದಲ್ಲಿ ?

“ಸರ್ವಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೆ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನರುದ್ಯಾನ “

ಎಂಬ ರಸ ಋಷಿಯ ನಾಡಗೀತೆಯ ಗಟ್ಟಿ ಕಂಠದಿ ಹಾಡುತ್ತಲೇ ನಾವು ನಮ್ಮಲ್ಲಿರುವ ವೈವಿದ್ಯತೆಯಲ್ಲಿ ಏಕತೆಯ ಮಂತ್ರವ ತುಂಡಿರಿಸುತ್ತಿದ್ದೇವೆ . ಧಾರ್ಮಿಕತೆಯ ಹೆಸರಲ್ಲಿ ಕೆರಸರು ಎರಚುತ್ತಿದ್ದೇವೆ.
ಯಾವ ಧರ್ಮವು ಹಿಂಸೆಗೆ ಪ್ರಚೋದನೆ ನೀಡಿಲ್ಲ.

ಸಾಲು ಸಾಲು ಅತ್ಯಾಚಾರ ಸುದ್ದಿಗಳಿಗೆ ಶಾಶ್ವತ ಮುಕ್ತಿ ಸಿಗಲಿ,

ಹಗಲು ರಾತ್ರಿ ಕಷ್ಟ ಪಟ್ಟು ಓದಿ ಪದವಿಗಳಿಸಿದರು ಸೂಕ್ತ. ಕೆಲಸ ಸಿಗುವುದು ಮರಿಚಿಕೆ, ಕೆಲಸಕ್ಕಾಗಿ ಅಲೆಯುವಾಗ ಶಾಲು ,ಹಾರಾ ,ಕತ್ತಿ ,ಉದ್ರಿಕ್ತ ಮಾತುಗಳು ಪ್ರಯೋಜನಕ್ಕೆ ಬರುವದಿಲ್ಲ. ನಮ್ಮಲ್ಲಿರುವ ಕೌಶಲ್ಯ, ಸೃಜನಶೀಲತೆಯೇ ಮುಖ್ಯವಾಗಿ ಪ್ರಮಾಣ ಪತ್ರದ ಅಂಕಗಳಿಗೂ ಮಿಗಿಲಾಗಿ ಅಗತ್ಯವಾಗಿರುತ್ತವೆ. ಇಂತಹ ಸಮಯದಲ್ಲಿ ನಿರಂತರ ಮುಚ್ಚುವ ಶಾಲಾ – ಕಾಳೇಜುಗಳಿಂದ ಯಾರಿಗೆ ಉಪಯೋಗ ? ಒಂದು ಪುಟ್ಟ ಚರ್ಚೆ ಸಮಾಜದ ಅಸ್ವಸ್ಥತೆಗೆ ಕಾರಣವಾಗಿತ್ತದೆ ಎಂದಾರೆ ಅಂತಹದನ್ನು ತಡೆಯವುದು ಸರಕಾರದ ನೇರ ಜವಾಬ್ದಾರಿ ಯು ಹೌದು,

ತಮ್ಮ ಭವಿಷ್ಯದ ಕನಸ ಹೊತ್ತ ವಿದ್ಯಾರ್ಥಿಗಳಿಗೂ ಈ ಬಗ್ಗೆ ಜಾಗ್ರತೆ ಬೇಕು. ಯಾರದೊ ಮಾತು, ಭಯಕ್ಕಾಗಿ ನಿಮ್ಮ ಸುಂದರ ಭವಿಷ್ಯವನ್ನು ನೀವೇ ಏಕೆ ದಹಿಸಿಕೊಳ್ಳುವಿರಿ. ಚಿಂತಿಸಿ, ಇದು ಚಿಂತಿಸುವ ಸಮಯವೂ ಹೌದು .


  • ರೇಶ್ಮಾಗುಳೇದಗುಡ್ಡಾಕರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading