ಸವಿತಾ ಮುದ್ಗಲ್ ಅವರ ಲೇಖನಿಯಲ್ಲಿ ಬಿಸಿಯ ಬೇಗೆಯಲ್ಲಿ ಅರಳಿದ ಹನಿಗವನವನ್ನು ತಪ್ಪದೆ ಮುಂದೆ ಓದಿ…
ಅಯ್ಯೋ ಹೆಚ್ಚಾಗಿದೆ ಎಲ್ಲೆಡೆ
ಬೇಸಿಗೆ
ಹೆದರಿ ಕೂರದೇ ಮಾಡುವೆವು
ಹಪ್ಪಳ ಸಂಡಿಗೆ!
****
ಸಾಕಾಗಿದೆ ಬಿರು ಬಿಸಿಲಿನ
ತಾಪವು ಈ ಮನಕೆ
ಬೇಕಾಗಿದೆ ತಣಿಸುವ ಪಾನಿಯ
ನಿತ್ಯವು ಈ ದೇಹಕೆ!
****
ಬಿಸಿಲಿಗೆ ಆವಿಯಾಗುವ
ನೀರಂತೆ ನನ್ನವಳು
ಅದ್ಕಕ್ಕೇನೋ ಸಿಗುತ್ತಿಲ್ಲ
ನೆಲೆಯೂರಿದ್ದಾಳೆ ತವರಲ್ಲಿ
ಅವಳು!
****
ಬಿಸಿ ಬಿಸಿ ಚಹಾ
ಬೇಕಿತ್ತು ಚಳಿಯಲ್ಲಿ
ಹನಿ ಹನಿ ಕಹಾನಿ
ಶುರುವಾಗಿದೆ
ಬೇಸಿಗೆಯಲ್ಲಿ
- ಸವಿತಾ ಮುದ್ಗಲ್ – ಗಂಗಾವತಿ
