ತುಳಸಿ ಗಿಡ ಭವಿಷ್ಯ ಹೇಳುತ್ತದೆಯೇ?



ತುಳಸಿ ಗಿಡದಲ್ಲಾಗುವ ಬದಲಾವಣೆಗಳಿಂದ ಮುಂದೆ ಮನೆಯಲ್ಲಿ ನಡೆಯುವ ಪರಿಣಾಮಗಳ ಬಗ್ಗೆ ಹೇಳ ಬಹುದಂತೆ. ಕುತೂಹಲ ವಿಷಯಗಳನ್ನು ಲೇಖಕರು ಶಿವಕುಮಾರ್ ಬಾಣಾವರ ಅವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ…

ತುಳಸಿ ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣ ಪಡಿಸ ಬಹುದು. ಆಧ್ಯಾತ್ಮಿಕವಾಗಿಯೂ ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದೆಂದು ಅದರಿಂದ ನಮಗೆಲ್ಲವೂ ಒಳ್ಳೆಯದಾಗುತ್ತದಂತೆ.

ಫೋಟೋ ಕೃಪೆ : pinterest

ಆದರೆ, ಒಮ್ಮೊಮ್ಮೆ ಮನೆಯಲ್ಲಿರುವ ತುಳಸಿ ಗಿಡದ ಸಹಜ ಬಣ್ಣದಲ್ಲಿ ಬದಲಾಣೆ ಆಗುವುದು, ಇಲ್ಲವೆ ಎಲೆಗಳು ಒಣಗಿ ಉದುರಿ ಹೋಗುವುದು ಮೊದಲಾದುವುಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಹೀಗೆ ಭೌತಿಕವಾಗಿ ನಡೆಯುವ ಪ್ರಕ್ರಿಯೆಗಳಿಂದಾಗಿ ಆ ಮನೆಯಲ್ಲಿ ನಡೆಯ ಬಹುದಾದ ಆಗು ಹೋಗುಗಳ ಬಗ್ಗೆ ತಿಳಿದು ಕೊಳ್ಳ ಬಹುದಂತೆ. ಈ ನಿಟ್ಟಿನಲ್ಲಿ ತುಳಸಿ ಗಿಡದಲ್ಲಾಗುವ ಬದಲಾವಣೆಗಳನ್ನು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಿಳಿದು ಕೊಳ್ಳೋಣ.



  • ತುಳಸಿ ಗಿಡದ ಎಲೆಗಳ ಬಣ್ಣ ಒಮ್ಮೆಲೇ ಬದಲಾದರೆ… ಆ ಮನೆಯ ಪೈಕಿ ಯಾರೋ ಒಬ್ಬರು ಮಾಯ ಮಾಟದಂತಹ ಪ್ರಯೋಗಕ್ಕೆ ಈಡಾಗುತ್ತಾರೆಂಬುದನ್ನು ಸೂಚಿಸುತ್ತದೆ. ಹೀಗೆ ಪ್ರಯೋಗ ನಡೆಸಿ ಅವರನ್ನು ಹಾಳು ಮಾಡ ಬೇಕೆಂದು ಕೊಂಡರೆ ಮಾತ್ರ ಈ ರೀತಿ ಎಲೆಗಳ ಬಣ್ಣ ಬದಲಾಗುತ್ತದಂತೆ.
  • ದಿನಾಲೂ ನೀರು ಹಾಕಿ ಚೆನ್ನಾಗಿ ಪೋಷಿಸುತ್ತಿದ್ದರೂ, ತುಳಸಿ ಗಿಡದ ಎಲೆಗಳು ಒಣಗಿ ಹೋಗುತ್ತಿದ್ದರೆ, ಆ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗುತ್ತರಂತೆ. ಯಾವುದಾದರೂ ಒಂದು ಗಂಭೀರ ಕಾಯಿಲೆಗೆ ತುತ್ತಾಗುವ ಅವಕಾಶವಿರುತ್ತದಂತೆ.

ಫೋಟೋ ಕೃಪೆ : gardening.stackexchange

  • ಒಂದು ವೇಳೆ ತುಳಸಿ ಗಿಡಕ್ಕೆ ನೀರೆರೆಯದಿದ್ದರೂ, ಎಲೆಗಳು ಹಸಿರಾಗಿ, ಚೆನ್ನಾಗಿ ಬೆಳೆಯುತ್ತಿದ್ದರೆ, ಆ ಮನೆಯವರಿಗೆಲ್ಲರಿಗೂ ಅದೃಷ್ಟ ಕೂಡಿ ಬರುತ್ತದಂತೆ. ಭವಿಷ್ಯದಲ್ಲಿ ಅಂತಹವರಿಗೆ ಹೇರಳವಾಗಿ ಸಂಪತ್ತು ಬರುತ್ತದಂತೆ.
  • ತುಳಸಿ ಗಿಡವನ್ನು ಬೆಳೆಸುತ್ತಿರುವ ಕುಂಡದಲ್ಲಿ, ಮತ್ತೊಂದು ಸಸಿ ತನ್ನಷ್ಟಕ್ಕೆ ತಾನೇ ಹುಟ್ಟಿದರೆ, ತಾವು ಅಂದು ಕೊಂಡದ್ದನ್ನು ಸಾಧಿಸುತ್ತಾರಂತೆ.
  • ಇತರೆ ಕಾರಣಗಳಿಂದಾಗಿ ತುಳಸಿ ಗಿಡ ಒಣಗುತ್ತಿದ್ದರೆ, ಒಡಯನೆ ನೀರು ಹಾಕಿ ಚೆನ್ನಾಗಿ ಬೆಳೆಯುವಂತೆ ನೋಡಿ ಕೊಳ್ಳಬೇಕಂತೆ. ಹಾಗೆ ಮಾಡದಿದ್ದರೆ ಕೇಡು ಸಂಭವಿಸುತ್ತದಂತೆ.

ಫೋಟೋ ಕೃಪೆ : pinterest

  • ತುಳಸಿ ಗಿಡ ಹಚ್ಚ ಹಸಿರಾಗಿರುವ ಮನೆಯಲ್ಲಿ ಯಾವಾಗಲೂ ಸುಖ, ಸಂತೋಷಗಳು ತುಂಬಿ ತುಳುಕಾಡುತ್ತಿರುತ್ತವಂತೆ. ಅಂತಹ ಮನೆಯವರಿಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲವಂತೆ.

  • ಶಿವಕುಮಾರ್ ಬಾಣಾವರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW