ಸಮಾಜಶಾಸ್ತ್ರವು ಪದವಿ ಪೂರ್ವ ಮತ್ತು ಪದವಿ ಕಾಲೇಜು, ವಿಶ್ವ ವಿದ್ಯಾಲಯ, ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರದಲ್ಲಿ ಇಲಾಖೆಗಳಾದ ಗ್ರಾಮೀಣ, ನಗರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ವಸತಿ ಮತ್ತು ನಗರಾಭಿವೃದ್ಧಿ ನಿಗಮ, ಬುಡಕಟ್ಟು, ವ್ಯವಹಾರ, ಆರೋಗ್ಯ ಹೀಗೆ ಹಲವು ಅವಕಾಶಗಳು ಒದಗಿಸುತ್ತದೆ. ಸಮಾಜಶಾಸ್ತ್ರ ವಿಷಯದ ಮಹತ್ವವನ್ನು ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ.ಡಿ.ಲೋಕರಾಜ ಬಣವಿಕಲ್ಲು ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ ತಪ್ಪದೆ ಮುಂದೆ ಓದಿ….
ಕೈಗಾರಿಕೆ, ಸಂಘ-ಸಂಸ್ಥೆಗಳು ಮತ್ತು ಸಾಮಾಜಿಕ ಜವಾಬ್ದಾರಿಯುತ ಕಂಪನಿ (Corporate Social Responsibility Fund) (CSR) ಕಂಪನಿಗಳ ಒಳಪಡುವ ಸಾಕಷ್ಟು ಉದ್ಯೋಗಗಳು ಸಿಗುತ್ತವೆ. ಸಮಾಜಶಾಸ್ತ್ರ ಅಧ್ಯಯನದಿಂದ ಜ್ಞಾನವಷ್ಟೇ ಅಲ್ಲದೇ ಸಮಾಜದಲ್ಲಿ ಬದುಕುವ ರೀತಿ ಕಲಿಸಿ ಕೊಡುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಮೂಲಕ ‘ಸಮಾಜ ಅಭಿವೃದ್ಧಿಗೆ’ ಸಹಕಾರಿ ಆಗಲಿದೆ.
ಸಮಾಜಶಾಸ್ತ್ರಕ್ಕೆ ಸಾಕಷ್ಟು ಬೇಡಿಕೆ ಇದೆ :
ಪ್ರಸ್ತುತ ಸಂದರ್ಭದಲ್ಲಿ ಸಮಾಜಶಾಸ್ತ್ರ ವಿಷಯ ತುಂಬಾ ಬೇಡಿಕೆ ಹೊಂದಿದ್ದು, ಇದನ್ನು ಅಧ್ಯಯನ ಮಾಡಿದವರು UPS/AES/SSS ಆಯೋಗಗಳಿಂದ ಸಾಕಷ್ಟು ಅಭ್ಯರ್ಥಿಗಳು ನೇಮಕಾತಿ ಆಗುತ್ತಿದ್ದಾರೆ. ವಿಶ್ವ ಸಂಸ್ಥೆಯಲ್ಲಿ (UNICEF) ಉದ್ಯೋಗ ಸಿಗುತ್ತವೆ. ಆದ್ದರಿಂದ ಸಮಾಜ ವಿಜ್ಞಾನಗಳಲ್ಲಿ ಸಮಾಜಶಾಸ್ತ್ರ ಕೇವಲ ಅಧ್ಯಯನ ವಿಷಯವಲ್ಲ ಅದು ‘ಮುಂದಿನ ಜೀವನಕ್ಕಾಗಿ ದಾರಿ ದೀಪವಾಗಿದೆ’ ಇಂದು ಅಂತರಾಷ್ಟ್ರೀಯ , ರಾಷ್ಟ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಸಮಾಜಶಾಸ್ತ್ರ ಮೇಜರ್ ವಿಷಯಗಳಲ್ಲಿ ಅನೇಕ ಉದ್ಯೋಗ ಸಿಗುತ್ತವೆ. ಹಾಗಾದರೆ ಸಮಾಜಶಾಸ್ತ್ರ ಅಧ್ಯಯನವನ್ನು ಏಕೆ ಮಾಡಬೇಕು? ಯಾವ ಉದ್ಯೋಗ ಅವಕಾಶಗಳು ಇವೆ? ಎಂಬುದರ ಮಾಹಿತಿ ಇಲ್ಲಿವೆ.
ಸಮಾಜಶಾಸ್ತ್ರ ಪದವಿ ಮಾಡಿದರೆ ಎಲ್ಲೆಲ್ಲಿ ಉದ್ಯೋಗ ಅವಕಾಶಗಳಿವೆ?
- ಶಿಕ್ಷಣ ಇಲಾಖೆ : ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಸಿ.ಇ.ಟಿ. ಪರೀಕ್ಷೆ ಬರೆದು ಉದ್ಯೋಗ ಮಾಡಬಹುದು. ಶಾಲೆ ಮತ್ತು ಕಾಲೇಜಿನಲ್ಲಿ ಆಡಳಿತಗಾರರು, ಸಲಹೆಗಾರರು ಇತ್ಯಾದಿ ಅವಕಾಶಗಳಿವೆ.
- ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯ : ಸರ್ಕಾರಿ, ಅನುದಾನಿತ ಕಾಲೇಜು/ಮಹಾವಿದ್ಯಾಲಯ, ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಹುದ್ದೆಗಳಿಗೆ ಅವಕಾಶಗಳಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ಸಿ.ಇ.ಟಿ ಬರೆದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನೇಮಕಾತಿ ಆಗಲು ಅವಕಾಶ ಇದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸಲಹೆಗಾರರು, ಹಣಕಾಸು ನೆರವು ನಿರ್ದೇಶಕರು, ನಿವಾಸಿ ಸಹಾಯಕರ ಉದ್ಯೋಗ ಕಂಡುಕೊಳ್ಳಬಹುದು.
- ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು: ನಗರ ಯೋಜಕರು, ನೆರವು ಡೇಟಾ ವಿಶ್ಲೇ಼ಷಕರು, ಜನಸಂಖ್ಯಾ ತಜ್ಞರು, ಸಾರ್ವಜನಿಕ ಆಡಳಿತ ಅಧಿಕಾರಿ, ಸಾರ್ವಜನಿಕ ಅಭಿಪ್ರಾಯ ಸಮೀಕ್ಷಕರು, ರಹಸ್ಯ ಸೇವಾ ಏಜೆಂಟರು, ಸಮಾಜ ಕಲ್ಯಾಣ ಪರೀಕ್ಷಕರು, ಯು.ಎಸ್.ಜನಗಣತಿ (ಬ್ಯೂರೋ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಸತಿ ಮತ್ತು ನಗರಾಭಿವೃದ್ಧಿ ನಿಗಮ ಇಲಾಖೆಗಳಲ್ಲಿ ವಿವಿಧ ಉದ್ಯೋಗ ಅವಕಾಶವಿದೆ.
- ಮಾನವ ಸೇವೆಗಳು : ದತ್ತು ಏಜೆಂಟರು, ಮದ್ಯಪಾನ ಮತ್ತು ಮಾದಕ ವ್ಯಸನ ಕಾರ್ಯಕರ್ತರು, ವೃತ್ತಿ ಸಲಹೆಗಾರರು, ಮಕ್ಕಳ ಕಲ್ಯಾಣ ಅಧಿಕಾರಿ, ಸಮುದಾಯ ಸಂಘಟಕರು, ಸಮುದಾಯ ಸಂಬಂಧಗಳ ನಿರ್ದೇಶಕರು, ಸಮುದಾಯ ಸೇವಾ ಸಂಸ್ಥೆ ನಿರ್ವಾಹಕರು, ಗ್ರಾಹಕ ವಕೀಲರು, ಕುಟುಂಬ ಮಾರ್ಗದರ್ಶನ ಮೊಕದ್ದಮೆ ಕಾರ್ಯಕರ್ತರು, ವಿಶ್ಲೇಷಕ ಮುಂಜಾಗ್ರತಾ ಕಾರ್ಯಕರ್ತರು, ನಿಧಿ ಸಂಗ್ರಹಣಕಾರರು ಮತ್ತು ಅಭಿವೃದ್ಧಿ ಅಧಿಕಾರಿ, ವೃದ್ಧಾಪ್ಯಶಾಸ್ತç, ಮಾನವ ಸೇವೆಗಳ ಕಾರ್ಯಕರ್ತರು, ಮದುವೆ ಮತ್ತು ಕುಟುಂಬ ಚಿಕಿತ್ಸಕರು, ಶಾಂತಿದಳ, ಕಾರ್ಯಕ್ರಮ ತಜ್ಞರು, ಸಮಾಜಸೇವಾ ಕಾರ್ಯಕ್ರಮ ನಿರ್ದೇಶಕರು, ವಸತಿ ಸಲಹೆಗಾರರು, ಸಮಾಜ ಸೇವಕರು, ಅನುಭವಿ ವ್ಯವಹಾರಗಳ ತಜ್ಞರು, ಕಲ್ಯಾಣ ಸಲಹೆಗಾರರು, ಯುವ ಸಲಹೆಗಾರರು ಇತ್ಯಾದಿ ಅವಕಾಶಗಳಿವೆ.
- ವ್ಯವಹಾರ : ಆಡಳಿತ ಸಹಾಯಕರು, ವ್ಯವಸ್ಥಾಪಕ/ಜಾಹೀರಾತು ನಿರ್ವಾಹಕರು, ಮುಂಗಡ ಪತ್ರ ವಿಶ್ಲೇಷಕರು, ಪರಿಹಾರ ಮತ್ತು ಪ್ರಯೋಜನೆಗಳ ತಜ್ಞರು, ಗ್ರಾಹಕರ ಸಮೀಕ್ಷೆ ಸಲಹೆಗಾರರು, ಸಮಾವೇಶ ಸಂಘಟಕರು, ಜನಸಂಖ್ಯಾ ವಿಶ್ಲೇಷಕರು, ಮಾನವ ಸಂಪನ್ಮೂಲ ತಜ್ಞರು, ವಿಮಾ ಏಜೆಂಟರು ಮತ್ತು ಮಧ್ಯವರ್ತಿ, ಕಾರ್ಮಿಕ ಸಂಬಂಧಗಳ ಪ್ರತಿನಿಧಿ ಮಾರುಕಟ್ಟೆಶಾಸ್ತ್ರ, ಸಂಶೋಧನಾ ವಿಶ್ಲೇಷಕರು, ಪ್ರೇರಣಾ ಸ್ಪೀಕರ್, ಸಿಬ್ಬಂದಿ ಸಂದರ್ಶಕರು, ಸಾರ್ವಜನಿಕ ಸಂಪರ್ಕ ತಜ್ಞರು, ಮಾರಾಟ ಪ್ರತಿನಿಧಿ, ತರಬೇತಿದಾರರು ಇತ್ಯಾದಿ ಉದ್ಯೋಗ ಕಂಡುಕೊಳ್ಳಬಹುದು.
- ತಿದ್ದಪಡಿ : ತಿದ್ದುಪಡಿ ಅಧಿಕಾರಿ, ಅಪರಾಧಶಾಸ್ತ್ರಜ್ಞ, ಪೆರೋಲ್ ಅಧಿಕಾರಿ ಮತ್ತು ಪರೀಕ್ಷಣಾಧಿಕಾರಿ ಅವಕಾಶಗಳಿವೆ.
- ಆರೋಗ್ಯ ಸೇವೆಗಳು : ಆರೋಗ್ಯ ಸಹಾಯಕರು, ಆಸ್ಪತ್ರೆ ಆಡಳಿತ ಅಧಿಕಾರಿ, ವೈದ್ಯಕೀಯ ಸಮಾಜ ಸೇವಕರು, ಸಾರ್ವಜನಿಕ ಆರೋಗ್ಯ ಶಿಕ್ಷಣ ತಜ್ಞರು, ಸಾರ್ವಜನಿಕ ಆರೋಗ್ಯ ಸಂಖ್ಯಾಶಾಸ್ತ್ರಜ್ಞರು, ಪುನರ್ವಸತಿ ಸಲಹೆಗಾರರು ಇತ್ಯಾದಿ ಉದ್ಯೋಗ ಸಿಗುತ್ತವೆ.
- ಪ್ರಕಾಶನ ಮತ್ತು ಪತ್ರಿಕೋದ್ಯಮ : ಸಂಪಾದಕರು, ಸುದ್ದಿ ವರದಿಗಾರರು, ವರದಿದಾರರು, ತಾಂತ್ರಿಕ ಬರಹಗಾರರು, ಬರಹಗಾರರು ಮತ್ತು ಲೇಖಕರು ಅವಕಾಶಗಳಿವೆ.
- ಸಂಶೋಧನೆ : ಜನಸಂಖ್ಯಾಶಾಸ್ತ್ರಜ್ಞ ಸಹಾಯಕರು, ಮಾರುಕಟ್ಟೆ ಸಂಶೋಧಕರು, ಸಂಶೋಧನಾ ಸಹಾಯಕರು, ಪ್ರಾಜೆಕ್ಟ್ವರ್ಕ್ ಸಹಾಯಕರು ಅವಕಾಶಗಳಿವೆ.
- ಇತರೆ : ಎಂ.ಫಿಲ್/ಪಿಎಚ್.ಡಿ/ಪಿಡಿಎಫ್- ವಿಶ್ವವಿದ್ಯಾಲಯಗಳಲ್ಲಿ Master of Philosophy, Doctor of Philosophy & Post-Doctoral ಸಂಶೋಧನಾ ಅಧ್ಯಯನ ಮಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳಿಂದ ಶಿಷ್ಯವೇತನ, ಯುಜಿಸಿ/ಪ್ರತಿಷ್ಠಿತ ಸಂಸ್ಥೆಗಳಿಂದ
‘ರಾಜೀವ್‌ಗಾಂಧಿ ಫೆಲೋಷಿಪ್’ ಧನಸಹಾಯ ನೀಡಲಾಗುತ್ತದೆ.
- ಡಾ.ಡಿ.ಲೋಕರಾಜ ಬಣವಿಕಲ್ಲು – ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮರಿಯಮ್ಮನಹಳ್ಳಿ, ವಿಜಯನಗರ ಜಿಲ್ಲೆ.
