ಪ್ರಕಟಣೆ
ಆಕೃತಿ ಕನ್ನಡ ಡಾಟ್ ಕಾಮ್ (www.aakritikannada.com) ನಲ್ಲಿ ಪ್ರಕಟಗೊಳ್ಳುವ ಲೇಖನಗಳು ಆಯಾ ಲೇಖಕರ ಅಭಿಪ್ರಾಯ ಗಳಾಗಿದ್ದು, ಇದರಲ್ಲಿ ಪ್ರಕಟವಾಗುವ ಕತೆಗಳ ಸಂಪೂರ್ಣ ಹಕ್ಕು ಆಯಾ ಲೇಖಕರದ್ದಾಗಿದೆ. ಇಲ್ಲಿ ಪ್ರಕಟವಾಗುವ ಕತೆಗಳನ್ನು ಬೇರೆ ಭಾಷೆಗೆ ಅನುವಾದಿಸುವ, ರೂಪಾಂತರಿಸುವ, ಪ್ರಸಾರ ಮಾಡುವ, ಪ್ರಕಟಿಸುವ ಇಲ್ಲ ಧಾರಾವಾಹಿ- ಸಿನಿಮಾಗಳಿಗೆ ಬಳಸಿಕೊಳ್ಳುವ ಹಕ್ಕು ಮೂಲ ಲೇಖಕರದ್ದಾಗಿದೆ. ಅವರ ಪೂರ್ವಾನುಮತಿಯಿಲ್ಲದೆ ಇಂಥ ಕತೆ- ಲೇಖನಗಳನ್ನು ಬಳಸಿಕೊಳ್ಳಬಾರದಾಗಿ ವಿನಂತಿ. - ಸಂಪಾದಕರು.
ಆಕೃತಿ ಕನ್ನಡ ಡಾಟ್ ಕಾಮ್
ಇ ಮ್ಯಾಗಝಿನ್ ಇನ್ ಕನ್ನಡ
ಕನ್ನಡ ದೇವಿಯ ದೇಗುಲಕ್ಕೆ ಹೊಸ ತೋರಣ. ನಮ್ಮ ನಿಮ್ಮ ನಡುವಿನ ಪ್ರತಿಸ್ಪಂದನಕ್ಕೆ ಹೊಸ ವೇದಿಕೆ. ಜಗತ್ತಿನ ಯಾವ ಮೂಲೆಯಲ್ಲಿ ಕುಳಿತಾದರೂ ಓದಿ ತಿಳಿಯಿರಿ ಕನ್ನಡದಲ್ಲಿ ಮಾಹಿತಿಗಳನ್ನು. ಇದು ಜಗತ್ತಿನ ಕನ್ನಡಿಗರಿಗಾಗಿ ನಮ್ಮ ಪ್ರಯತ್ನ. ಹೆಸರಾಂತ ಕನ್ನಡ ಬರಹಗಾರರು ಬರೆಯುವ ಕತೆ, ಕವನ, ಕನ್ನಡದ ಐತಿಹಾಸಿಕ ಕತೆಗಳು, ಕನ್ನಡ ಜಾನಪದದ ಅರಿವು. ರಂಗಭೂಮಿ, ಪ್ರಚಲಿತ ಸಂಗತಿಗಳು, ವ್ಯಕ್ತಿ ಪರಿಚಯ, ಯಾರು ಎಲ್ಲಿ ಏನು ಹೇಳಿದರು? ನಿಮ್ಮ ಕಾಲಂ, ಮಕ್ಕಳ ಕಾಲಂ, ಮೈಕ್ ನಮ್ಮದು - ಹಾಡು ನಿಮ್ಮದು. ಕುಂಚ - ಬಣ್ಣ, ಅಡುಗೆ ಮನೆ. ಏನೆಲ್ಲ ವಿಷಯಗಳು. ಕನ್ನಡ ಸಾಹಿತ್ಯ, ಸಂಸ್ಕೃತಿಯ ದರ್ಶನ. ನೀವು ಎಲ್ಲಿ ಇರುತ್ತೀರೋ ಅಲ್ಲಿಗೇ ನಮ್ಮ ಮ್ಯಾಗಝಿನ್ ನಿಮ್ಮ ಬೆರಳುಗಳಲ್ಲಿ.
ಆಕೃತಿ ಕನ್ನಡ ಡಾಟ್ ಕಾಮ್. ಹೊಸ ವರುಷದ ಆರಂಭದೊಂದಿಗೆ. ಜಗತ್ತಿನ ಕನ್ನಡಿಗರ ಬೆರಳ ತುದಿಯಲ್ಲಿ ಕನ್ನಡದ ಮೃಷ್ಟಾನ್ನ.
ಆಕೃತಿ ಟೀಮ್
ಮುಖ್ಯ ಸಂಪಾದಕರು - ಹೂಲಿ ಶೇಖರ್

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ.
ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
ತೆರೆಯ ಮರೆಯ ಕಲಾವಿದರಾದ ಇವರು ಆಕೃತಿ ಕನ್ನಡ ಅಂತರ್ಜಾಲ ಪತ್ರಿಕೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಿದ್ದಾರೆ. ಕತೆ, ಕವನ, ಕನ್ನಡದ ಐತಿಹಾಸಿಕ ಕತೆಗಳು, ಕನ್ನಡ ಜಾನಪದದ ಅರಿವು. ರಂಗಭೂಮಿ, ಪ್ರಚಲಿತ ಸಂಗತಿಗಳು, ವ್ಯಕ್ತಿ ಪರಿಚಯ, ಯಾರು ಎಲ್ಲಿ ಏನು ಹೇಳಿದರು? ನಿಮ್ಮ ಕಾಲಂ, ಮಕ್ಕಳ ಕಾಲಂ, ಮೈಕ್ ನಮ್ಮದು - ಹಾಡು ನಿಮ್ಮದು. ಕುಂಚ - ಬಣ್ಣ, ಅಡುಗೆ ಮನೆ. ಏನೆಲ್ಲ ವಿಷಯಗಳು. ಕನ್ನಡ ಸಾಹಿತ್ಯ, ಸಂಸ್ಕೃತಿಯ ದರ್ಶನ ವನ್ನು ಈ ಪತ್ರಿಕೆಯ ಮೂಲಕ ಮಾಡಿಸುತ್ತಿದ್ದಾರೆ.
ಅವರ ನಿರಂತರ ಲೇಖನಗಳಿಗಾಗಿ ಆಕೃತಿ ಕನ್ನಡ ಪೇಜ್ ತಪ್ಪದೆ ಲೈಕ್ ಮಾಡಿ
ಸಂಪಾದಕರು - ಶಾಲಿನಿ ಪ್ರದೀಪ್

Thatskannada. com (ಈಗ oneindia) ಆನ್ಲೈನ್ ಪತ್ರಿಕೆಯಲ್ಲಿ ಸಂಪಾದಕಿಯಾಗಿ ಆರು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿ, ಆಕೃತಿಕನ್ನಡ ಡಾಟ್ ಕಾಂ ಎನ್ನುವ ಆನ್ಲೈನ್ ಪತ್ರಿಕೆಯನ್ನು ಹುಟ್ಟು ಹಾಕಿ, ಅದನ್ನು ಐದು ವರ್ಷದಿಂದ ಯಶಸ್ವಿಯಾಗಿ ನಿರ್ವಹಿಸುತ್ತಾ 200 ಕ್ಕೂ ಹೆಚ್ಚು ಲೇಖಕರಿಗೆ ವೇದಿಕೆ ಕಲ್ಪಿಸಿ, ಸುಮಾರು 3000 ಲೇಖನಗಳನ್ನು ಪ್ರಕಟಿಸಿದ್ದಾರೆ. 'ಆಕೆ ಕೊಟ್ಟ ಮಿಸ್ ಕಾಲ್' ಅವರ ಮೊದಲ ಹಾಗೂ ಜನ ಮೆಚ್ಚಿದ ಕತೆಯಾಗಿದ್ದು, ಕತೆ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ, ಲೇಖನ ಹಾಗೂ ಸಂದರ್ಶನಗಳನ್ನು ಒಟ್ಟು ಸೇರಿದಂತೆ 100 ಕ್ಕೂ ಹೆಚ್ಚು ಲೇಖನಗಳನ್ನು ಬರೆದು,ಪ್ರಕಟಿಸಿದ್ದಾರೆ.
ಆಕೃತಿಗಾಗಿ ಮಾಡಿದ ಮುಖ್ಯ ಸಂದರ್ಶನಗಳು :
ಖ್ಯಾತ ನಿರ್ದೇಶಕ ಟಿ ಎಸ್ ನಾಗಭರಣ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೇಕಪ್ ರಾಮಕೃಷ್ಣ, ಪದ್ಮಶ್ರೀ ಪುರಸ್ಕೃತೆ ಸೀತಕ್ಕ ಜೋಡಟ್ಟಿ, ಅಂತಾರಾಷ್ಟ್ರೀಯ ಸ್ಕೇಟಿಂಗ್ ಪಟು ರಾಘವೇಂದ್ರ ಸೋಮಯಾಜಿ, ಮೂಡಲ ಮನೆ ಕ್ಯಾಮರಾ ಮ್ಯಾನ್ ನಾಗರಾಜ್ ಆದವಾನಿ, ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ವಜ್ರಮುನಿ ಧರ್ಮಪತ್ನಿ, ಪದ್ಮಾಶ್ರೀ ಪುರಸ್ಕೃತ ಪ್ಯಾರ ಅಥ್ಲೆಟಿಕ್ ವೆಂಕಟೇಶ್, ಖ್ಯಾತ ನಟಿಯರಾದ ಲಕ್ಷ್ಮಿ ನಾಡಗೌಡ, ಅಕ್ಷತಾ ಪಾಂಡವಪುರ ಸೇರಿದಂತೆ ಹಲವಾರು ಸಾಧಕರ ಸಂದರ್ಶನ ಮಾಡಿದ್ದಾರೆ.