ಮೂಕ ಪ್ರಾಣಿಗಳ ಮೇಲೆ ದಯೆ ಇರಲಿ

ಮೂಕ ಪ್ರಾಣಿಗಳಿಗೆ ಸಹಾಯ ಹಸ್ತ ಚಾಚದಿದ್ದರೂ ಪರವಾಗಿಲ್ಲ, ತೊಂದರೆ ಕೊಡಬೇಡಿ. ವಿಜಯ್ ಕುಮಾರ್ ಅವರ ಈ ಪುಟ್ಟ ಬರಹವನ್ನು ತಪ್ಪದೆ ಮುಂದೆ ಓದಿ…

ಮನುಷ್ಯನ ಆಸೆ ಅತಿಯಾಗಿದೆ ಸಂಪನ್ಮೂಲಗಳಲ್ಲ ತಾನೆ ಬಳಸಿಕೊಳ್ಳಬೇಕು ಎನ್ನುವ ದುರಾಸೆಯು ಹೆಚ್ಚಾಗಿ ಮನುಷ್ಯನ ಈ ಅತಿ ಆಸೆಯಿಂದಾಗಿ ಅದೆಷ್ಟೋ ಜೀವಿಗಳು ಎಷ್ಟು ಕಷ್ಟಪಡುತ್ತಿದೆಯೋ ಮಾನವ ಒಂದೊಂದು ಪ್ರಗತಿಯು ಪ್ರಾಣಿ ಪಕ್ಷಿಗಳ ಜೀವನದ ಅವನತಿಗೆ ಒಂದು ಹೆಜ್ಜೆಯಾಗುತ್ತಿದೆ.

ಪಾಪ ಅವುಗಳು ಹುಟ್ಟುತ್ತಲೇ ಹೋರಾಟದ ಬದುಕು ಬಿಸಿಲು, ಚಳಿ, ಮಳೆ, ಇಂದಾಗಿ ಆಶ್ರಯ ಪಡೆಯಲು ಅಂಗಡಿ ಬಳಿ ಮನೆ ಹತ್ತಿರ ಬಂದರೆ ಅವುಗಳಿಗೆ ಕಲ್ಲಿನಿಂದ ಹೊಡೆಯುವುದು ಓಡಿಸುವುದು ಇಂತಹ ಕೆಲಸವನ್ನು ಮಾನವರು ಮಾಡುತ್ತಾರೆ. ಬಿಸಿಲು, ಮಳೆ, ಚಳಿ ಇಂದಾಗಿ ಎಷ್ಟು ಕಷ್ಟ ಪಡುತ್ತಿದೆಯೋ ಆ ಮುಖ ಜೀವಿಗಳು ಅವುಗಳು ವಾಸಿಸುವ ಜಾಗವನ್ನೆಲ್ಲ ತಾನು ಆವರಿಸಿಕೊಂಡು ಅವುಗಳು ಮತ್ತು ಪ್ಲಾಸ್ಟಿಕ್ ಗಳನ್ನು ಮನುಷ್ಯರು ಅತಿಯಾಗಿ ಬಳಸುತ್ತಾರೆ .

ಅವುಗಳನ್ನು ರಸ್ತೆಯಲ್ಲಿ ಕಂಡ ಕಂಡ ಕಡೆಯಲಿಲ್ಲ ಎಸೆಯುವುದರಿಂದಾಗಿ ಹಸಿವನ್ನು ತಾಳಲಾರದ ಜೀವಿಗಳು ಆ ಪ್ಲಾಸ್ಟಿಕ್ ಅನ್ನು ತಿಂದು ತಮ್ಮ ಆರೋಗ್ಯ ದಲ್ಲಿ ಏರುಪೇರು ಕಂಡು ಪ್ರಾಣವನ್ನು ಕಳೆದುಕೊಳ್ಳುತ್ತವೆ .ಇಂತಹ ಪ್ರಾಣಿಗಳ ಬಗ್ಗೆ ಸರ್ಕಾರ ಒಂದು ಒಳ್ಳೆಯ ಕ್ರಮವನ್ನು ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಸಂಕಟವನ್ನು ಪಡುತ್ತಿರುವ ಮೂಕ ಪ್ರಾಣಿಗಳಿಗೆ ಚಿಕಿತ್ಸೆಯನ್ನು ನೀಡುವುದಕ್ಕೆ ಸರ್ಕಾರದಿಂದ ಯೋಜನೆಗಳನ್ನು ಮಾಡಬೇಕು ಮತ್ತು ಅವುಗಳಿಗೆ ಆಹಾರವನ್ನು ದೊರಕಿಸುವ ಒಂದು ಒಳ್ಳೆಯ ಕೆಲಸವನ್ನು ಪ್ರತಿ ಮಾನವರು ಮಾಡಬೇಕು.


  • ವಿಜಯ್ ಕುಮಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading