ಭಕ್ತಿ ಎನ್ನುವುದು ಬಾಹ್ಯದ ತೋರಿಕೆಯಲ್ಲ, ಯಾರದೋ ಮೆಚ್ಚುಗೆಗಂತು ಅಲ್ಲವೇ ಅಲ್ಲ…ಕವಿ ನಾಗರಾಜ ಜಿ.ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಇರಬೇಕು ನಮ್ಮ ಮನದೊಳಗೆ ಭಕ್ತಿ
ತುಂಬುವುದು ಅದು ನಮ್ಮೊಳಗೆ ಶಕ್ತಿ
ಬದಲಾವಣೆಯ ಹೊಂದುವನು ವ್ಯಕ್ತಿ
ಬಳಸಿಕೊಂಡಾಗ ಬಾಳಿನಲ್ಲಿ ಯುಕ್ತಿ
ಪರಿಶುದ್ಧವಾಗಿರಬೇಕು ನಮ್ಮ ಅಂತರಂಗ
ಒಂದಾಗಿರಬೇಕು ಅಂತರಂಗ ಬಹಿರಂಗ
ದೇವರು ಕೊಟ್ಟಿರುವನು ನಮಗೆ ಸಕಲಾಂಗ
ತೋರಬಾರದು ನಮ್ಮ ಮಾನಸಿಕ ವಿಕಲಾಂಗ
ಭಕ್ತಿ ಎನ್ನುವುದು ಬಾಹ್ಯದ ತೋರಿಕೆಯಲ್ಲ
ಯಾರದೋ ಮೆಚ್ಚುಗೆಗಂತು ಅಲ್ಲವೇ ಅಲ್ಲ
ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕು
ಪ್ರೀತಿ ಆತ್ಮೀಯತೆಯನ್ನು ಹಂಚುತ್ತಿರಬೇಕು
ನಮಗದು ಮನಶಾಂತಿಯನ್ನು ನೀಡಬೇಕು
ದೈನಂದಿನ ಬದುಕಿನ ಒತ್ತಡವ ನಿವಾರಿಸಬೇಕು
ಶಾಂತಿ ಸಹನೆ ನೆಮ್ಮದಿಯನ್ನು ಹೊಂದಬೇಕು
ಸಮಾಜದ ಒಳಿತಿಗಾಗಿ ನಾವು ಪ್ರಾರ್ಥಿಸಬೇಕು
ಶಿವರಾತ್ರಿಗೆ ಕೈಗೊಳ್ಳುವರು ವಿಶೇಷ ಜಾಗರಣೆ
ಶಿವಾರಾಧನೆಯ ಕುರಿತು ಭಕ್ತಿಯ ಆಚರಣೆ
ದಿನವಿಡೀ ಉಪವಾಸದಿ ಶಿವಸ್ತೋತ್ರ ಸ್ಮರಣೆ
ಭಕ್ತಾದಿಗಳಿಗೆ ಶಿವ ತೋರುವನು ಸದಾ ಕರುಣೆ
- ನಾಗರಾಜ ಜಿ.ಎನ್. ಬಾಡ, ಕುಮಟ
