ಕಪ್ಪು ಟೊಮೆಟೊ ಮಹತ್ವ – ಮಂಜುನಾಥ್ ಪ್ರಸಾದ್

ಕಪ್ಪು ಟೊಮೆಟೊ ಇತ್ತೀಚಿನ ದಶಕಗಳಲ್ಲಿ ನಮ್ಮ ಭಾರತ ಸೇರಿದಂತೆ ವಿಶ್ವದ ಇತರೆಡೆ ಬೆಳೆಸಲಾಗುತ್ತಿದ್ದು, ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳು ವಿವಿಧ ದೇಶಗಳಲ್ಲಿ ನಡೆಯುತ್ತಿದೆ, ಇದರ ಕುರಿತು ಮಂಜುನಾಥ್ ಪ್ರಸಾದ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಇದು ಅತ್ಯಂತ ಅಪರೂಪದ ಕಪ್ಪು ಬಣ್ಣದ ಟೊಮೆಟೊ. ನಮ್ಮಲ್ಲಿ ಬೆಳೆಯುವ ಕೆಂಪು ಬಣ್ಣದ ಟೊಮೆಟೊ ಜಾತಿಗೆ ಸೇರಿರುವ (ಕುಟುಂಬ – Solanaceae) ಇದರ ಬಣ್ಣ ನೈಸರ್ಗಿಕವಾಗಿ ಬಂದದ್ದು. ಅಂದರೆ hybrid ತಳಿ ಅಲ್ಲ.

ನೂರಾರು ವರ್ಷಗಳ ಹಿಂದಿನಿಂದಲೂ ಉಕ್ರೇನ್ ( Ukraine ) ದೇಶದ ಮೂಲದ ಈ ಕಪ್ಪು ಟೊಮೆಟೊ ಇತ್ತೀಚೆಗೆ ತನ್ನಲ್ಲಿರುವ ವಿಶಿಷ್ಟವಾದ ರುಚಿ, ಅಧಿಕವಾಗಿರುವ ವಿಟಮಿನ್ಗಳು ಮತ್ತು ಖನಿಜಾಂಶಗಳ ಕಾರಣ, ಇತರ ಟೊಮೆಟೊಗಳಲ್ಲಿ ಇರದ ಔಷಧೀಯ ಗುಣಗಳಿಂದಾಗಿ ವಿಶ್ವದ ಎಲ್ಲೆಡೆ ಹೆಚ್ಚು ಹೆಚ್ಚು ಪ್ರಚಾರ ಪಡೆಯುತ್ತಿದೆ.

ಇದರ ಕಡುಕಪ್ಪು ಬಣ್ಣಕ್ಕೆ ಮೂಲ ಕಾರಣ ಇದರಲ್ಲಿರುವ Anthocyanins ಎಂಬ ಬಣ್ಣ ನೀಡುವ pigment ಮತ್ತು Anthocynidins ಎಂಬ ರಾಸಾಯನಿಕ. ಹಾಗಾಗಿ ಹಣ್ಣಿನ ಒಳಬಾಗ ಕೆಂಪು ಮಿಶ್ರಿತ ಕಂದು ಬಣ್ಣ. ಈ Anthocyanins ಕಾರಣದಿಂದಾಗಿ ಕಪ್ಪು ಟೊಮೆಟೊಗೆ ಕೀಟಗಳ ಹಾಗೂ ಕೆಂಪು ಟೊಮೆಟೊಗೆ ಬರುವ ಇತರ ರೋಗಗಳ ಭಾದೆ ಇರುವುದಿಲ್ಲ. ಅದೇ ರೀತಿ ಕಪ್ಪು ಟೊಮೆಟೊ ಸೇವಿಸುವುದರಿಂದ ನಮ್ಮ ಶರೀರಕ್ಕೆ ಅತ್ಯಧಿಕ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ Antibacterial ಗುಣಗಳಿಂದಾಗಿ ಬ್ಯಾಕ್ಟೀರಿಯಾಗಳಿಂದ ಬರುವ ಎಲ್ಲಾ ದೈಹಿಕ ಸಮಸ್ಯೆಗಳು, ವಿಶೇಷವಾಗಿ ಹೆಣ್ಣುಮಕ್ಕಳ UTI ( Urinery Track Infection ) ನಿವಾರಣೆಯಾಗುತ್ತೆ.
ಜೊತೆಗೆ ರಕ್ತಕ್ಕೆ ಸೇರುವ ಕೆಟ್ಟ ಕೊಬ್ಬನ್ನು ಗಣನೀಯವಾಗಿ ಕಡಿಮೆಮಾಡುವ ಗುಣವಿರುವುದರಿಂದ ( Lipid profile ) ಅಧಿಕ ಕೊಬ್ಬಿನ ಕಾರಣದಿಂದ ಬರುವ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತೆ.

ಫೋಟೋ ಕೃಪೆ :pinterest

ಎಲ್ಲಾ ಹೃದಯ ಸಂಬಂಧಿ ತೊಂದರೆಗಳನ್ನು ( Cardiovascular disease ) ಪರಿಹರಿಸುವ ಗುಣ ಇದರಲ್ಲಿದೆ. ಈ Anthocyanins ಕಾರಣದಿಂದಾಗಿ ದೇಹದ ಪ್ರತಿಯೊಂದು ಕಣಗಳಿಗೂ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ಮತ್ತು ಶಕ್ತಿ ಸಂಚಾರವಾಗುವುದರಿಂದಾಗಿ ಯಾವುದೇ ರೀತಿಯ ಕ್ಯಾನ್ಸರ್ ಕಣಗಳನ್ನು ( Cancerous cell’s ) ನಿವಾರಿಸಲು ಸಹಕಾರಿ. ಈ ಕಪ್ಪು ಟೊಮ್ಯಾಟೋ ದಿಂದ ಕ್ಯಾನ್ಸರ್ ನಿರೋಧಕ ಔಷಧೀಯ ತಯಾರಿಕೆಯ ಸಂಶೋಧನೆ ನಡೆಯುತ್ತಿದೆ.

ಕಪ್ಪು ಟೊಮೆಟೊದಲ್ಲಿರುವ Lycopene ಎಂಬ ಅಂಶವು ಪ್ರೊಸ್ಟೇಟ್ ಗ್ರಂಥಿಯ ( Prostate gland ) ಊತ ಮತ್ತು ಸಂಭವನೀಯ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಸಕ್ಕರೆ ಕಾಯಿಲೆಯನ್ನು ( Diabetes ) ಸಹ ಪರಿಣಾಮಕಾರಿಯಾಗಿ ಈ ಕಪ್ಪು ಟೊಮೆಟೊ ಸೇವನೆ ಕಡಿಮೆಮಾಡುವುದೆಂದು ತಿಳಿಯಲಾಗಿದೆ. ಮುಖ್ಯವಾಗಿ ಇತ್ತೀಚಿನ ಸಂಶೋಧನೆಗಳು ಈ ಕಪ್ಪು ಟೊಮೆಟೊ ಸೇವನೆಯಿಂದ ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ ಮತ್ತು ಅವುಗಳ ಆರೋಗ್ಯ ಮತ್ತು ಚಲನೆ ಹೆಚ್ಚುತ್ತದೆ ( Sperm count and motility ) ಎಂದು ದೃಢಪಟ್ಟಿದೆ.

ಹಲವು ಶತಮಾನಗಳ ಕಾಲ ಕೇವಲ ಉಕ್ರೇನ್ ದೇಶಕ್ಕೆ ಮಾತ್ರ ಗೊತ್ತಿದ್ದ ಈ ಕಪ್ಪು ಟೊಮೆಟೊ ಇತ್ತೀಚಿನ ದಶಕಗಳಲ್ಲಿ ನಮ್ಮ ಭಾರತ ಸೇರಿದಂತೆ ವಿಶ್ವದ ಇತರೆಡೆ ಬೆಳೆಸಲಾಗುತ್ತಿದೆ. ಅದೇ ರೀತಿ ಇದರಲ್ಲಿರುವ ಮತ್ತಷ್ಟೂ ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳು ವಿವಿಧ ದೇಶಗಳಲ್ಲಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಕಪ್ಪು ಟೊಮೆಟೊ ಮತ್ತೊಂದು ಆರೋಗ್ಯಕರ ತರಕಾರಿಯಾಗಲಿದೆ.

ಇತ್ತೀಚಿಗೆ ನಾನು ಭಾಗವಹಿಸಿದ ಒಂದು ಸೆಮಿನಾರ್ ನಲ್ಲಿ ನನಗೆ ತಿಳಿದು ಬಂದ ವಿಷಯವೆಂದರೆ ನಮ್ಮ ದೇಶದ ಗುಜರಾತ್ ರಾಜ್ಯ ಒಂದರಲ್ಲೇ (ಅಲ್ಲಿಯೇ ಇತ್ತೀಚಿಗೆ ಹೆಚ್ಚು ಕಪ್ಪು ಟೊಮೆಟೊ ಬೆಳೆಯುವುದು ) ಅವರ ಆಹಾರ ಪದ್ಧತಿಯಲ್ಲಿ ಈ ಟೊಮೆಟೊ ಸೇರಿಸಿಕೊಂಡ ನಂತರ ವರ್ಷಕ್ಕೆ ಸುಮಾರು 20 ಸಾವಿರ ಕೋಟಿ ರೂಪಾಯಿಯಷ್ಟು ಮಾತ್ರೆ ಮತ್ತು ಔಷಧೀಯ ಉಪಯೋಗ ಕಮ್ಮಿಯಾಗಿದೆಯಂತೆ.

ಫೋಟೋ ಕೃಪೆ :pinterest

ಈಗ ಪತಂಜಲಿ ಸಂಸ್ಥೆಯವರು ತಾವೇ ಕಪ್ಪು ಟೊಮೆಟೊ ಬೆಳೆದು ಅದರಿಂದ ಹೃದಯದ ಮತ್ತು ಕ್ಯಾನ್ಸರ್ ತೊಂದರೆ ನಿವಾರಿಸುವ ಆಯುರ್ವೇದ ಔಷಧ ತಯಾರಿಸುತ್ತಿದ್ದಾರೆ.
ರೈತರು ತೋಟದಲ್ಲಿ ಬೆಳೆದು ಮಾಲ್ ಗಳಿಗೆ ಒಳ್ಳೆಯ ಲಾಭಕ್ಕೆ ಮಾರಬಹುದು. ಮನೆಯ ಕೈತೋಟ ಇಲ್ಲವೇ ಪಾಟ್ಗಳಲ್ಲಿ ಬೆಳೆದುಕೊಂಡು ವಾರಕ್ಕೊಮ್ಮೆ ಉಪಯೋಗಿಸಿದರೂ ಮನೆಮಂದಿ ಎಲ್ಲಾ ಆರೋಗ್ಯದಿಂದ ಇರಬಹುದು. ಬಿತ್ತನೆ / ನಾಟಿ ಮಾಡಿದ 100 ದಿನಗಳಲ್ಲಿ ಮೊದಲ ಫಸಲು ಸಿಗುತ್ತೆ.

ನಿಮಗೂ ಈ ಕಪ್ಪು ಟೊಮೆಟೊ ಬೆಳೆಸುವ ಇಷ್ಟವಿದ್ದಲ್ಲಿ, Amazon ನಲ್ಲಿ ಬೀಜಗಳು ಸಿಗುತ್ತೆ.

( 50 ಕ್ಕೆ ರೂ. 99.00 , Flipkart ನಲ್ಲಿ 125 ಬೀಜಕ್ಕೆ ರೂ. 80.00 + delivery charges. ಹುಡುಕಿ ತರಿಸಿಕೊಳ್ಳಿ. ಎಲ್ಲಿ ಸಿಗುತ್ತೆ…? ನಿಮ್ಮ ಬಳಿ ಇದೆಯಾ…? ನನಗೆ ಸಸಿ ಕೊಡಿ, ಬೀಜ ಕೊಡಿ ಎಂಬ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ )


  • ಮಂಜುನಾಥ್ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading