ಮದ್ದರಸ ಹೂವಿನ ರಸ ತೆಗೆದು ಎಣ್ಣೆಯಲ್ಲಿ ಕುದಿಸಿ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ, ಮದ್ದರಸ ಕುರಿತು ನಾಟಿವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಇದು ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಾಣಿಸಿರುವ ಸಸ್ಯ ನೋಡಲು ಕುಟಜ ಅಂದರೆ ಕೊಡಸು ರೀತಿಯಲ್ಲಿಯೇ ಇರುತ್ತದೆ ಆದರೆ ತೊಗಟೆ ದೊರಗಿರುತ್ತದೆ. ಮಳೆಗಾಲದಲ್ಲಿ ಕಾಯಿ ಕಟ್ಟುವ ಇದು ಸಾಧಾರಣ ಗಣೇಶ ಚೌತಿ ಸಮಯದಲ್ಲಿ ಹಣ್ಣಾಗುತ್ತದೆ. ನಮ್ಮಲ್ಲಿ ಫಲವಳಿಗೆ ಕಟ್ಟುವ ಪದ್ಧತಿ ಇದೆ ಇದನ್ನು ಗೌರಿ ಎಂದು ಭಾವಿಸಲಾಗುತ್ತದೆ. ಇದು ಒಳ್ಳೆಯ ಔಷಧೀಯ ಗುಣವನ್ನು ಹೊಂದಿರುವ ಸಸ್ಯವು ಹೌದು.
ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರು ಎಲ್ಲವೂ ಔಷಧಿಯಾಗಿ ಉಪಯೋಗಿಸುತ್ತಾರೆ.
ಫೋಟೋ ಕೃಪೆ : google
1) ಇದರ ಚಕ್ಕೆಯನ್ನು ಕುಟ್ಟಿ ಬಾವು ಬಂದ ಜಾಗಕ್ಕೆ ಕಟ್ಟಿದರೆ ಬಾವು ಸಹಜವಾಗಿ ಇಳಿಯುತ್ತದೆ.
2) ಇದರ ಚಕ್ಕೆಯನ್ನು ನೀರಿನಲ್ಲಿ ತೈಯ್ದು ಚರ್ಮರೋಗಕ್ಕೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.
3) ಚಕ್ಕಿಯರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಅಂಗಾಲು ಉರಿ ಗುಣವಾಗುತ್ತದೆ ಶುಗರ್ ನಿಂದ ಬಂದ ಅಂಗಾಲುರಿ ಅಲ್ಲ.
4) ಇದರ ಚಕ್ಕೆ ಅಮೃತಬಳ್ಳಿ ಆಡಿಸೋಗೆ ಭದ್ರಮುಷ್ಟಿ ಕಹಿಬೇವು ಸಮ ಪ್ರಮಾಣದಲ್ಲಿ ಸೇರಿಸಿ ಚತುರ್ಥಾಂಶ ಕಷಾಯ ಮಾಡಿ ಕುಡಿಯುವುದರಿಂದ ಎಲ್ಲಾ ತರದ ಜ್ವರಗಳು ಗುಣವಾಗುತ್ತದೆ.
5) ಗಿಡವನ್ನು ಕೆತ್ತಿದಾಗ ಹಾಲು ಸ್ರವಿಸುತ್ತದೆ ಇದನ್ನು ಹಲ್ಲು ನೋವಿರುವ ಜಾಗದಲ್ಲಿ ಹತ್ತಿಯ ಸಹಾಯದಿಂದ ಹಚ್ಚಿದರೆ ಹಲ್ಲು ನೋವು ಗುಣವಾಗುತ್ತದೆ.
6) ಹೂವಿನ ರಸ ತೆಗೆದು ಎಣ್ಣೆಯಲ್ಲಿ ಕುದಿಸಿ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.
7) ಮದ್ದರಸ ಹೆಸರು ಸೂಚಿಸುವಂತೆ ಇದು ಮದ್ದಿಗೆ ಅರಸ ನಾನು ತಯಾರಿಸುವ ಥೈರಾಯಿಡ್ ಮೆಡಿಸಿನ್ಗೆ ಇದನ್ನು ಉಪಯೋಗಿಸುತ್ತೇನೆ.
8) ನಮ್ಮಲ್ಲಿ ಒಂದು ಗಾದೆ ಇದೆ ತೀರ್ಥ ಕುಡಿದರೆ ತಂಡಿ ಪ್ರಸಾದ ತಿಂದರೆ ಉಷ್ಣ ಎಂದರೆ ದೇಹ ಅತಿ ಸೂಕ್ಷ್ಮ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದು ಅರ್ಥ. ಇಂಥವರಲ್ಲಿ ಯಾವುದೇ ಔಷಧಿ ಮಾಡಿದರು ಕಷ್ಟ. ಇವರಿಗೂ ಸಹ ಒಗ್ಗಿಕೊಳ್ಳುವ ಗಿಡ ಮದ್ದರಸ.
9) ನವರಾತ್ರಿಯ ಮೂಲ ನಕ್ಷತ್ರದಂದು ವಿಧಿವತ್ತಾಗಿ ಮೂಲ ಮಂತ್ರದಿಂದ ಪೂಜಿಸಿದ ಈ ಗಿಡದ ಮೇಲಿರುವ ಬಂದಳಿಕೆ ತಂದು ವಿಜಯದಶಮಿಯಂದು ಶೋಡ ಶೋಪಚಾರ ಪೂಜೆ ಮಾಡಿ ವ್ಯವಹಾರದ ಸ್ಥಳದಲ್ಲಿ ಕಟ್ಟುವುದರಿಂದ ಉನ್ನತಿಯನ್ನು ಕಾಣಬಹುದು. ಇದು ಪೂರ್ವಿಕರು ನಡೆಸಿಕೊಂಡು ಬಂದ ಪದ್ಧತಿಯಾಗಿರುತ್ತದೆ.
- ಸುಮನಾ ಮಳಲಗದ್ದೆ – ನಾಟಿವೈದ್ಯರು