ಕನ್ನಡದಲ್ಲಿ ಡಯಾಬಿಟೀಸ್ ತಜ್ಞರು ಬರೆದ ಮೊದಲ ಪುಸ್ತಕ ‘ಡಯಾಬಿಟೀಸ್ ರಿವರ್ಸಲ್ ಸತ್ಯ ಮತ್ತು ಮಿಥ್ಯ’ ಡಾ ಪ್ರೀತಮ್ ಅವರ ಈ ಪುಸ್ತಕದ ಕುರಿತು ಅರುಣ್ ಪ್ರಸಾದ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಡಯಾಬಿಟೀಸ್ ರಿವರ್ಸಲ್ ಸತ್ಯ ಮತ್ತು ಮಿಥ್ಯ
ಲೇಖಕರು :ಡಾ ಪ್ರೀತಮ್
ಬೆಲೆ : ೭೦.೦೦
ಖರೀದಿಗಾಗಿ : ಡಾ.ಪ್ರೀತಮ್ ಡಯಾಬಿಟೀಸ್ ಸೆಂಟರ್, ದುಗಿ೯ಗುಡಿ. ಮೊದಲನೆ ಸಮಾನಾಂತರ ರಸ್ತೆ ಶಿವಮೊಗ್ಗ.
7899838546, ವಾಟ್ಸಪ್ 9449138546.
ನಾನು ನನ್ನ ಪ್ರಾಯದ ದಿನಗಳಲ್ಲಿ ಬಿ.ಪಿ. ಶುಗರ್ ನನಗೆ ಬರುವುದು ಸಾಧ್ಯವೇ ಇಲ್ಲ ಎಂಬ ಹುಮ್ಮಸ್ಸಿನಲ್ಲಿದ್ದೆ . ಅಂತಹ ಒಂದು ದಿನ 2008 ರಲ್ಲಿ ಬೆಂಗಳೂರಿಂದ ಮೈಸೂರಿಗೆ ಪ್ರಯಾಣ ಮಾಡುವಾಗ ವಿಪರೀತ ಬಾಯಾರಿಕೆ ಅನುಭವಿಸಿದೆ. ಕೋಲ್ಡ್ ನೀರು, ಕೋಲ್ಡ್ 7 UP ಬಾಟಲಿ ಬಾಟಲಿ ಕುಡಿದರೂ ದಾಹ ತಣಿಯಲಿಲ್ಲ. ಆಗ ನಾನು ಪೋನಾಯಿಸಿದ್ದು ಅವತ್ತಿನ ನನ್ನ ಫ್ಯಾಮಿಲಿ ಡಾಕ್ಟರ್ ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಹೊಂ ಡಾಕ್ಟರ್ ನಾಗೇಂದ್ರರಿಗೆ ಈಗ ಅವರು ಶಿವಮೊಗ್ಗದ ಪ್ರಖ್ಯಾತ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾಲೀಕರು .
ಅವರು ಆಗ ಹೇಳಿದ್ದು, ನಿಮಗೆ ಡಯಾಬಿಟೀಸ್ ಪ್ರಾರಂಭ ಆಗಿದೆ. ಭಯ ಬೀಳಬೇಡಿ. ನೀರು ಕುಡಿಯಿರಿ. ಸಿಹಿ ಪೇಯ ಸೇವಿಸ ಬೇಡಿ. ನಿಮ್ಮ ಕೆಲಸ ಮುಗಿ, ಊರು ತಲುಪಿದಾಗ ತಪಾಸಣೆಗೆ ಬನ್ನಿ ಅಂದರು. ಆಗ ನಾನು ಮಂಡ್ಯ, ಮೈಸೂರು ಮಧ್ಯದ ಬಾಬುರಾವ್ ಕೊಪ್ಪಲಿನ ಪ್ರಖ್ಯಾತ ಬನ್ನೂರು ಕುರಿ ಖಾದ್ಯದ ಹೋಟೆಲ್ ನಲ್ಲಿದ್ದೆ.

ಊರಿಗೆ ವಾಪಾಸಾಗಿ ಡಾ.ನಾಗೇಂದ್ರರಲ್ಲಿ ಹೋದಾಗ ನನ್ನ ಶುಗರ್ ಲೆವೆಲ್ 390 ದಾಟಿತ್ತು. ಆಗಲೇ ಡಾ.ಪ್ರೀತಂ ಡಯಾಬಿಟೀಸ್ ತಜ್ಞರಾಗಿ ನನಗೆ ಪರಿಚಯವಾದರು. ಕಳೆದ 15 ವರ್ಷದಿಂದ. ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾಕ್ಟರ್ ಭುಜಂಗ ಶೆಟ್ಟರು ಡಯಾಬಿಟಿಸ್ ರಿವರ್ಸಲ್ ಬಗ್ಗೆ ಹೇಳಲು ಪ್ರಾರಂಭಿಸಿದಾಗ ಎಲ್ಲಾ ಡಯಾಬಿಟಿಸ್ ರೋಗಿಗಳಂತೆ ಆಸಕ್ತಿವಹಿಸಿದೆ. ಅದರಿಂದ ಸಂಪೂರ್ಣ ಡಯಾಬಿಟೀಸ್ ಗುಣವಾದವರೊಡನೆ ಮಾತಾಡಿದ್ದೆ.
ಶಿವಮೊಗ್ಗ ಜಿಲ್ಲೆಯ ನಮಗೆ ನಮ್ಮ ಜಿಲ್ಲೆಯಲ್ಲಿ ಇಂತಹ ವೈದ್ಯರು ಯಾರಾದರೂ ಬಂದಾರಾ ಎನ್ನುವಾಗ ಡಾ.ಪ್ರೀತಂ ಡಯಾಬಿಟೀಸ್ ರಿವರ್ಸಲ್ ಪ್ರಾರಂಭಿಸಿದರು. ಅವರ ಸಲಹೆ ಪಾಲಿಸಿದ್ದರಿಂದ ಕಳೆದ 13 ವರ್ಷದಿಂದ ಬಳಸುತ್ತಿದ್ದ ಇನ್ಸುಲಿನ್ ಚುಚ್ಚುಮದ್ದು 2 ವರ್ಷದಿಂದ ನಿಂತಿದೆ.

ಇವತ್ತು ಬೆಳಿಗ್ಗೆ ಡಾ ಪ್ರೀತಂ ಮಾರ್ಗ ಮಧ್ಯದ ಪ್ರಯಾಣದಲ್ಲಿ ನನ್ನ ಕಛೇರಿಗೆ ಬಂದು , ನಾನು ಇಲ್ಲದಿದ್ದರೂ ಅವರ ಪುಸ್ತಕ ತಲುಪಿಸಿ ಹೋಗಿದ್ದಾರೆ. 40 ಪುಟದ ಚಿಕ್ಕದಾದ ಚೊಕ್ಕದಾದ ಪುಸ್ತಕ ಯಾರು ಸುಲಭವಾಗಿ ಅರ್ಧ ಗಂಟೆಯಲ್ಲಿ ಓದಲು ಸಾಧ್ಯವಿದೆ. ಈ ಪುಸ್ತಕ ಓದಿದ ಯಾವುದೇ ಡಯಾಬಿಟಿಕ್ ರೋಗಿಗೆ ತನ್ನ ಡಯಾಬಿಟೀಸ್ ಕಾಯಿಲೆ ಸಂಪೂರ್ಣ ಗುಣಪಡಿಸಲು ಸಾಧ್ಯ ಎಂಬ ಆಶಾಭಾವನೆ ಮೂಡಿಸಲಿದೆ.
ಈ ಪುಸ್ತಕ ತೆರೆದಾಗ ಅಲ್ಲಿ ಬರೆದದ್ದು ತುಂಬಾ ಅರ್ಥಪೂರ್ಣ ನುಡಿಗಟ್ಟು ಆಹಾರ ಕ್ರಮವು ತಪ್ಪಾಗಿದ್ದರೆ ಔಷಧಿಗಳು ಪ್ರಯೋಜನವಿಲ್ಲ. ಆಹಾರ ಕ್ರಮವು ಸರಿಯಾಗಿದ್ದರೆ ಔಷಧಿಗಳ ಅವಶ್ಯಕತೆಯೇ ಇಲ್ಲ. ಈ ಪುಸ್ತಕ ಅವರ ತಂದೆ ಡಾ. ಈಶ್ವರಪ್ಪರಿಗೆ ಮತ್ತು ಅವರ ಗುರು ಡಾ. ವಿಜಯ ವಿಶ್ವನಾಥಕ್ಕೆ ಅರ್ಪಿಸಿದ್ದಾರೆ. ಕೃತಜ್ಞತೆಯ ಸಾಲಿನಲ್ಲಿ ನನ್ನ ಹೆಸರೂ ಸೇರಿಸಿದ್ದಾರೆ.

ಶುದ್ಧ ಕನ್ನಡದಲ್ಲಿ ಸುಲಭವಾಗಿ ಅರ್ಥ ಆಗುವಂತೆ ಮತ್ತು ಡಯಾಬಿಟೀಸ್ ಸಂಪೂರ್ಣವಾಗಿ ಗುಣಪಡಿಸಿಕೊಳ್ಳುವ ಮಾಹಿತಿ ಈ ಪುಸ್ತಕದಲ್ಲಿದೆ. 40 ಪುಟಗಳ ಈ ಪುಸ್ತಕದ ಬೆಲೆ ರೂ 70 ಮಾತ್ರ ನಾನು ಅವಶ್ಯಕತೆ ಇರುವ ಗೆಳೆಯರಿಗೆ ಗಿಪ್ಟ್ ಆಗಿ ನೀಡಲು 25 ಪುಸ್ತಕ ಖರೀದಿಸಲಿದ್ದೇನೆ.
ಡಾ ಪ್ರೀತಮ್ ಅವರ ಚಿಕಿತ್ಸೆಯಿಂದಲೇ ನಾನು ನನ್ನ ಡಯಾಬಿಟಿಸ್ ನಿಯಂತ್ರಣದಲ್ಲಿದೆ. ಈ ಬರಹ ಬರೆಯುವ ಮುನ್ನ ಸಿಹಿಯಾದ ಗಿಣ್ಣ ತಿಂದಿದ್ದೇನೆ ಅಂದರೆ ನೀವೇ ಯೋಚನೆ ಮಾಡಿ ಡಾ ಪ್ರೀತಮ್ ಅವರ ಡಯಾಬಿಟೀಸ್ ತಜ್ಞತೆ.
ಕನ್ನಡದಲ್ಲಿ ಡಯಾಬಿಟೀಸ್ ತಜ್ಞರು ಬರೆದ ಮೊದಲ ಪುಸ್ತಕ ಎಂಬುದು ನಮ್ಮ ಶಿವಮೊಗ್ಗದ ಡಾ. ಪ್ರೀತಮ್ ಅವರ ದಾಖಲೆ ಕೂಡ.
- ಅರುಣ್ ಪ್ರಸಾದ್
