ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ …
ಬೆಟ್ಟ ಬಂಡೆಯ
ಮೇಲೆ
ಗೆಜ್ಜೆಕಾಲ್ಗಳು
ನರ್ತಿಸುತಿವೆ
ಜೀವನೋಲ್ಲಾಸದ
ಪದವ ಹಾಡಿ
ಹಸಿರು ಬಸಿರೆಲ್ಲ
ಕಂಪಿಸಿದೆ
ಏಕೆ ರಂಗೇರಿತೋ
ಮೊಗ
ಇಣುಕಿದವರಾರು ಅಲ್ಲಿ
ನವಿಲುಗರಿಯ ಕಿರೀಟಿ
ನುಡಿಸಿರಬಹುದೇ ಕೊಳಲ
ಆ ಕಾನನದೆದೆಯ ಬೃಂದಾವನದಲ್ಲಿ
ಮತ್ತೇರಿದ್ದಾಳೆ ಗೋಪಿ
ಪಿಚಕಾರಿಯಲಿ
ರಂಗು ತುಂಬಿ
ಓಕುಳಿಯಾಟಕ್ಕೆ
ಮನವ ಹೂಡಿ
- ಶಿವದೇವಿ ಅವನೀಶಚಂದ್ರ