ಕಬ್ಬಿನ ಹಾಲಿನ ಸಿಹಿ ಕಿಲ್ಸಾ ಮಣ್ಣೆ ಹಲ್ವಾ

ಆಲೆಮನೆ ಎಂಬ ಮಲೆನಾಡಿನ ದೇಸಿ ಬೆಲ್ಲ ತಯಾರಿ ರೂಪಾಂತರ ಆಗಿದೆ. ಕಬ್ಬಿನ ಹಾಲಿನ ರಸ ಮಾರಾಟದ ಗಾಡಿಗಳಿಂದ ಕಬ್ಬಿನ ಹಾಲು ಖರೀದಿಸಿ. ಸುಲಭವಾಗಿ ಮನೇನಲ್ಲಿ ವರ್ಷ ಪೂರ್ತಿ ತಯಾರಿಸಿ ತಿನ್ನಬಹುದು. ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ಕಿಲ್ಸಾ ಮಣ್ಣೆ ಹಲ್ವಾ ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮನೆಯಲ್ಲಿ ನೀವು ಮಾಡಿ ನೋಡಿ….

#sugarcanejuice #sugarcane #

ಜಾಂಡಿಸ್ ಸಮಸ್ಯೆ ಹೊಂದಿದವರಿಗೆ ಕಬ್ಬಿನ ಹಾಲು ಬಲು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಏಕೆಂದರೆ ಜಾಂಡೀಸ್ ಬಂದಂತಹ ಸಂದರ್ಭದಲ್ಲಿ ವೈದ್ಯರು ಕೂಡ ಕಬ್ಬಿನ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ನಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವಲ್ಲಿ ಮತ್ತು ನಮ್ಮ ಲಿವರ್ ಭಾಗವನ್ನು ಸ್ವಚ್ಛವಾಗಿಸುವಲ್ಲಿ ಕಬ್ಬಿನ ಹಾಲು ಪ್ರಯೋಜನಕಾರಿ. ಯಕೃತ್ ಭಾಗದ ಕಾರ್ಯ ಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಕೂಡ ಕಬ್ಬಿನ ಹಾಲಿನ ಪಾತ್ರವನ್ನು ಮರೆಯುವಂತಿಲ್ಲ.

ಫೋಟೋ ಕೃಪೆ : ಅಂರ್ಜಾಲ

ಕಬ್ಬಿನ ಹಾಲು ಸೇವನೆ ಮೂಳೆಗಳಿಗೆ ಕ್ಯಾಲ್ಸಿಯಂ ಅಂಶವನ್ನು ಒದಗಿಸುವ ಜೊತೆಗೆ ಕಬ್ಬಿಣದ ಅಂಶ, ಮೆಗ್ನೀಷಿಯಂ ಅಂಶ, ಪೊಟ್ಯಾಶಿಯಂ ಮತ್ತು ಖನಿಜಾಂಶಗಳನ್ನು ನೀಡುತ್ತದೆ.
ಇದು ಮೂಳೆಗಳ ಸದೃಢತೆಗೆ ಕಾರಣವಾಗಿ ಮೂಳೆಗಳ ಆರೋಗ್ಯ ರಕ್ಷಣೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಆಸ್ಟಿಯೋಪೋರೋಸಿಸ್ ಮತ್ತು ಕೀಲುನೋವುಗಳು ಬರುವ ಸಾಧ್ಯತೆ. ಇರುವುದಿಲ್ಲ ಎಂಬ ವರದಿಗಳಿದೆ.

ಬೇಕಾಗುವ ಪದಾರ್ಥಗಳು :

  • ಕಬ್ಬಿನ ಹಾಲು – ಅರ್ಧ ಲೀಟರ್
  • ಅಕ್ಕಿ – ಒಂದು ಬಟ್ಟಲು
  • ಏಲಕ್ಕಿ ಪುಡಿ – ಸ್ವಲ್ಪ
  • ತುಪ್ಪ – ಸ್ವಲ್ಪ
  • ಬೆಲ್ಲ – ಸ್ವಲ್ಪ

ಮಾಡುವ ವಿಧಾನ :

ಅಕ್ಕಿಯನ್ನು ತೊಳೆದು ಸ್ವಲ್ಪ ನೀರಿನಲ್ಲಿ 2 ಗಂಟೆ ನೆನೆಸಿಡಿ. ನಂತರ ಇದನ್ನು ಅರ್ಧದಷ್ಟು ಕಬ್ಬಿನ ರಸದ ಜೊತೆ ಸೇರಿಸಿ. ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ಬಾಣಲೆಗೆ ಮಿಶ್ರಣವನ್ನು ಹಾಕಿ ಉಳಿದ ಕಬ್ಬಿನ ರಸ ಸೇರಿಸಿ. ಸ್ವಲ್ಪ ಬೆಲ್ಲ ಸೇರಿಸಿ ತಳ ಬಿಡುವವರೆಗೆ ಕಾಯಿಸಿ. ಬೆಂದ ನಂತರ ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ ಸಮನಾಗಿ ಹರಡಿಕೊಳ್ಳಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಕಬ್ಬಿನ ಹಾಲಿನ ಹಲ್ವ/ಮಣ್ಣಿ /ಕಿಲ್ಸಾ ಸವಿಯಲು ಸಿದ್ಧ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading