ಅಂಜಲಿ ದೇರಾಜೆ ಅವರ ಸುಂದರ ಕವನ ಓದುಗರ ಮುಂದೆ, ತಪ್ಪದೆ ಓದಿ …
ಹೆಣ್ಣಿನ ಜೀವನ ನೀರ ಮೇಲಿನ ತಾವರೆ
ಎಲ್ಲರೂ ವಸ್ತುವಂತೆ ಮಾತಾಡುತ್ತಾರೆ
ಮೌನವನು ಅರಿಯದೆ
ಮೋಹವನ್ನೇ ಅರಸುತ್ತಾರೆ
ಆದರೆ ಆಕೆ ಶುದ್ಧ ನೀರಂತೆ
ಸದಾ ಹರಿಯುತ್ತಾಳೆ…
ಹೆಣ್ಣಿನ ಮನಸ್ಸು ಹೂವಿನಂತೆ
ಅದರಲ್ಲಿ ತುಂಬಿಹುದು ಪ್ರೀತಿ, ಕರುಣೆ
ಸಹನೆ ಹೆಣ್ಣಿನ ಹೆಸರು
ಪ್ರೀತಿಯೇ ಅವಳ ಉಸಿರು …
ಎರಡು ಮನೆಯ ಬೆಳಕವಳು
ಎಲ್ಲರೊಂದಿಗೆ ಬೆರೆಯುವ ಮಗು ಇವಳು
ಎಲ್ಲರ ಪ್ರೀತಿಯಲ್ಲೊಂದಾಗಿ
ಮುಗ್ಧ ಮನಸ್ಸಿನ ರೂಪಕವೇ ಇವಳು…
ಹೆಣ್ಣು ನೀಡುವಳು ಜನ್ಮ
ಹೆಣ್ಣನ್ನು ಗೌರವಿಸುವುದು ನಮ್ಮ ಧರ್ಮ
ಜಾತಿ, ಧರ್ಮ ಬೇಧ ತೋರದೆ
ಹೆಣ್ಣು ಸಂಸಾರದ ಕಣ್ಣೆಂದು ಸಾರೋಣ…
- ಅಂಜಲಿ ದೇರಾಜೆ