‘ಹೊಸಗನ್ನಡದ ಅರುಣೋದಯ’ ಕೃತಿ ಪರಿಚಯ

ಡಾ.ಶ್ರೀನಿವಾಸ ಹಾವನೂರ ಅವರ “ಹೊಸಗನ್ನಡ ಅರುಣೋದಯ” ಸಂಶೋಧನಾ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಹೊಸಗನ್ನಡದ ಅರುಣೋದಯ
ಲೇಖಕರು : ಡಾ.ಶ್ರೀನಿವಾಸ ಹಾವನೂರ:
ಪ್ರಕಾಶನ :  ಕನ್ನಡ ಪುಸ್ತಕ ಪ್ರಾಧಿಕಾರ

ಮುಂಬಯಿ ಕನ್ನಡ ಲೋಕ: ಶಿಕ್ಷಣ: ಸಂಶೋಧನೆ
ಉತ್ತರ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಅವರು, ಸಾಂಗ್ಲಿಯ ವಿಲ್ಲಿಂಗಡನ್ ಕಾಲೇಜ್ ನಲ್ಲಿ ಡಾ.ರಂ.ಶ್ರೀ. ಮುಗುಳಿಯವರ ಮಾರ್ಗದರ್ಶನದಲ್ಲಿ ಬಿ.ಎ.ಪದವಿ ಪಡೆದರು. ಮುಂದೆ ಸ್ನಾತಕೋತ್ತರ ಪದವಿಯನ್ನು ಪಡೆದರಲ್ಲದೆ ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದರು. ನಂತರ ಟಾಟಾ ಮೂಲಭೂತ ಸಂಶೋಧನಾ ಕೇಂದ್ರದಲ್ಲಿ ಗ್ರಂಥಪಾಲರಾಗಿದ್ದರು.

ಆಗಲೇ ಅವರು ತಮ್ಮ ಮೊದಲ ಗುರುಗಳಾದ ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ “ಹೊಸಗನ್ನಡ ಅರುಣೋದಯ” ಕುರಿತು ಸಂಶೋಧನೆ ನಡೆಸಿ ಪುಣೆ ವಿ.ವಿ ಮೂಲಕ ಡಾಕ್ಟರೇಟ್ ಪದವಿಯನ್ನು ಪಡೆದರು. (೧೯೭೨). ಅದರ ಮೌಲ್ಯ ಮಾಪನ ಮಾಡಿದ ಹಾ.ಮಾ.ನಾಯಕರು ಮೌಖಿಕ ಪರೀಕ್ಷೆಯ ಅಗತ್ಯ ವಿಲ್ಲ ಎಂದು ಶಿಫಾರಸ್ಸು ಮಾಡಿದರಲ್ಲದೇ, ಅವರ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯದ ಮೂಲಕ ಪ್ರಕಟಿಸಿದರು. ಅದರಲ್ಲಿನ ಅಧಿಕೃತ ಮೌಲಿಕ ಮಾಹಿತಿಗಳ ಹೊಸತನಕ್ಕಾಗಿ ಈ ಕೃತಿ ಇಂದು ಹಲವಾರು ಮುದ್ರಣ ಗಳನ್ನು ಕಂಡಿರುವುದು ಮಹಾಪ್ರಬಂಧಗಳ ಮುದ್ರಣ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ಉಳದಿದೆ. ಈಚೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಅದರ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಿದೆ.

“ಹೊಸಗನ್ನಡ ಅರುಣೋದಯ” ದಲ್ಲಿನ ಕೆಲವು ಹೊಸತುಗಳನ್ನು ಮುಂದೆ ಕೊಡಲಾಗಿದೆ:
೧. ಕನ್ನಡದ ಮೊತ್ತ ಮೊದಲ ಪತ್ರಿಕೆ ” ಮಂಗಳೂರು ಸಮಾಚಾರ ” (೧೮೪೩) ಸಂಪಾದಕ: ಹರ್ಮನ್ ಮೊಗ್ಲಿಂಗ್.

೨. ವೀರಭದ್ರಪ್ಪ ಮಡಿವಾಳಪ್ಪ ಮು.ವಿ.ವಿ.ಮೊದಲ ಮೆಟ್ರಿಕ್ ಪಾಸಾದ ಕನ್ನಡದ ವಿದ್ಯಾರ್ಥಿ ( ೧೮೬೧).

೩. ಚುರಮುರಿ ಶೇಷಗಿರಿರಾವ್ ಅವರ ‘ಕನ್ನಡ ಶಾಕುಂತಲವು ‘ಮೊದಲ ಉನ್ನತ ಕರ್ನಾಟಕ ಜನಪದ ಪ್ರಭಾವಿತ ಸಂಸ್ಕೃತ ನಾಟಕದ ಅನುವಾದ ( ೧೮೬೯) .

೪. ಇದನ್ನು ಮೊದಲ ಬಾರಿಗೆ ಬಸವಪ್ಪ ಶಾಸ್ತ್ರಿಗಳ ಕರ್ನಾಟಕ ಅಭಿಜ್ಞಾನ ಶಾಕುಂತಲ ನಾಟಕದ ಜತೆಗಿರಿಸಿ ತೌಲನಿಕ ಅಧ್ಯಯನ ಮಾಡಿದರು.

೫. ಇದರ ಪ್ರೇರಣೆಯಿಂದ ಅಣ್ಣ ಕಿರ್ಲೋಸ್ಕರ ಮರಾಠಿ ನಾಟಕ ಬರೆದರು

೬. ರಾ.ಹ.ದೇಶಪಾಂಡೆ ಮು.ವಿ.ವಿ ಯ ಮೊದಲ ಎಂ.ಎ.( ೧೮೮೪).

೭. ಹವ್ಯಕ ಸುಬೋಧ ಪತ್ರಿಕೆ ಮುಂಬಯಿ ಮೊದಲ ಕನ್ನಡ ಪತ್ರಿಕೆ. ಕರ್ಕಿ ವೆಂಕಟರಮಣ ಸೂರಿ( ಸಂ) ( ೧೮೮೮)

೮: ಇಗ್ಗಪ್ಪ ಹೆಗಡೆ ಪ್ರಹಸನ . ಮೊದಲ ಕನ್ನಡ ಸಾಮಾಜಿಕ ನಾಟಕ.೧೮೮೭ .೮.ಹಿತೋಪದೇಶ(೧೮೮೮). (ಮೊದಲ ಬಾರಿಗೆ ವ್ಯಂಗ್ಯ ಚಿತ್ರ ದ ಪ್ರಕಟಣೆ)

೯.ದಕ್ಷಿಣ ಯಾತ್ರಾ ಚರಿತ್ರೆ. ಮೊದಲ ಕನ್ನಡ ಪ್ರವಾಸ ಕಥನ ( ಕರ್ಕಿ ವೆಂಕಟರಮಣ ಸೂರಿ)

೧೦. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನಕ್ಕೆ ಅವಕಾಶ- ಶಾಮರಾವ್ ವಿಠ್ಠಲ ಕೈಕಿಣಿ ಮತ್ತು ರಾ.ಹ.ದೇಶಪಾಂಡೆ ಅವರ ಜಂಟಿ ಪ್ರಯತ್ನದಿಂದ (೧೯೦೧).

೧೧.ಹಟ್ಟಿ ಯಂಗಡಿ ನಾರಾಯಣ ರಾವ್ – ಆಂಗ್ಲ ಕವಿತಾವಳಿ (೧೯೧೮) ಮೊದಲ ಇಂಗ್ಲಿಷ್ ಕವಿತೆಗಳ ಅನುವಾದ ಇದಲ್ಲದೆ ಅವರು ಇನ್ನೂ ಅಮೂಲ್ಯವಾದ ಕೃತಿಗಳನ್ನು ಬರೆದಿದ್ದಾರೆ.

ಅವುಗಳಲ್ಲಿ ಕೆಲವು:

೧ ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ ಹನಿಗತೆ , ಕಂಪ್ಯೂಟರ್ ಇತ್ಯಾದಿ

೨. ಪ್ರೇಕ್ಷಣೀಯಕರ್ನಾಟಕ

೩. ಹಟ್ಟಿಯಂಗಡಿ ನಾರಾಯಣರಾಯರು ಸಾಹಿತ್ಯ ವಾಚಿಕೆ. ಕ.ಸಾ.ಅ.

೪ .ಗೋವಿಂದ ಪೈಗಳ ಕೃತಿ ಸಮೀಕ್ಷೆ.

೫.ಶ್ರೀ ವಾದಿರಾಜರ ತೀರ್ಥ ಪ್ರಬಂಧ.

೬.ಗಳಗನಾಥ ಮಾಸ್ತರರು.( ಕೇಂದ್ರ ಸಾಹಿತ್ಯ ಅಕಾಡೆಮಿ).

೭.ಒಂದಿಷ್ಟು ಲಘು ,ಒಂದಷ್ಟು ಗಂಭೀರ (ಲಲಿತ ಪ್ರಬಂಧಗಳು)

೮.ಪಂ.ಮ.ಪ್ರ.ಪ. ಪುಜಾರರ ಹಳಗನ್ನಡ- ಕವಿ- ಕಾವ್ಯ- ಮಹೋನ್ನತಿ ( ಕನ್ನಡ ಪುಸ್ತಕ ಪ್ರಾಧಿಕಾರ)

೯.ಎಸ್‌. ಎಲ್.ಭೈರಪ್ಪ ಅವರ ಕಾದಂ ಕಥನಗಳು. ಅವರು ಮು.ವಿ.ವಿ ದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ನನ್ನನ್ನು ಸಂಶೋಧನಾ ವಿದ್ಯಾರ್ಥಿಯಾಗಿ ಮು.ವಿ.ವಿ ದ ಕನ್ನಡ ವಿಭಾಗಕ್ಕೆ ಆರಿಸುವ ಮೂಲಕ  (೧೯೮೪) ನಾವು ಮುಂಬಯಿಗೆ ಬಂದು ನೆಲೆಸಲು ಕಾರಣರಾದರು. ಅವರು ನಮಗೆ ಮುಂಬಯಿ ಯಲ್ಲಿ ಪ್ರಾತ:ಸ್ಮರಣೀಯರು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading