ಹೊಸ ಚಿಗುರು ಹೂ ಬಿಡಲು ಬಾ ಬದಲಾಗೋಣ ಹಳೆಯದೆಲ್ಲವ ಮರೆತು…ಕವಿ ಪೀರಸಾಬ ನದಾಫ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹೊಳಿ ಹುಣ್ಣುಮೆಯ ಚಂದ್ರ
ಆಗಸ ಹಾಲು ಬಿಳಿ ಬಣ್ಣ
ಚುಕ್ಕಿಗಳೋ ಚದುರಿ ಚಲ್ಲಾಪಿಲ್ಲೆಯಾಗಿ
ಬಿದ್ದಿವೆ ನಿನ್ನ ಸೀರೆ ನೇರಿಗೆಗುಂಟ
ವಸಂತೋತ್ಸವದ ಆಗಮನ
ಏಳು, ಏಳು ಬಣ್ಣದಲ್ಲಿ ಮಿಂದೆದ್ದು
ನಾನು ನೀನು ಭೂವಿಯಡೆಗೆ ಬಾಗಿ
ನಮ್ಮೊಳಗೆ ಕಾಮನ ಬಿಲ್ಲಾಗುವಾ
ಮರ, ಮರಮರ ಮರುಗದೇ
ಉದುರಿಸಿ ಎಲೆಗಳೆಲ್ಲವ
ಅಣಿಯಾಗಿದೆ ಹೊಸ ಚಿಗುರು ಹೂ ಬಿಡಲು
ಬಾ ಬದಲಾಗೋಣ ಹಳೆಯದೆಲ್ಲವ ಮರೆತು
ಚಿತ್ತದ ಹೆಡೆಯೆರಿಸಿ ಹೂಡು ಮನದ ಬಾಣ
ಕತ್ತು ಕೊಂಕಿಸಬೇಡ ಕದಲದೇ ದೃಷ್ಟಿಸು
ನಿನ್ನೊಳಗಣ ಸೃಷ್ಟಿಯ ವೈಚಿತ್ರ್ಯ
ಕಳಚು ಹಳೆಯ ಬಣ್ಣದ ಅರಿವೆ
- ಪೀರಸಾಬ ನದಾಫ
