ಎಸ್ ಬಿ ಹೂಲಿ ಲಕ್ಷ್ಮಣ ಕೋಳಿವಾಡ ಅವರ ರಚನೆಯ ಈ ಕವಿತೆಯನ್ನು ತಪ್ಪದೆ ಮುಂದೆ ಓದಿ …
ಕಾವ್ಯ ಲಹರಿಯಲಿ
ಕನ್ನಡದ ಕಸ್ತೂರಿ
ಕಾನನದ ಪರಿಮಳದಿ
ಕನ್ನಡದ ಕನಕಾಂಬರಿ
ಕೃಷ್ಣೆ ಒಲಿದು ಶರಾವತಿ
ಕನ್ನಡದಿ ತುಂಗಭದ್ರೆ ನೇತ್ರಾವತಿ
ಕಲಕಲನೇ ಹರಿವನದಿ
ಕಾಳಿ-ಕಾವೇರಿ ಸಂಜೀವಿನಿ
ಕಣದೊಳು ಹಿಡಿಮೇಟಿ
ಕನ್ನಡದ ಫಸಲುಫಲಿಸಿ
ಕಜಣ ತುಂಬಿರಾಶಿ
ಕನ್ನಡಬೀಜ ಉತ್ತಿಬಿತ್ತಿ
ಕಾಫಿ-ಅಡಿಕೆ ರೇಷ್ಮೆ-ಏಲಕ್ಕಿ-ರಾಗಿ
ಕಾಳು-ಬೇಳೆರಫ್ತೇ ಕನ್ನಡದಸಿರಿ
ಕಂಗೊಳಿಸಿ ಮೈಮನದಿ
ಕನ್ನಡದ ತರುಣಿ ಸಹ್ಯಾದ್ರಿ
ಕಣ್ಣಂಚಲೇ ಸೆರೆಯಾಗುವಳು
ಕಾರುಣ್ಯಮೂರ್ತಿ ಚಾಮುಂಡಿ
ಕಟ್ಟುಗೋಪುರ ಹೃದಯದಿ
ಕನ್ನಡ ಭಾಷಾಲಂಕಾರದಿ
ಕಬ್ಬಿಣದಕಡಲೆಯಲ್ಲ ಗೆಳತಿ
ಕನ್ನಡವು ಕಬ್ಬು-ಜೇನಿನರುಚಿ
ಕರುನಾಡ ಒಡಲಲಿ
ಕನ್ನಡಾಂಬೆಗೆ ಜಯಭೇರಿ
ಕನಕಾಂಬರವಾಗಿ ಮುಡಿಗೇರಿ
ಕನ್ನಡಕಿರಿಟ ತಾಯಿಭಾರತಿಗಿರಿಸಿ
- ಎಸ್ ಬಿ ಹೂಲಿ ಲಕ್ಷ್ಮಣ ಕೋಳಿವಾಡ – ಸುಳ್ಯ ( ದ.ಕ )
