‘ಕರೆಕುರಿ ತುಬುಟ’ ಕವನ

‘ಗದ್ದಿ ಗದ್ದಿಗೆ ಚೆಂದ ಗದ್ದಿಗೆ ನೂಲೆಳೆ ಚೆಂದ…ಗದ್ದಿಗೆ ಪೂಜುವರ ಮಗ ಚೆಂದ’… ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ ಹಾಡಿದ್ದಾರೆ, ಈ ಜಾನಪದ ಸಾಹಿತ್ಯವನ್ನು ತಪ್ಪದೆ ಮುಂದೆ ಓದಿ…

ಕರಿಯ ಕುರಿ ತುಬುಟ ಹೆಂಗಸು ನೂತ ನೂಲು
ಕುರುಬಗೌಡ ನೇಯ್ದ ರತುನ ಜಾಡಿ | ಮ್ಯಾಲೆ
ತಾತ ಜಾಂಬಯ್ನರ ಶಿವಪೂಜೆ | ತಾತ ಜಾಂಬಯ್ನರ ಶಿವಪೂಜೆ
ಆಗಲುವಾಗ ಆಕಾಶದ ಗಂಟೆ ಘಲೀರೆಂದೇ…

ಕರೆಕುರಿ ತುಬುಟ ಕುರುಬುತಿ ನೂತ ನೂಲು
ಕುರುಬಗೌಡ ಬರೆದ ರತುನ ಜಾಡಿ | ಮ್ಯಾಲೆ
ಬರುದರು ನೆಲ್ಲಕ್ಕಿ ಹಸೆಗಳಾ

ಕೆಂದಗುರಿ ತುಬುಟ ಕುರುಬತಿ ನೂತ ನೂಲು
ಶಂಬುಗೌಡ ನೇಯ್ದ ರತುನ ಜಾಡಿ | ಮ್ಯಾಲೆ ಬರುದರು ಕ್ಯಾಸಕ್ಕಿ ಹಸೆಗಳಾ…

ಕ್ಯಾಸಕ್ಕಿ ಹಸೆಯ ಲೇಸಾಗಿ ನೀ ಬರೆಯೋ
ದಾಸವಾಳದುವ್ವ ಕೊರೆದಂಗೆ | ಹಸೆಯ ಮ್ಯಾಲೆ ಬಾಸಿಂಗನ್ಯಾರೆ ಬರೆದಾರು…

ನೆಲ್ಲಕ್ಕಿ ಹಸೆಯ ಲೇಸಾಗಿ ನೀ ಬರೆಯೋ
ಜಾಲಗಿರಿ ಹುವ್ವ ಕೊರೆದಂಗೆ | ಹಸೆಯ ಮ್ಯಾಲೆ ಸಂಪಿಗುವ್ವನ್ಯಾರೆ ಬರೆದಾರು…

ನೆಲ್ಲಕ್ಕಿ ಹಸೆಯ ಬಲ್ಲಣ್ಣ ನೀ ಬರೆಯೋ |
ಬೆಲ್ಲಾದಚ್ಚುಗಳ ಕೊರದಂಗೆ | ಹಸೆಯಾ ಮ್ಯಾಲೆ
ಮಲ್ಲಿಗುವ್ವನ್ಯಾರೆ ಬರುದಾರು

ನೆಲ್ಲಕ್ಕಿ ಹಸೆಯ ಬಲ್ಲಣ್ಣ ನೀ ಬರೆಯೋ
ಅಲ್ಲಿಗೊಂದಕ್ಕಿ ಸಿಡಿಯದೆ | ಸಿಡಿಯ್ದಂಗೆ ಬರೆದಣ್ಣಾಗೆ ಬೆಲ್ಲವ ಕೊಡಿರೆ ಮೆಲುವದಕೆ…

ಗದ್ದಿ ಗದ್ದಿಗೆ ಚೆಂದ ಗದ್ದಿಗೆ ನೂಲೆಳೆ ಚೆಂದ
ಗದ್ದಿಗೆ ಪೂಜುವರ ಮಗ ಚೆಂದ…

ಜಾಡಿ ಜಾಡಿ ಚೆಂದ ಜಾಡಿಯ ನೂಲೆಳೆ ಚೆಂದ
ಜಾಡಿಗವನಿಗೂ ಇನವಂದ…

ಜಾಡಿ ಪೂಜ್ಯಾದವು ಅಲ್ಲೋಗರನ ಬರಹೇಳಿ | ಅಲ್ಲೋಗ ಕಾಳಿಂಗನೊಡಗೂಡಿ…

ಗದ್ದಿಗೆ ಪೂಜ್ಯಾದವು ಅಲ್ಲಿದ್ದರನ ಬರಹೇಳಿ
ಅಲ್ಲಿದ್ದ ಮಾಲಿಂಗನೊಡಗೊಂಡು…‌

ತಿದ್ದಣ್ಣ ಹಸೆಗಾಳ ತಿದ್ದಣ್ಣ ರಥಗಾಳ
ತಿದ್ದಣ್ಣ ಶಿವನ ಶಿಖರಾವ / ನಡುವೋಕೆ
ಬಾಗಿ ಸೋವಣ್ಣ ನವಿಲಿಂಡು

ಅಚ್ಚಕ್ಕಿ ನುಚ್ಚಕ್ಕಿ ಅಚ್ಚ ರಾಜಣದಕ್ಕಿ
ವಡ್ಡಿಗೆರೆ ಬಯಿಲಾಗೆ ಬೆಳುದಂತ | ನೆಲ್ಲಕ್ಕಿ
ನಾಗಣ್ಣಾ ಹಸೆಗೆ ಬರಬೇಕು…

ತಣ್ಣೀರ ತನ್ನಿ ಸಣ್ಣ ಮಲ್ಲಿಗೆ ತನ್ನಿ
ಸೆಂದವಾಗಿ ಸೆಂಬು ಬೆಳಗಿ ತನ್ನಿ | ಮೀನಿಗರ ಕಂದನು ಪೂಜಿಗೆ ಬರುತಾನೆ….

ಬೆಲ್ಲದ ಪಾನಕ ತನ್ನಿ ಎಸಳು ಮಲ್ಲಿಗೆ ತನ್ನಿ
ಅಸನಾಗಿ ಸೆಂಬ ಬೆಳಗಿ ತನ್ನಿ | ಮೀನಿಗರ ನಾಗಣ್ಣ ಪೂಜೆಗೆ ಬರುತಾನೆ…

ಚಿನ್ನದ ಕುಡುಗೋಲಿಗೆ ರನ್ನದ ಹಿಡಿಹಗ್ಗ ಇನ್ನ್ಯಾರೆ ಕಾಯಿ ಒಡೆವೋರು |
ಮೀನಿಗರು ಕಾಯೊಡೆದೆ ಕೈಯಾ ಮುಗುದೇವು…..


ಹಾಡಿದವರು : ವಡ್ಡಗೆರೆ ಕದರಮ್ಮ
ಸಂಪಾದನೆ : ಡಾ.ವಡ್ಡಗೆರೆ ನಾಗರಾಜಯ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW