ಮೊದಲ ಬಾರಿ ಲಿಂಬೆ ಉಪ್ಪಿನಕಾಯಿ ಮಾಡಿದ್ದರೂ ರುಚಿಕರವಾಗಿದೆ. ಹೇಳಿಕೊಡಲು ನಾನು ಸಿದ್ದ, ಮಾಡಲು ನೀವು ಸಿದ್ಧರಿದ್ದೀರಾ? ಎಂದು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಇವತ್ತು ಒಂದು ಹೊಸ ತರ ಲಿಂಬೆ ಹಣ್ಣಿನ ಉಪ್ಪಿನಕಾಯಿ ಮಾಡಿದ್ದೇನೆ. ರುಚಿ ಕೂಡ ಚೆನ್ನಾಗಿದೆ. ಮೊದಲ ಬಾರಿ ಮಾಡಿದ್ದು. ಟ್ರೈ ಮಾಡಿ ಗೆಳತಿಯರೆ. 15 ಹಣ್ಣಾದ ಲಿಂಬೆಹಣ್ಣುಗಳನ್ನು ಚೆನ್ನಾಗಿ ತೊಳೆದು ಒಂದು ಒಣಗಿದ ಕಾಟನ್ ಬಟ್ಟೆಯಲ್ಲಿ ಒರೆಸಿ ಕೊಂಡು ಬೇಕಾದ ಸೈಜ್ ಗೆ ಕಟ್ ಮಾಡಿ ಒಂದು ಲೆಯರ್ ಲಿಂಬೆಹಣ್ಣು, ಒಂದು ಲೇಯರ್ ಕಲ್ಲುಪ್ಪು ಹಾಕಿ ಒಂದು ಡಬ್ಬಕ್ಕೆ ಹಾಕಿಡಿ.
ಎರಡು ದಿನಗಳಿಗೊಮ್ಮೆ ಕೈ ಆಡಿಸುತ್ತಿರಿ. ಹದಿನೈದು ದಿನ ಆದ ನಂತರ ಮೆತ್ತಗಾಗಿದೆ ಅಂತ ಅನ್ನಿಸಿದಾಗ ಅದಕ್ಕೆ ಖಾರ ಹಾಕಲು ಸಿದ್ಧರಾಗಿ.

ಉಪ್ಪಿನಕಾಯಿ ಖಾರಕ್ಕೆ ಬೇಕಾದ ಸಾಮಗ್ರಿಗಳು :
- ಸಾಸಿವೆ – ಒಂದೂವರೆ ಸ್ಪೂನ್
- ಜೀರಿಗೆ – ಸ್ಪೂನ್
- ಮೆಂತ್ಯ – ಒಂದೂವರೆ ಸ್ಪೂನ್
- ಸೋಂಪು – ಒಂದು ಸ್ಪೂನ್
ಓಂ ಕಾಳು- ಒಂದು ಸ್ಪೂನ್ - ಬ್ಯಾಡಗಿ ಮೆಣಸಿನಕಾಯಿ – ಹತ್ತು
- ಗುಂಟೂರು ಮೆಣಸಿನಕಾಯಿ – ಹದಿನೈದು
- ಲವಂಗ – ನಾಲ್ಕೈದು
- ಮರಾಠ ಮೊಗ್ಗು ತರ (ಇನ್ನೊಂದು ಉದ್ದದ್ದು ಸಿಗುತ್ತದೆ ಅದು ಒಂದು ಹಾಕಿಕೊಳ್ಳಿ).
- ಅಡುಗೆ ಎಣ್ಣೆ – ಒಂದು ಸೌಟ್
- ಸಾಸಿವೆ – ಒಂದುಸ್ಪೂನ್
- ಇಂಗು – ಕಾಲು ಸ್ಪೂನ್
ಮೇಲೆ ಹೇಳಿದ ಸಾಮಗ್ರಿಗಳನ್ನುನೀರು ಹಾಕದೆ ಹುರಿದುಕೊಳ್ಳಿ. ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನೆನೆದ ಲಿಂಬೆ ಹಣ್ಣಿಗೆ ಈ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಿ.
ಒಂದು ಸೌಟ್ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ, ಸಾಸಿವೆ ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿಟ್ಟು ತಣ್ಣಗಾದ ನಂತರ ಉಪ್ಪಿನಕಾಯಿ ಮೇಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಒಂದು ಬಾಟಲ್ ನಲ್ಲಿ ತುಂಬಿಡಿ.
ನಾಲ್ಕೈದು ದಿನದ ನಂತರ ಬಳಸಿ. ಈಗ ಚೆನ್ನಾಗಿ ಉಪ್ಪು, ಖಾರ ಹೀರಿರುತ್ತದೆ. ರುಚಿಯಾದ ಉಪ್ಪಿನ ಕಾಯಿ ರೆಡಿ. ಉಪ್ಪಿನಕಾಯಿಗೆ ಕಲ್ಲುಪ್ಪು ಸ್ವಲ್ಪ ಹುರಿದು ಹಾಕಿ ಹಾಗೆ ಎಣ್ಣೆ ಕಾಯಿಸಿ ತಣ್ಣಗಾದ ಹಾಕುವುದರಿಂದ ಉಪ್ಪಿನಕಾಯಿ ರುಚಿ ಚೆನ್ನಾಗಿರುತ್ತದೆ .ಜೊತೆಗೆ ತುಂಬಾ ಕಾಲ ಇರುತ್ತದೆ.
- ಶಕುಂತಲಾ ಸವಿ
