ದಿನವೂ ಸಾವಿರಾರು ಎಲೆ ಉದುರಿದರು, ಎತ್ತುತ್ತಿರಲಿಲ್ಲ ಯಾವುದೆ ಅಪಸ್ವರ!…ಶರಣಗೌಡ ಬಿ ಪಾಟೀಲ ಅವರ ಲೇಖನಿಯಲ್ಲಿ ಮೂಡಿ ಬಂದ ಕವನವನ್ನು ತಪ್ಪದೆ ಮುಂದೆ ಓದಿ…
ಆ ಮರ ತನ್ನದೇ ಎಲೆ
ಉದುರಿಸುವಾಗ
ಮಾಡಿಕೊಳ್ಳುತಿತ್ತು
ಮನ ಕಠೋರ!
ದಿನವೂ ಸಾವಿರಾರು
ಎಲೆ ಉದುರಿದರು
ಎತ್ತುತ್ತಿರಲಿಲ್ಲ ಯಾವುದೆ
ಅಪಸ್ವರ!
ತೋರುತ್ತಿರಲಿಲ್ಲ
ಎಲೆಗಳ ಮೇಲೆ
ಕಿಂಚಿತ್ತು, ಕನಿಕರ !
ಹಳದಿ ಎಲೆಗಳೆಂದರೆ
ಏನೋ ತಾತ್ಸಾರ !
ತನ್ನಲ್ಲೇ ಚಿಗುರಿ
ಬೆಳೆದು, ಸಧ್ಯ ತೊರೆದು
ಹೋಗುತ್ತಿದ್ದರು
ಸುರಿಸುತ್ತಿಲ್ಲ
ಒಂದು ಹನಿ ಕಣ್ಣೀರ !!
- ಶರಣಗೌಡ ಬಿ ಪಾಟೀಲ – ತಿಳಗೂಳ
