ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು ಕಂಡಂತಹ ಚಿತ್ರ. ಈ ಚಿತ್ರದ ಕುರಿತು ಸುಧಾಕರ್ ಶಿವರಾಳಯ್ಯ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಿನಿಮಾ: ಮ್ಯಾಕ್ಸ್
ನಿರ್ಮಾಣ: ಕಲೈಪುಲಿ ಎಸ್. ಧಾನು
ನಿರ್ದೇಶನ: ವಿಜಯ್ ಕಾರ್ತಿಕೇಯ
ಪಾತ್ರವರ್ಗ: ಕಿಚ್ಚ ಸುದೀಪ್, ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದವರು
ತಮಿಳು, ತೆಲುಗು ಸಿನಿಮಾಗಳನ್ನ ನೋಡಿ…ಅವುಗಳ ಮೇಕಿಂಗ್ಗೆ ಫಿದಾ ಆಗಿ, ಅಯ್ಯೋ ನಮ್ಮ ಕನ್ನಡದಲ್ಲಿ ಈ ಥರಾ ಸಿನಿಮಾಗಳು ಬರ್ತಿಲ್ವಲ್ಲಾ ಅಂತಾ ಹೊಟ್ಟೆ ಉರಿದುಕೊಳ್ತಿದ್ದವರು ಮೊದಲು ಹೋಗಿ ಮ್ಯಾಕ್ಸ್ ನೋಡಿ. ಸುದೀಪ್ ಕರಿಯರ್ನಲ್ಲಿಯೇ This is One of the Best Crime Com Suspense Thriller ಎನ್ನುವುದರಲ್ಲಿ ನೋ ಡೌಟ್.
MAX is not a Typical Mass Or Fan Service Film.. But a Genuine Story Oriented Film..Filled with Thrills Tensions, Twist & Turns ..ಮಾಸ್ ಸಿನಿಮಾಗಳು ಒಂದರ ಹಿಂದೊಂದರಂತೆ ಬರ್ತಾನೆ ಇರುತ್ವೆ. ಆದ್ರೆ ಮಾಸ್ ಸಿನಿಮಾಗಳ ಜೊತೆ ಜೊತೆಗೆ ಕುತೂಹಲ ಮೂಡಿಸುವ ಚಿತ್ರಕತೆ ಇದ್ದರೆ ಮಾತ್ರ ಇಂದಿನ ಟ್ರೆಂಡ್ಗೆ ಸಿನಿಮಾ ರುಚಿಸುವುದು. ಇಲ್ಲದಿದ್ರೆ ಇಲ್ಲ. ಅದ್ರಲ್ಲೂ, ಯಾವಾಗ ಸಿನಿಮಾದಲ್ಲಿ ಒನ್ ಮ್ಯಾನ್ ಶೋ ಇರುತ್ತಲ್ಲ, ಅಂತಹ ಕಡೆ ಡೈರೆಕ್ಟರ್ ತುಂಬಾನೇ ಸೂಕ್ಷ್ಮವಾಗಿ ಕತೆ ಹೆಣೆಯಬೇಕು, ಜೊತೆ ಜೊತೆಗೆ ಆಗಾಗ ತಿರುವುಗಳನ್ನ ಕೊಡುತ್ತಾ ಹೋಗ್ಬೇಕು ಎನ್ನುವುದು ನಾನು ಇತ್ತೀಚಿನ ದಿನಗಳಲ್ಲಿ ಕಂಡುಕೊಂಡಿರುವ ಸ್ಪಷ್ಟತೆ. ಬಿಲ್ಡಪ್ ಈಗ ವರ್ಕ್ ಆಗಲ್ಲ. ಆ ವಿಚಾರದಲ್ಲಿ ಮ್ಯಾಕ್ಸ್ ಪಕ್ಕಾ ಗೆಲ್ಲುತ್ತದೆ.

ಒಂದು ಸಿಂಪಲ್ ಪ್ರಶ್ನೆಗೆ ಉತ್ತರ ಸಿಗ್ಬೇಕು. ಒಂದು ಕ್ರೈಂ ನಡೆಯುತ್ತೆ, ಆ ಕ್ರೈಂ ಪೊಲೀಸರ ಮಧ್ಯೆದಲ್ಲಿಯೇ ನಡೆಯುತ್ತೆ. ಆದ್ರೆ ಆ ಕ್ರೈಂನ ಮಾಡಿದವರು ಯಾರು? ಯಾಕಾಯ್ತು? ಯಾರಿಗೋಸ್ಕರ ಆಯ್ತು? ಹೇಗಾಯ್ತು ಎನ್ನುವುದೇ ಕಥೆಯ ಒನ್ ಲೈನರ್, ಪವರ್, ಪಾಲಿಟಿಕ್ಸ್ ಹಾಗೂ ಪೈಸಾ ಮೂರೂ ಶಕ್ತಿಗಳು ಒಗ್ಗಟ್ಟಾದಾಗ ಪೊಲೀಸ್ ಯೂನಿಫಾರ್ಮ್ ಒಂದು ನಾರ್ಮಲ್ ಬಟ್ಟೆಯಂತೆ ಕಾಣಿಸಿದ್ರೂ, ಅದರ ಗತ್ತು ಗೈರತ್ತು ಮಫ್ತಿ ರೂಪದಲ್ಲಿರುತ್ತೆ. ಅದುವೇ ಕಿಚ್ಚ ಸುದೀಪ್.
ಇಲ್ಲಿ ದಿನಗಳಿಲ್ಲ, ತಿಂಗಳುಗಳಿಲ್ಲ, ವರುಷಗಳು ಉರುಳಲ್ಲ. ಜಸ್ಟ್ ಒಂದೇ ರಾತ್ರಿಯಲ್ಲಿ ನಡೆಯುವ ದೊಡ್ಡ ಹಂಗಾಮ. ಒಂದು ಕಡೆ ಸರ್ಕಾರ ಉರುಳಿಸುವವರ ಹಪಾಹಪಿ. ಮತ್ತೊಂದು ಕಡೆ ಸಮಾಜಕ್ಕೆ ಮುಳ್ಳಾಗಿರುವವರ ಜೊತೆಗಿನ ಹೋರಾಟ. ಎರಡನ್ನೂ ಅಚ್ಚುಕಟ್ಟಾಗಿ ತೆರೆಯಮೇಲೆ ತಂದಿಟ್ಟಿದ್ದಾರೆ ನಿರ್ದೇಶಕ. ಸಿನಿಮಾದಲ್ಲಿ ನಂಗಿಷ್ಟವಾದ ಮತ್ತೊಂದು ವಿಚಾರ, ಇಲ್ಲಿ ಚಿತ್ರತಂಡ ತನ್ನ ಅವಶ್ಯಕತೆಗಳನ್ನ ತುಂಬಾನೇ ಚೆನ್ನಾಗಿ ಅರ್ಥಮಾಡಿಕೊಂಡಿದೆ ಎನ್ನುವುದು ನನ್ನ ಅಭಿಪ್ರಾಯ. ಅನಾವಶ್ಯಕವಾಗಿ ವಿಚಾರಗಳು ತುಂಬಾನೇ ಕಡಿಮೆ. ಇಲ್ಲವೇ ಇಲ್ಲ ಅಂತಲೂ ಅನ್ನಬಹುದು.
ಅದ್ರಲ್ಲೂ, ಚಿತ್ರದ ಪಾತ್ರಗಳು..ತಕ್ಕಡಿಯಲ್ಲಿ ತೂಕಕ್ಕಿಟ್ಟು ಬೇಕಾದಷ್ಟು ಮಾತ್ರ ತೆಗೆದಂತೆ ಕ್ಯಾರೆಕ್ಟರ್ಗಳನ್ನ ಪರಿಚಯಿಸಿದ್ದಾರೆ. ಯಾರೂ ಕೂಡ ತೀರ ಸಪ್ಪೆ ಎನಿಸುವಂತೆ ನಟಿಸಿಲ್ಲ. ಶುರುವಿನಲ್ಲಿ ಆಗುವ ಕ್ರೈಂ ಒಂದರ ಅಸಲಿ ಸತ್ಯ ಹೀಗಿರಬಹುದಾ ಅಂತಾ ನಾವು ನಮ್ಮ ಮನಸ್ಸಿನಲ್ಲೇ ಊಹೆ ಮಾಡಿಕೊಂಡರೂ ಕ್ಲೈಮ್ಯಾಕ್ಸ್ ಅಂದುಕೊಂಡಂತೆ ಬಿಲ್ಕುಲ್ ಇರುವುದಿಲ್ಲ. ಲೇಡಿ ಕ್ರೈಂ ಇನ್ಸ್ಪೆಕ್ಟರ್ ಪಾತ್ರಧಾರಿಯ ನಟನೆ ಮನಸ್ಸಲ್ಲಿ ಉಳಿಯುವಂತಹದ್ದು. ಇನ್ನು, ಬಿಜಿಎಂ ಸಿನಿಮಾ ಕೊನೆವರೆಗೂ ಮಾಸ್ ಆಗಿ ಉಳಿದುಕೊಳ್ಳುವುದಕ್ಕೆ ಅಕ್ಷರಶಃ ಹಾಟ್ ಕೇಕಿನಂತಹ ಬಿಜಿಎಂ ಕೊಟ್ಟಿದ್ದಾರೆ ಸಂಗೀತ ನಿರ್ದೇಶಕ.
ಚಿತ್ರದಲ್ಲಿ ನಾಯಕಿಯೇ ಇಲ್ಲದಿರುವುದು ನನಗಂತೂ ಡ್ರಾ ಬ್ಯಾಕ್ ಅಂತಾ ಅನಿಸಲಿಲ್ಲ. ಇಲ್ಲದಿರುವುದೇ ಒಳ್ಳೆಯದಾಯ್ತು ಅಂದುಕೊಂಡಿದ್ದೀನಿ. ಮಿಕ್ಕವರಿಗೆ ಗೊತ್ತಿಲ್ಲ.. ಒಟ್ಟಿನಲ್ಲಿ ಸಿನಿಮಾ ಮ್ಯಾಕ್ಸ್ ಅಂತೂ ಸೂಪರ್.
- ಸುಧಾಕರ್ ಶಿವರಾಳಯ್ಯ
