ರಾಷ್ಟ್ರ ಪ್ರಶಸ್ತಿ ಪಡೆದ ಮಹಿಳಾ ಆಧಾರಿತ ಚಿತ್ರ “ಮಿರ್ಚ್ ಮಸಾಲ” ಕುರಿತು ಡಾ. ಕೃಷ್ಣವೇಣಿ. ಆರ್.ಗೌಡ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಇನ್ನೇನು ಅಂತರಾಷ್ಟ್ರೀಯ ಮಹಿಳಾ ದಿನ ಹತ್ತಿರ ವಾಗುತ್ತಿರುವಾಗ “ಪಾತ ಪಾಟಲು ” ಈಟಿವಿ ಸಿನಿಮಾ ಚಾನೆಲ್ ನೋಡುತ್ತಿದ್ದಂತೆ ಲೇಸಿಂದಿ ಮಹಿಳಾ ಲೋಕಮ್ ಎನ್ನುವ ಎನ್ ಟಿ ಆರ್ ಮತ್ತು ಸಾವಿತ್ರಿ ಹಾಡು ಬಂತು. ಹಾಗೇ ಏನೋ ಹೊಳೆಯಿತು. 80 ರ ದಶಕದ ಸ್ಮಿತಾ ಪಾಟೀಲ್ ನೆನಪಾಗಿ ಆಕೆಯ ಬಯೋಗ್ರಫಿಯನ್ನು ಯುಟ್ಯೂಬ್ ನಲ್ಲಿ ನೋಡಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಮಹಿಳಾ ಆಧಾರಿತ ಚಿತ್ರ “ಮಿರ್ಚ್ ಮಸಾಲಾ” ನೋಡಿದಾಗ ಇಡೀ ಮಹಿಳಾ ಮನುಕುಲವನ್ನೇ ಅತೀ ಏತ್ತರಕ್ಕೆ ಕೊಂಡೊಯ್ದ ಚಿತ್ರ ಎಂದು ಹೇಳಬಹುದು.
ಹೌದು ನಾನು ಚಿಕ್ಕವಳಿದ್ದಾಗ ಟಿವಿಯಲ್ಲಿ ತಿಳುವಳಿಕೆ ಇಲ್ಲದ ವಯಸ್ಸಲ್ಲಿ ಒಂದು ದೃಶ್ಯ ನೋಡಿರಬಹುದು. ಆದರೆ ಈಗ ನನ್ನ ಮೆಚ್ಚುಗೆಯಾಗಿ ನೋಡಿದಾಗ ಬಾಲಿವುಡ್ ಇಂಡಸ್ಟ್ರಿ ಎಂತೆಂತ ಒಳ್ಳೆ ನಟಿಯರನ್ನು ಕಳೆದುಕೊಂಡಿತಲ್ಲ ಎನ್ನುವ ಬೇಸರನೂ ಕಾಡಿತು. ಈ ಚಿತ್ರದೊಳಗಿನ ಸ್ಮಿತಾ ಪಾಟೀಲ್, ನಾಸಿರುದ್ದೀನ್ ಷಾ, ದೀಪ್ತಿ ನಾವಲ್, ವಿವೇಕ ಒಬೇರಾಯ್, ರಾಜ ಬಬ್ಬಾರ್ ನಟಿಸಿದ್ದಾರೆ. ಅಲ್ಲದೇ ರಾಜಸ್ತಾನ್ ಬಿಸಿಲು, ಮರುಳು ಮತ್ತು ಒಣ ಮೆಣಸಿನಕಾಯಿಗೆ ಸೀಮಿತ. ಹಾಗೇ ಈ ಮಿರ್ಚಿ ಮಸಾಲಾದಲ್ಲಿ ಒಂದು ಖಾರದ ಪುಡಿಯ ಕಾರ್ಖಾನೆಯಲ್ಲಿ ದುಡಿಯುವ ಮಹಿಳಾ ವರ್ಗದ ಒಗ್ಗಟ್ಟು ಮಹಿಳಾ ಮನಸ್ಥಿತಿಗೆ ಹತ್ತಿರವಾಗಿ ದೇಸಿ ಮನದ ಪಾತ್ರಕ್ಕೆ ಜೀವಂತ ಉದಾಹರಣೆ.

ಫೋಟೋ ಕೃಪೆ : google
ಈ ಚಿತ್ರದಲ್ಲಿ ನಾಸಿರುದ್ದೀನ್ ಷಾ ಬ್ರಿಟಿಷ್ ಆಡಳಿತಧಿಕಾರಿಯಾಗಿ ಒಂದು ಹಳ್ಳಿಯ ಮರಳು ಗಾಡಿನಲ್ಲಿ ಡೇರೆ ಹಾಕಿಕೊಂಡು ಕುದುರೆ ಸವಾರಿ ಹೊರಟಾಗ ನೀರು ತುಂಬಿದ ಬಿಂದಿಗೆಯೊಂದಿಗೆ ಸ್ಮಿತಾ ಪಾಟೀಲ್ ಬರುತ್ತಿರುವಾಗ ಅಧಿಕಾರಿಯ ಕಣ್ಣು ಅವಳತ್ತ ತಿರುಗಿ ಅವಳನ್ನ ಪಡೆಯಬೇಕೆನ್ನುವ ಹಂಬಲ. ಊರ ಮುಖಂಡನ ಹತ್ತಿರ ಕೇಳುತ್ತಾನೆ. ಆಗ ಆ ಊರ ಮುಖಂಡ ಇಲ್ಲ ಸರ್ಕಾರ ಅವಳನ್ನು ನೀವು ಪಡೆಯುವ ಹಾಗಿಲ್ಲ. ಅವಳಿಗೆ ಮದುವೆಯಾಗಿ ಗಂಡನಿದ್ದಾನೆ. ಪಕ್ಕದ ಊರಿಗೆ ಕೆಲಸಕ್ಕೆ ಹೊರಟಿದ್ದಾನೆ. ನೀವು ಅವಳನ್ನ ಮರೆಯಬೇಕು ಎಂದರೂ ಬ್ರಿಟಿಷ್ ಅಧಿಕಾರಿ ಕೇಳದೆ, ಅವಳು ಮತ್ತೊಮ್ಮೆ ನೀರು ತರಲು ಹೋದಾಗ ಹಿಂಬಾಲಿಸುತ್ತಿರುವಾಗ ಅವಳು ಓಡಿ ಹೋಗಿ ಖಾರದ ಪುಡಿಯ ವಾಡೆಯೊಳಗೆ ನುಗ್ಗಿ ಬಚ್ಚಿಟ್ಟು ಕೊಳ್ಳುತ್ತಾಳೆ.
ಅಲ್ಲಿ ಎಲ್ಲಾ ಮಹಿಳಾ ಮಣಿಗಳು ಜನಪದ ಹಾಡಿನೊಂದಿಗೆ ದಿನಾಲೂ ಮೆಣಸಿನಕಾಯಿ ಕುಟ್ಟಿ ಪುಡಿ ಮಾಡುವುದು ಅವರ ಕೆಲಸವಾಗಿರುತ್ತೆ. ಇವರೆಲ್ಲರನ್ನು ಕಾಯಲು ಓo ಪುರಿ ಎಲ್ಲಾ ಮಹಿಳಾ ರಕ್ಷಣೆಯ ಖಾರಾಕೂನನಾಗಿ (watchman) ರಕ್ಷಿಸುತ್ತಿರುತ್ತಾನೆ. ಓಡಿ ಹೋದ ಸ್ಮಿತಾ ಪಾಟೀಲ್ ಎಲ್ಲಾರ ಜೊತೆಗೆ ತಾನು ಭಾಗಿಯಾದಾಗ ಅಲ್ಲಿನೂ ಅಧಿಕಾರಿ ಬಿಡದೇ ಹಿಂಸೆ ಕೊಡಲು ಸಜ್ಜಾದಾಗ ಊರಿನ ಮಹಿಳೆಯರೆಲ್ಲ ತಟ್ಟೆಯನ್ನು ಭಾರಿಸುವುದರ ಮೂಲಕ ಕಹಳೆಯನ್ನು ಸೂಚಿಸುತ್ತಾರೆ. ಮಹಿಳಾ ಹಕ್ಕಿಗಾಗಿ ಎಲ್ಲರೂ ಒಂದಾದಾಗ ದೀಪ್ತಿ ನಾವಲ್ ಳನ್ನು ಅವಳ ಗಂಡ ಧರಧರನೇ ಎಳೆದುಕೊಂಡು ಊರ ಮಧ್ಯ ಹೊಡೆಯುತ್ತಾನೆ. ಆಗ ದೀಪ್ತಿ ನಾವಲ್ ಹೆಣ್ಣೆಂದರೆ ಬರೀ ಮನೇಲಿ ಬಿದ್ದು ಸುಖ ಕೊಡುವ ವಸ್ತುವಲ್ಲ. ಅವಳಲ್ಲೂ ಹೋರಾಟದ ಕಿಚ್ಚಿದೆ ಎನ್ನುವ ಸಂಭಾಷಣೆ ಊರಿನ ಎಲ್ಲಾ ಗರತೀಯರು ನಿಬ್ಬೆರಗಾಗಿ ತಟ್ಟೆಯನ್ನು ಹೋರಾಟದ ಸಂಕೇತವಾಗಿ ಬಾರಿಸುವದು ಮುಂಡಾಸು ಇಟ್ಟುಕೊಂಡ ತಲೆ ಒಂದು ಕ್ಷಣ ಬಾಗುತ್ತದೆ.

ಫೋಟೋ ಕೃಪೆ :google
ಇತ್ತ ವಾಡೆಯಲ್ಲಿ ಹಿಂಸೆಯ ಬೆದರಿಕೆಗೆ ಬಸುರಿ ಬೇನೆ ಶುರುವಾಗಿ ಅವಳಿಗೆ ಫಿಡ್ಸ್ ಬರುವ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕುಡುಗೋಲನ್ನು ಅವಳ ಬಾಯಿಗೆ ಇಟ್ಟು ಹೆರಿಗೆ ಮಾಡಿಸುತ್ತಾರೆ. ಆ ವಾಡೆಯಲ್ಲಿಯೇ ಇನ್ನೊಂದು ಹೆಣ್ಣು ಮಗುವಿನ ಜನನವಾಗುತ್ತದೆ ಎಲ್ಲರೂ ಮುಖದಲ್ಲಿ ನಗು ಮಾಡುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲ್ಸದಲ್ಲಿ ತೊಡಗಿಕೊಳ್ಳುತ್ತಾರೆ. ದಿನ ಕಳೆಯುತ್ತಿದ್ದಂತೆ ಮತ್ತೆ ಅಧಿಕಾರಿಯ ಕಾಟ ಶುರುವಾಗುತ್ತದೆ. ಇದರ ಮಧ್ಯೆ ಖಾರಾಕೂನನ ಕೊಲೆಯಾಗುತ್ತದೆ, ಇದರಿಂದ ರೊಚ್ಚಿಗೆದ್ದ ಮಹಿಳೆಯರು ಅಧಿಕಾರಿ ಒಳ ನುಗ್ಗುತ್ತಿದ್ದಂತೆ ಅಲ್ಲಿದ್ದ ಒಂದು ಗೋಣಿ ಚೀಲದಲ್ಲಿದ್ದ ಖಾರದ ಪುಡಿಯನ್ನು ಅವನ ಮುಖಕ್ಕೆ ಎರಚಿ, ಅವನಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾರೆ. ಇದರ ಮೂಲಕ ಸಿನಿಮಾ ಕೊನೆಗೊಳ್ಳುತ್ತದೆ .
ಈ ಸಿನಿಮಾ ನೋಡುವುದರೊಂದಿಗೆ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ನಮಗೆ ತಿಳಿಯದೆ ಎಷ್ಟೋ ಅಂಶಗಳು ನಮ್ಮ ಮನವ ತೆರೆದಿಟ್ಟು ಹೊಸ ದೇಸಿ ದೀಪ ಮಾರ್ಗದತ್ತ ಚಲಿಸುತ್ತವೆ. ಇಡೀ ಫಿಲಂ ಇಂಡಸ್ಟ್ರಿ ಯತ್ತ ಒಮ್ಮೆ ಕಣ್ಣು ಹಾಯಿಸಿದಾಗ ನರಗೀಸ್ ಅಭಿನಯದ “ಮದರ್ ಇಂಡಿಯಾ “, ಶಭಾನಾಜ್ಮಿ ಅಭಿನಯದ “ಗಾಡ್ ಮದರ್ ” ಇವುಗಳೆಲ್ಲ ದೇಸೀ ಮಹಿಳಾ ಆಧಾರಿತ ಚಿತ್ರಗಳಾದರೂ ಹೆಣ್ಣಿನ ಒಳ ಅವಲೋಕನದ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿವೆ.
ಚರಿತ್ರೆ ಎನ್ನುವುದು ದಶಕಗಳಿಂದ ದಶಕಗಳಿಗೆ ಬದಲಾದರೂ ಒಳ್ಳೆಯ ಅಂಶಗಳನ್ನೇ ಅಳವಡಿಸಿ ಕುಗ್ಗಿದ ಒಡತಿಯನ್ನು ಎಚ್ಚರಿಸಿ ಸಮಾಜದೊಳು ಉನ್ನತ ಪಥದತ್ತ ಕರೆದೊಯ್ದಿವೆ. ಪುರಾತನ ಜಗತ್ತಿನಿಂದ ಈವತ್ತಿನ ಜಗತ್ತಿನವರೆಗೆ ಅಭ್ಯಸಿಸಿದಾಗ ಸಾಕಷ್ಟು ಪುರಾವೆಗಳು ಸಿಗುತ್ತವೆ. ನೀರಜಾ ಕೂಡಾ ನೈಜ ಲೋಕದ ಗೃಹಿಣಿಯಾಗಿ ಹೊರಬಂದು ಹೈಜಾಕ್ ಆದ ವಿಮಾನನಲ್ಲಿ ಎಷ್ಟೋ ಜನರ ಕಾಪಾಡಿ ತನ್ನ ಹುಟ್ಟಿದ ತಾರೀಕಿನೊಂದಿಗೆ ಸಾಯುವ ಅವಳ ದಿಟ್ಟ ಹೋರಾಟಕ್ಕೆ ಕೊಟ್ಟ ಶ್ರೇಷ್ಠ ಪದಕ ನಮ್ಮ ಕಣ್ಣೊಳು ನೀರು ತರುವುದಲ್ಲದೆ, ಇಡೀ ಮಹಿಳಾ ವರ್ಗಕ್ಕೆ ಮಾದರಿಯಾಗುತ್ತಾಳೆ. ನೊಂದ ಮಹಿಳೆಯರು ಇಂದು ಎಷ್ಟೋ ಎತ್ತರದತ್ತ ಬೆಳೆದಿರುವುದು ನಿಜಕ್ಕೂ ಖುಷಿಯಾದ ಸಂಗತಿ.
- ಡಾ. ಕೃಷ್ಣವೇಣಿ. ಆರ್.ಗೌಡ
