ಧಾರಿಣಿ ಮಾಯಾ ಅವರ ‘ಮೌನದ ಚಿಪ್ಪಿನೊಳಗೆ’ ಪುಸ್ತಕದ ಕುರಿತು ವೀಣಾ ಶಂಕರ್ ಅವರು ಬರೆದ ಪುಸ್ತಕ ಪರಿಚಯವನ್ನು ಮತ್ತು ಪುಸ್ತಕವನ್ನು ತಪ್ಪದೆ ಎಲ್ಲರೂ ಓದಿ…
ಪುಸ್ತಕ : ಮೌನದ ಚಿಪ್ಪಿನೊಳಗೆ
ಲೇಖಕರು : ಧಾರಿಣಿ ಮಾಯಾ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ : 180.00
ಪುಟ : 146
ಈ ಚಿಪ್ಪಿನೊಳಗೆ ಮೌನದಾ ಮಾತು ಮುತ್ತುಗಳಾಗಿವೆ. ಮೌನವಾಗಿಯೇ ಎಲ್ಲವನ್ನೂ ಬರೆದಿರುವೆ ರೀತಿ ಇಷ್ಟ ಆಯ್ತು…ಒಂದು ಕಡೆಯೂ ಇದು ಓದಲಿಕ್ಕೆ ಬೇಜಾರಾಯ್ತಪ್ಪ ಅನ್ನಿಸಲಿಲ್ಲ.. ಸಂಸಾರದಲ್ಲಿ, ಸಮಾಜದಲ್ಲಿ ನೆಡೆಯುವ ಏರುಪೇರುಗಳನ್ನು ಕುರಿತು ಹಾಗೂ ಸಾಮಾಜಿಕ ಕಳಕಳಿಯುಳ್ಳ ಬರಹಗಳನ್ನು ಅವರದೇ ಆದ ವಿಶಿಷ್ಟ ರೀತಿಯಲ್ಲಿ ಸರಳವಾಗಿ ಕಟ್ಟಿ ಕೊಟ್ಟಿದ್ದಾರೆ.
ಮೂಕ ಹಕ್ಕಿಯು ಹಾಡುತಿದೆ. ಒಂದು ಹೆಣ್ಣು ತನ್ನ ಸಂಸಾರ ತೂಗಿಸಿಕೊಂಡು ಹೋಗುವುದರ ಜೊತೆಗೆ ಅವಳ ಮನಸಿನಲ್ಲಾಗುವ ತುಮುಲಗಳು, ತಲ್ಲಣಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ.
ಅಪ್ಪಾ ಎಂದರೆ ಸಾಕೇ… Always giving without any expectations.. ಇದು ಬಹುಶಃ ಅಪ್ಪನಿಗೆ ಮಾತ್ರ ಸಾಧ್ಯವೇನೋ…ತನ್ನ ಸಂಸಾರದ ನೆಮ್ಮದಿ, ಖುಷಿಯಲ್ಲಿ ತನ್ನ ಸಾರ್ಥಕತೆ ಕಾಣ್ತಾನೆ.. ಕೆಲವೊಮ್ಮೆ ಅವನಿಗೆ ಸಿಗಬೇಕಾದ ಗೌರವ ಪ್ರೀತಿ ಸಿಗದೇ ಹಾಗೆಯೇ ಉಳಿದುಬಿಡ್ತಾನೆ..ಪಾಪ ಪುರುಷ ಪ್ರಾಣಿ… ಓದುತ್ತಿರಬೇಕಾದರೆ ನನ್ನ ಅಪ್ಪನ ನೆನಪಾಯಿತು.
‘ಮೌನದ ಚಿಪ್ಪಿನೊಳಗೆ’ ಲೇಖಕಿ ಧಾರಿಣಿ ಮಾಯಾ
ಆಪ್ತ ಮಿತ್ರ ಅಪ್ಪ ವಿರಾಮಿಸದ ಈ ಅಪ್ಪ.. ಪುಸ್ತಕದಲ್ಲಿ ನೀವು ಒಂದೊಂದು ವಿಷಯಕ್ಕೂ ಕೊಟ್ಟಿರುವ ಟೈಟಲ್ ಇಷ್ಟ ಆಯ್ತು.. ಆಪ್ತತೆಯ ಬರಹಗಳು. ಎಲ್ಲ ಲೇಖನಗಳಲ್ಲಿ ಅನುಭವ, ಜ್ಞಾನ ಹಾಗೂ ವಿವೇಕದ ಕಳಕಳಿ ಇರುವ ಒಂದು under current ಇದೆ ಅನ್ನಿಸಿತು.
ಅಭಿನಂದನೆಗಳು, ಇನ್ನು ಹೆಚ್ಚೆಚ್ಚು ಪುಸ್ತಕಗಳನ್ನು ಬರೆಯಿರಿ.. ಓದುಗರಿಗೆಲ್ಲಾ ತಲುಪಲಿ..
- ವೀಣಾ ಶಂಕರ್