ಗುಡುಗುಗಳು, ಸಿಡಿಲುಗಳು ಬಂದಾಗ ಜೀವನದಲ್ಲಿ ನೆಮ್ಮದಿಯಿರಲಿ…ಸುಂದರ ಸಾಲುಗಳನ್ನು ಕವಿ ರಾಮಪ್ರಸಾದ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….
ತಿಳಿಯಾಕಾಶದಲ್ಲಿ ಮಿಂಚುಗಳು ಮಿಂಚಿದಾಗ/
ನಂಬಿಕೆಯಿರಲಿ ಬದುಕಿನಲ್ಲಿ ಅಂಜಿಕೆಯಾದಾಗ
ನೀಲಿಯಾಗಸದಲ್ಲಿ ಗುಡುಗುಗಳು ಸಿಡಿದಾಗ/
ನೆಮ್ಮುಗೆಯಿರಲಿ ಜೀವನದಲ್ಲಿ ಭಯವಾದಾಗ/
ಅನುದಿನ ಜೀವಿತದಲ್ಲಿ ಆಗುವ ಕಹಿ ಘಟನೆಗಳಲ್ಲಿ/
ಹುದುಗಿರುವುದು ದೈವ ರಕ್ಷಣೆಯು ಆಕಸ್ಮಿಕಗಳಲ್ಲಿ/
ಪ್ರತಿದಿನ ಪಯಣದಲ್ಲಿ ಜರುಗುವ ಅಪಘಾತಗಳಲ್ಲಿ/
ಅಡಗಿರುವುದು ದೈವ ಸಂರಕ್ಷಣೆಯು ಸಂಭವಗಳಲ್ಲಿ/
ವಿಶ್ವಾಸವಿರಲಿ ವಿಧಿಯಲ್ಲಿ ಬರವಸೆಯಿರಲಿ ಭವಿಷ್ಯದಲ್ಲಿ /
ಆಪತ್ತುಗಳ ಪರಿಹರಿಸುವನು ದೈವದತ್ತದಲ್ಲಿ ಪರಮಾತ್ಮನು/
ವಿಶ್ವಾಸವಿರಲಿ ವಿಧಿಯಲ್ಲಿ ಬರವಸೆಯಿರಲಿ ಭವಿಷ್ಯದಲ್ಲಿ /
ವಿಪತ್ತುಗಳ ಬಗೆಹರಿಸುವನು ದೈವಿಕತೆಯಲ್ಲಿ ಭಗವಂತನು/
- ರಾಮಪ್ರಸಾದ