ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದ ಸುಭಾಷ್ ಚಂದ್ರ ಬೋಸ್ ಅವರು ಹುಟ್ಟುಹಬ್ಬ ಜನವರಿ ೨೩, ೧೮೯೭, ಅವರ ಪುಣ್ಯಸ್ಮರಣೆಯ ಅಂಗವಾಗಿ ಲೇಖಕ ಪಾಂಡುರಂಗ ಕೆ ಎಸ್ ಅವರು ಬರೆದ ಒಂದು ಲೇಖನವನ್ನು ತಪ್ಪದೆ ಓದಿ…
ಸ್ವತಂತ್ರ ಭಾರತದ ಕನಸ್ಸಿನ ಚಿರಸ್ಥಾಯಿ ನೇತಾಜಿ ಸುಭಾಷ್ ಚಂದ್ರ ಬೋಸರು ಒಡಿಶಾದ ಕಟಕ್ ಎಂಬ ಗ್ರಾಮದಲ್ಲಿ ಜಾನಕೀನಾಥ ಬೋಸ್ ಹಾಗೂ ಪ್ರಭಾವತಿ ಬೋಸ್ ದಂಪತಿಗಳಿಗೆ ಒಂಬತ್ತನೆಯ ಮಗನಾಗಿ ಜನವರಿ 23, 1897 ರಂದು ಜನಿಸಿದರು. ತಂದೆ ವಕೀಲರಾಗಿದ್ದರಿಂದ ಬೋಸರಿಗೆ ತನ್ನಿಷ್ಟದಂತೆ ಬೆಳೆಯಲು ಯಾವ ತೊಂದರೆಗಳು ಇದ್ದಿಲ್ಲ.
ಫೋಟೋ ಕೃಪೆ : indiatvnews
ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತೊರೆಯುವ ಮನೋಭಾವ ವಿದ್ಯಾಭ್ಯಾಸದಲ್ಲಿ ಸಿಕ್ಕ ಗುರುಗಳಿಂದ ಹಾಗು ಸ್ವಾಮಿ ವಿವೇಕಾನಂದರ ನಡೆಯಿಂದ ಬಂದಿದ್ದು ಸ್ವಾತಂತ್ರ್ಯ ಹೋರಾಟದ ಚಳುವಳಿಗೆ ಧುಮುಕುವಂತೆ ಮಾಡಿತು. ಗಾಂಧಿಯವರ ಮೆಚ್ಚುಗೆಗೆ ಪಾತ್ರರಾಗಿ ಅಂದಿನ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೇರಿ ತಾನು ಕಂಡಿದ್ದ ಸ್ವತಂತ್ರ ಭಾರತದ ಕನಸನ್ನು ನನಸು ಮಾಡಲು ರೂಪಿಸಿದ ಯೋಜನಗಳನ್ನು ಕಾರ್ಯರೂಪಕ್ಕೆ ತಂದದ್ದು ಶಾಂತಿ ಧೂತನಿಗೆ ಸುತರಾಂ ಹಿಡಿಸಲಿಲ್ಲ, ಕಾರಣ ಅಂದಿನ ಹಿಡೀ ಪಕ್ಷ ಗಾಂಧಿಯವರ ಶಾಂತಿ ತತ್ವದಲ್ಲಿ ನಡೆಯುತ್ತಿದ್ದದ್ದು ಏಕಾಏಕಿ ಸುಭಾಷರ ಕೈಚಳಕ ದಿಂದ ಕ್ರಾಂತಿಯ ಕಡೆಗೆ ತಿರುಗಿತ್ತು. ಇಷ್ಟಾಗುವುದರ ವೇಳೆಗೆ ಅಧ್ಯಕ್ಷ ಸ್ಥಾನ ಮುಗಿಯಿತು ಸುಭಾಷರು ಮತ್ತೊಮ್ಮೊ ಅಧ್ಯಕ್ಷರಾಗುವ ಬಯಕೆಯನ್ನು ಗಾಂಧಿಯ ಮುಂದಿಟ್ಟಾಗ ಅದನ್ನು ಗಾಂಧಿ ತಿರಸ್ಕರಿಸಿದ ಕಾರಣಕ್ಕೆ ಸುಭಾಷರು ಚುನಾವಣಾ ನೀತಿಯನ್ನು ಅನುಸರಿಸಿ ಬಹುಮತದೊಂದಿಗೆ ಮತ್ತೆ ಅಧ್ಯಕ್ಷ ಸ್ಥಾನಕ್ಕೇರಿ ಎಲ್ಲಾ ಕಾರ್ಯಗಳ ವೇಗವನ್ನು ಹೆಚ್ಚಿಸಿದರು. ಗಾಂಧಿಯವರ ಮೃದು ದೋರಣೆಯಿಂದಾಗಿ ಈ ವೇಗ ಮುಂದುವರಿಯಲಿಲ್ಲ, ಆಗಲೂ ಸುಭಾಷರು ಗಾಂಧಿಯವರ ಮೇಲೆ ತಿರುಗಿ ಬೀಳದೆ ಅಥವಾ ವಿರೋಧಿಸದೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಕಟ್ಟಿ ತನ್ನ ಸ್ವತಂತ್ರ ಭಾರತದ ಕನಸಿನ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದರು. ಮುಂದೆ ವೀರ ಸಾವರ್ಕರವರನ್ನು ಭೇಟಿಯಾಗಿ ಅವರ ಮಾತುಗಳಿಂದ ಸ್ಪೂರ್ತಿಗೊಂಡು ದೇಶ ವಿದೇಶಗಳಲ್ಲಿ ಬಂಧಿಸಲ್ಪಟ್ಟ ಭಾರತೀಯ ಯೋದರಿಂದ ಸೈನ್ಯ ಕಟ್ಟುತ್ತಾ ಭಾರತದ ಬಗ್ಗೆ ಸದಾ ಅಸಡ್ಡೆ ಮಾತುಗಳಾಡುತ್ತಿದ್ದ ಹಿಟ್ಲರ್ಗೆ ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸುವ ನೇತಾಜಿಯ ಗಟ್ಟಿತನ ಹಿಟ್ಲರ್ನನ್ನ ಸೋಲುವಂತೆ ಮಾಡಿ ಸುಭಾಷರಿಗೆ ಬೇಕಾದ ಸೌಕರ್ಯಗಳನ್ನ ಒದಗಿಸಿ ಕೊಟ್ಟಿತ್ತು.
ಸುಭಾಷರನ್ನು ಒಪ್ಪಿ ಮದುವೆ ಆಗಲು ಬಯಸಿದ ಎಮಿಲಿ ಶೆಂಕ್ಲ್ ಎಂಬ ಹುಡುಗಿಯ ಜಾತಿ, ಧರ್ಮ, ಮತ, ಪಂಥಗಳ ಲೆಕ್ಕಾಚಾರಕ್ಕೆ ಕಿವಿಗೊಡದೆ ಅವಳ ನಿಷ್ಕಲ್ಮಶ ಪ್ರೀತಿಗೆ ಶರಣಾಗಿ ಮದುವೆಯಾಗಿ ಅನಿತಾ ಬೋಸ್ ಹೆಣ್ಣು ಮಗುವಿನ ತಂದೆಯಾದರು. ಆದರೆ ಆ ತಾಯಿಗೆ ತನ್ನ ಪತಿಯ ಜೊತೆಗೆ ಹೆಚ್ಚು ದಿನಗಳ ಕಾಲ ಕಳೆಯಲಾಗಲಿಲ್ಲ, ಸುಭಾಷರ ಸಾವಿನ ವಿಷಯದಲ್ಲಿ ಗೊಂದಲವಿದ್ದ ಕಾರಣ ಅವರಿಗೆ ಅನೇಕ ರೀತಿಯಲ್ಲಿ ತೊಂದರೆ ಕೊಡಲಾಯಿತು.
ಫೋಟೋ ಕೃಪೆ : indiatvnews
‘ಜೈ ಹಿಂದ್’ ಎಂಬ ಘೋಷಣೆಯೊಟ್ಟಿಗೆ ಭಾರತೀಯ ರಾಷ್ಟ್ರೀಯ ಸೇನೆ ಎಂಬ ಹೆಸರಿನಲ್ಲಿ ಸೈನ್ಯವನ್ನು ಕಟ್ಟಿ ಅಂಡಮಾನ್ ನಿಕೋಬಾರ್ ದ್ವೀಪಗಳ ಸ್ವತಂತ್ರಗೊಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಅಲ್ಲಿಂದ ಸಿಂಗಪುರಕ್ಕೆ ಲಗ್ಗೆ ಇಟ್ಟು ಅಲ್ಲಿಯು ಭಾರತದ ತ್ರಿವರ್ಣ ಧ್ವಜ ಹಾರಿಸಿ ಸರ್ಕಾರವನ್ನು ರಚಿಸಿ ಬ್ರಿಟಿಷರ ನಿದ್ದೆಗೆಡಿಸಿ ಭಾರತವಾಸಿಗಳ ಹೃದಯದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿ ಮುನ್ನಡೆಯುತ್ತಿದ್ದರು.
ಒಕ್ಕೂಟ ವ್ಯವಸ್ಥೆಯಲ್ಲಿ ತೊಂದರೆಯಾದವರ ಜೊತೆ ನಿಲ್ಲುವುದು ಆ ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಉದ್ದೇಶವಾದದ್ದರಿಂದ ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾಯಿತು ಅದರ ಜೊತೆಗೆ ಭಾರತೀಯ ರಾಷ್ಟ್ರೀಯ ಸೈನ್ಯವು ಶರಣಾಯಿತು ಆಗಲು ಕಳೆಗುಂದದ ನೇತಾಜಿ ರಷ್ಯಾದ ನೆರವು ಪಡೆಯಲು ಪಯಣಿಸಿದರು.
ಅವರ ಜೀವನದುದ್ದಕ್ಕೂ ಎಲ್ಲಿಯೂ ಧರ್ಮ- ಜಾತಿ- ಮತ ಪಂಥಗಳ ಬಗ್ಗೆ ಮಾತನಾಡಿದ ಇತಿಹಾಸ ಇಲ್ಲ, ವಿದೇಶದಲ್ಲಿ ಮದುವೆ ಆದರು, ಅಂದಿನ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದು ತುಂಬಾ ವಿಶೇಷದ ಸಂಗತಿ.
- ಪಾಂಡುರಂಗ ಕೆ ಎಸ್ – ಸಮಾಜಸೇವಾ ಕಾರ್ಯಕರ್ತರು, ಗುಂಡ್ಲವದ್ದಿಗೇರಿ.