ಮಾಯಾಲೋಕದ ಮೋಡಿಗಾರ ‘ಶ್ಯಾಂ ಜಾದುಗಾರ್ ಕಲ್ಲಡ್ಕ’

” ಮಾಯಾ ಲೋಕ ” ಕಲ್ಲಡ್ಕ ದ ಶ್ರೀ ಶ್ಯಾಂ ಜಾದುಗಾರ್ ಅವರ ಸುಮಾರು 5,000 ಕ್ಕೂ ಮಿಕ್ಕಿ ಜಾದೂ ಪ್ರದರ್ಶನ ನೀಡಿರುತ್ತಾರೆ. ಇದರ ಜೊತೆಗೆ ಹಾಡು, ಮಿಮಿಕ್ರಿ, ಸಂಗೀತ ಗಳನ್ನು ಬಳಗದವರು ಪ್ರಸ್ತುತ ಪಡಿಸುತ್ತಾರೆ. ಅವರ ಸಾಧನೆಯ ಕುರಿತು ಲೇಖಕ ಬಾಲು ದೇರಾಜೆ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…

ಕಾಸರಗೋಡು ಜಿಲ್ಲೆ ಶಿಮ್ಲಡ್ಕದಿಂದ ದ.ಕ.ಜಿಲ್ಲೆಯ ಪುತ್ತೂರು- ಮಾಡಾವು ಪಳ್ಳತಡ್ಕಕ್ಕೆ ಬಂದು ನೆಲೆಸಿದ ದಂಪತಿಗಳು ಶ್ರೀ ಸುಬ್ರಾಯ ಭಟ್ ಹಾಗೂ ಶ್ರೀಮತಿ ಶಂಕರಿ. ಇತ್ತೀಚೆಗಿನ ವರ್ಷಗಳಲ್ಲಿ ಇವರಿಬ್ಬರೂ ನಿಧನರಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಏಕೈಕ ಮಗ ಶ್ರೀ ಎಸ್. ಶ್ಯಾಂ.

ಬೆಳ್ತಂಗಡಿ, ಪುತ್ತೂರು, ಮಾಡಾವು, ಬೆಳ್ಳಾರೆ ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಶ್ರೀ ಶ್ಯಾಂ ರಿಗೆ ಶಾಲಾದಿನಗಳಲ್ಲೇ ಮಾಯಾಜಾಲ(Magic)ದ ವಿದ್ಯೆಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು. 18 ನೇ ವಯಸ್ಸಿನಲ್ಲೇ ಪರಿಣತ ಜಾದೂಗಾರ ರೊಡನೆ ತರಬೇತಿಗೊಂಡರು.

1978-79 ನೇ ಇಸವಿಯಲ್ಲಿ ಪ್ರಥಮ ಬಾರಿಗೆ ಪಾಲ್ತಾಡು ಶ್ರೀ ರಾಮಕೃಷ್ಣ ಆಚಾರ್ ರ ಸಹಕಾರದೊಂದಿಗೆ ಜಾದೂ ಕಾರ್ಯಕ್ರಮವನ್ನು ಆರಂಭಿಸಿ ” ಶ್ರೀ ಶ್ಯಾಂ ಜಾದುಗಾರ್ ” ಎಂದು ಚಿರಪರಿಚಿತರಾದರು.ನಂತರದ ದಿನಗಳಲ್ಲಿ ಕೀಲಾರು ಶ್ರೀ ಗೋಪಾಲಕೃಷ್ಣಯ್ಯನವರು ಸಹಕಾರ ನೀಡುವುದರೊಂದಿಗೆ ಪ್ರೋತ್ಸಾಹಿಸಿದರು.

” ಮಾಯಾ ಲೋಕ ” ಕಲ್ಲಡ್ಕ ದ ಶ್ರೀ ಶ್ಯಾಂ ಜಾದುಗಾರ್ ಮತ್ತು ಬಳಗದವರು ದ.ಕನ್ನಡ, ಉ.ಕನ್ನಡ ಸೇರಿದಂತೆ ಕಾಸರಗೋಡು, ಮೈಸೂರು-ಕೊಡಗು ದಸರಾ, ಉಡುಪಿ ಅಷ್ಟಮಠ ಶ್ರೀ ಕ್ಷೇತ್ರ ಗಳಾದ ಒಡಿಯೂರು, ಮಾಣಿಲ,ಧರ್ಮಸ್ಥಳ ಅಲ್ಲದೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆಯ ಪ್ರಾಯೋಜಕತ್ವದಲ್ಲಿ ಪುತ್ತೂರು-ಸುಳ್ಯ ತಾಲೂಕಿನ ಹೆಚ್ಚಿನ ಶಾಲೆಗಳಲ್ಲಿ , ಮನೆಗಳಲ್ಲಿ , ಮುಂತಾದ ಹಲವಾರು ಕಡೆಗಳಲ್ಲಿ ಸೇರಿದಂತೆ ಈ ತನಕ ಸುಮಾರು 5,000 ಕ್ಕೂ ಮಿಕ್ಕಿ ಜಾದೂ ಪ್ರದರ್ಶನ ನೀಡಿರುತ್ತಾರೆ. ಇದರ ಜೊತೆಗೆ ಹಾಡು, ಮಿಮಿಕ್ರಿ, ಸಂಗೀತ ಗಳನ್ನು ಬಳಗದವರು ಪ್ರಸ್ತುತ ಪಡಿಸುತ್ತಾರೆ.

ಮಂಗಳೂರಿನ ಡಾ.ರಿಚರ್ಡ್ ಕ್ಯಾಸ್ಟೆಲಿನೋ ರವರ ” ಬಂಗಾರ್ ಪಟ್ಲೇರ್ ” ಹಾಗೂ ಬೆಳ್ತಂಗಡಿಯ ಚೆನ್ನಗಂಗಪ್ಪರವರ ” ಕರಿ ಮರಿಯ ಕಗ್ಗತ್ತಲು ” ಹೀಗೆ ತುಳು-ಕನ್ನಡ ಚಲನಚಿತ್ರ
ಗಳಲ್ಲಿ ನಟಿಸಿದ್ದು, ರಂಗಭೂಮಿ – ಯಕ್ಷಗಾನ ಕ್ಷೇತ್ರಗಳಲ್ಲಿ ಹವ್ಯಾಸಿಯಾಗಿ ಜಿಲ್ಲೆಯ ಪ್ರಸಿದ್ಧ ಮೇಳದಲ್ಲಿ ವೇಷಧಾರಿಯಾಗಿ ಕಾಣಿಸಿಕೊಂಡವರು. ರಾಜಕೀಯ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ.ಗ್ರಾಮ ಪಂಚಾಯತ್ ಕಾವು, ಸಹಕಾರಿ ಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದುದಲ್ಲದೆ,ವಧು -ವರರ ಸಮಾಗಮ ಹಾಗೂ ಬೇಕಾದವರಿಗೆ ಜಾಗದ ವಿಲೇವಾರಿಗಳಲ್ಲೂ ಕಾರ್ಯ ನಿರ್ವಹಿಸುತ್ತಾರೆ.

ಕಳೆದ 15 ವರ್ಷಗಳಿಂದೀಚೆಗೆ ಜಾದೂವಿನ ಜೊತೆಗೆ “ಮಾಯಾಲೋಕ ಕೆಟರರ್ಸ್ ಮತ್ತು ಸರ್ವಿಸಸ್” ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಶುಚಿ-ರುಚಿ-ಸ್ವಚ್ಛ ,ನಗು -ಮುಖದ ತಾಳ್ಮೆಯ ಊಟೋಪಚಾರಕ್ಕೆ(catering)ಸಂಪರ್ಕಿಸಬಹುದಾಗಿದೆ.ಇಲ್ಲಿ ಮಾಡಲ್ಪಟ್ಟ ಅಡುಗೆಯು ಉತ್ಸವ, ಮದುವೆ ಮುಂತಾದ ಸಮಾರಂಭಗಳಿಗೆ ಬೇಕಾದವರಿಗೆ ಬೇಕಾದ ಹಾಗೆ ಸಾಗಿಸಲಾಗುತ್ತದೆ.

This slideshow requires JavaScript.

 

6 ತಿಂಗಳಿಂದ ಮನೆಯಲ್ಲೇ ತಯಾರಿಸುವ ಸಾಂಬಾರು, ಸಾರು ,ಗಸಿ ,ಮೆಣಸುಕಾಯಿ,ಮಸಾಲೆಗಳು, ಚಟ್ನಿ ಕಷಾಯದ ಮಸಾಲೆ ಹುಡಿಗಳು ಅಲ್ಲದೆ ನೇಂದ್ರ ಬಾಳೆಕಾಯಿ ಚಿಪ್ಸ್,
ಕಾರಕಡ್ಡಿ, ರವೆ ಲಾಡು ಮತ್ತು ಅನಾನಸ್, ಖರ್ಜೂರ, ಕ್ಯಾರೆಟ್ , ಕಡ್ಲೆಬೇಳೆ ಹೋಳಿಗೆಗಳು ಜೊತೆಗೆ ಮೈಸೂರುಪಾಕ್ ,ಜಿಲೇಬಿ ಮುಂತಾದವುಗಳು ಮಾಯಾಲೋಕವತಿ ಯಿಂದ ಯಾರಿಸಲ್ಪಟ್ಟು,ಸ್ಥಳೀಯ ಅಲ್ಲದೆ ಪುತ್ತೂರು, ಸುಳ್ಯ, ಕಡಬ ಮುಂತಾದ ಕಡೆಗಳಲ್ಲಿ ಸಮಾರಂಭ, ಅಂಗಡಿ, ಮನೆಗಳಿಗೆ ಮಾರಾಟ ಮಾಡಲಾಗುತ್ತದೆ.

ದ.ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪ್ರಶಸ್ತಿ ,ಬೆಂಗಳೂರಿನಲ್ಲಿ ಡಾ. ರಾಜ್ ಕುಮಾರ್ ಮಂದಹಾಸ ಪ್ರಶಸ್ತಿ , ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಸಂಘ – ಸಂಸ್ಥೆಗಳಿಂದ ಸ್ಮರಣಿಕೆ, ಸನ್ಮಾನ, ಪ್ರಶಸ್ತಿ ಗಳನ್ನು ಶ್ರೀ ಶ್ಯಾಂ ಜಾದುಗಾರ್ ಸ್ವೀಕರಿಸಿದ್ದು, ಸಾಮಾಜಿಕ ಕಳಕಳಿ ಯಿಂದ ಇರುವ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವ ರಿಗೆ ಮಾಯಾಲೋಕ ವತಿಯಿಂದ ಸನ್ಮಾನಿಸಿದ್ದಾರೆ.

ಶ್ರೀಯುತರು ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದವರು. ಜೀವನದಲ್ಲಿ ಏರಿಳಿತಗಳನ್ನು ಕಂಡವರು.ಮಾತುಕಡಿಮೆ ಅಧಿಕ ದುಡಿಮೆ ಎಂಬ ದ್ಯೇಯ ದಿಂದ ಬಂದದ್ದನ್ನೆಲ್ಲಾ ಸ್ವೀಕರಿಸುತ್ತಾ
ಮುಂದೆಗೆ ಒಳಿತಾಗಬಹುದೆಂಬ ನಂಬಿಕೆಯಲ್ಲಿ ಛಲಬಿಡದೆ ಸಾಧಿಸಿ ತೋರಿಸುದಾಗಿ ಹೊಸತನವನ್ನು ಕಾಣುತ್ತಾ ಸಂಸ್ಥೆ ಬಳಗದವರ ಜೊತೆಗೆ ತಮ್ಮ ಜೀವನದ ದಾರಿಯಲ್ಲಿ ಮುನ್ನುಗ್ಗುತ್ತಾ ಮುಂದಕ್ಕೆ ಸಾಗುತ್ತಿದ್ದು, ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಬೋರ್ಯದಲ್ಲಿ ಶ್ರೀ ಶ್ಯಾಂ ಜಾದುಗಾರ್ ಹಲವು ವರ್ಷಗಳಿಂದ ನೆಲಸಿ ” ಮಾಯಾಲೋಕ ನಿಲಯ ” ವನ್ನೇ ನಿರ್ಮಾಣ ಮಾಡಿದ್ದು ನಾನಾ ಕಡೆಗಳಿಂದ ಇವರ ಜಾದು ವನ್ನು ಕೈ ಬೀಸಿ ಕರೆಯುತ್ತಿದೆ.

ಇಂತವರಿಗೆ ನಾಡಿನ ಜನತೆಯ ಸಹಕಾರ – ಪ್ರೋತ್ಸಾಹ ಬಹಳ ಪ್ರಾಮುಖ್ಯವಾಗಿದೆ.


  • ಬಾಲು ದೇರಾಜೆ, ಸುಳ್ಯ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW