ಮುರುದ್ ಜಂಜೀರಾ ಕೋಟೆಯ ಒಂದಷ್ಟು ರಹಸ್ಯಮಯ ವಿಷಯಗಳು



ಮುರುದ್ ಜಂಜೀರಾ ಕೋಟೆ ಸಾಕಷ್ಟು ರಹಸ್ಯಮಯವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಖೀಲಾವನ್ನು ಒಮ್ಮೆಯಾದರೂ ಕಣ್ತುಂಬಿಕೊಳ್ಳಿ ಮತ್ತು ನಿಮ್ಮ ಅನುಭವವನ್ನು ಆಕೃತಿಕನ್ನಡಲ್ಲಿ ತಪ್ಪದೆ ಹಂಚಿಕೊಳ್ಳಿ…

ಮುಂಬೈಯಿಂದ ೧೬೫ ಕಿಮೀ ದೂರದ ರಾಯಗಡ ಜಿಲ್ಲೆಯಲ್ಲಿ ೫೦೦ ವರ್ಷದ ಹಿಂದಿನ  ಮುರುದ ಜಂಜೀರಾ (ಖೀಲಾ) ಕೋಟೆವಿದೆ. ಅರಬ್ಬಿ ಸಮುದ್ರದ ಮಧ್ಯದಲ್ಲಿ ಐಲ್ಯಾಂಡ್ ನಲ್ಲಿ ಇದು ನಿರ್ಮಿತವಾಗಿದೆ. ಇದನ್ನು ನಿರ್ಮಿಸಿದ್ದ ರಾಜ ಸಿದ್ದಿಝೋಹಲ್. ಈ  ಕೋಟೆ ಸಾಕಷ್ಟು ರಹಸ್ಯಮಯವಾಗಿದ್ದು, ಅದನ್ನು ನೋಡ ಬಯಸುವರು ರಾಜಪುರಿಯಿಂದ ಬೋಟ್ ಬಳಸಿ ಅಲ್ಲಿಗೆ ಹೋಗಬಹುದು. ರಾಜ್ ಪುರಿಯಿಂದ ೪೦ ಅಡಿಯಷ್ಟು ಅಂತರದಲ್ಲಿ ಈ ಕೋಟೆ ಇದೆ. ಇದನ್ನು ಜಂಜೀರಾ ಕೋಟೆ ಎಂದು ಕರೆಯಲ್ಪಡುತ್ತದೆ.

ಫೋಟೋ ಕೃಪೆ : pinterest

ಸುತ್ತಲೂ ಸಮುದ್ರ, ಎರಡು ಸರೋವರ. ಎರಡು ಸರೋವರದ ನೀರು ಸಿಹಿಯಾಗಿರುವುದು ವಿಶೇಷ

ಭಾರತದಲ್ಲಿ ಬ್ರಿಟಿಷರು, ಪೋರ್ಚಗೀಸರು, ಮರಾಠರು ಯಾರು ಕೂಡ ಈ ಖೀಲಾವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಪಚ್ಚಿಮ ಘಟದ ಏಕೈಕ ಕೋಟೆ ಎಂದೇ ಹೇಳಬಹುದು. ಇದರಲ್ಲಿ ಒಟ್ಟು ಮೂರೂ ಪ್ರವೇಶ ದ್ವಾರಗಳಿದ್ದು, ಕೋಟೆದ ಮಹಾದ್ವಾರ ಸಮೀಪ ಬರುವವರೆಗೂ ಕಣ್ಣಿಗೆ ಬೀಳುವುದಿಲ್ಲಇದರಿಂದಾಗಿ ಯಾರು ಕೂಡಾ ಅಷ್ಟು ಸುಲಭವಾಗಿ ಆಕ್ರಮಿಸಲು ಸಾಧ್ಯವಾಗಿಲ್ಲ. ಇದರಲ್ಲಿ ಎರಡು ಸರೋವರವಿದ್ದು, ಒಂದು ಸರೋವರ ನಲವತ್ತು ಅಡಿಯಷ್ಟು ಆಳವಿದ್ದರೆ, ಇನ್ನೊಂದು ಎಪ್ಪತ್ತು ಅಡಿಯಷ್ಟಿದೆ. ಸುತ್ತಲೂ ಸಮುದ್ರದಿಂದ ಆವರಿಸಿದರೂ ಅದರೊಳಗಿನ ಎರಡು ಸರೋವರದ ನೀರು ಸಿಹಿಯಾಗಿರುವುದು ಇನ್ನೊಂದು ವಿಶೇಷ ಮತ್ತು ಆಶ್ಚರ್ಯಕರ.

ಫೋಟೋ ಕೃಪೆ : Youtube

ಇದರಲ್ಲಿ ೨೯ ಭದ್ರತಾ ಚೌಕಿಗಳಿವೆ. ಮೇಲಿನ ಭಾಗದಲ್ಲಿ ಸೈನಿಕರು ಗುಂಡು ಹಾರಿಸಲು ಬಳಸಿದರೆ, ಕೆಳಭಾಗದಲ್ಲಿ ಗುಪ್ತದಳ ವೈರಿಗಳ ಮೇಲೆ ಕಣ್ಣಿಡುತ್ತಿದ್ದರು. ಮತ್ತು ಇದರ ಸುತ್ತಲೂ ಕಿಟಕಿಗಳಿವೆ. ಈ ಕೋಟೆ ಸಮುದ್ರ ಮಟ್ಟದಿಂದ ೯೦ ಅಡಿ ಎತ್ತರದಲ್ಲಿದೆ. ಇತಿಹಾಸದಲ್ಲಿ ಜಂಜೀರಾ ಕಾಲದ ಪ್ರಸಿದ್ಧ ರಾಜಧಾನಿ ಇದಾಗಿತ್ತು ಎಂದು ಹೇಳಲಾಗುತ್ತದೆ.

ಸುಂದರ, ಅದ್ಬುತ, ಆಶ್ಚರ್ಯಕರ ಕೋಟೆ

ಇದರೊಳಗೆ  ಮೂರೂ ತೋಪುಗಳಿದ್ದು, ಅವುಗಳನ್ನು ಕಲಾಲಬಂಗ್ಡಿ, ಚಾವಿರಿ ಮತ್ತು ಲ್ಯಾಂಡ ಕಸಮ್ ಎಂದು ಹೆಸರಿಡಲಾಗಿದೆ. ಈಗಲೂ ನೋಡಲು ಸಿಗುತ್ತವೆ. ಒಂದೊಂದು ತೋಪುಗಳ ತೂಕ 22 ಟನ್ ಗಳಷ್ಟಿದೆ. ಈ ತೋಪು ಇಡೀ ದಿನ ಬಿಸಿಲಿನಲ್ಲಿದ್ದರೂ ಕಾಯುವುದಿಲ್ಲ. ಅವು ಮಳೆ, ಬಿಸಿಲು, ಗಾಳಿಗೆ ತುಕ್ಕು ಹಿಡಿಯದೇ ಯಥಾ ಸ್ಥಿತಿಯಲ್ಲಿ ಇರುವುದು ನೋಡುಗರನ್ನು ಇನ್ನಷ್ಟು ಬೆರಗುಗೊಳಿಸುತ್ತವೆ. ಮಸೀದಿ, ದೇವಸ್ಥಾನ ಎರಡನ್ನು ಈ ಕೋಟೆಯೊಳಗೆ ಕಾಣಬಹುದಾಗಿದ್ದು, ಇದು ಏಕೈಕತೆಯನ್ನು ಸಾರುತ್ತದೆ. ಅಂದು  ಇದನ್ನು ತಲುಪಲು ಯಾವುದೇ ಹಡಗಿನ ಸಹಾಯ ಬಳಸುತ್ತಿರಲಿಲ್ಲ. ಬದಲಾಗಿ ಸಮುದ್ರದೊಳಗೆ ಸುರಂಗ ಮಾರ್ಗವನ್ನು ಕೊರೆಯಲಾಗಿತ್ತು, ಅದು ಒಂದು ಕಿಮೀ ದೂರದ ರಾಜ್ ಪಿತ ಎಂಬ ಹಳ್ಳಿಯನ್ನು ತಲುಪುತ್ತಿತ್ತು. ಈ ಸುರಂಗ ಮಾರ್ಗವನ್ನು ಬಳಸಿ ಅಲ್ಲಿಗೆ ಸೈನಿಕರು, ರಾಜರು ಓಡಾಡುತ್ತಿದ್ದರು.



ಒಟ್ಟಿನಲ್ಲಿ ಸುಂದರ, ಅದ್ಬುತ, ಆಶ್ಚರ್ಯಕರ ಕೋಟೆ ಇದಾಗಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.  ಈ ಕೋಟೆಗೆ ಒಮ್ಮೆಯಾದರೂ ಭೇಟಿಕೊಡಿ. ನಿಮ್ಮ ಅನುಭವವನ್ನು ನಮ್ಮ ಆಕೃತಿಕನ್ನಡದಲ್ಲಿ ಹಂಚಿಕೊಳ್ಳಿ .

ಆದರೆ ಒಂದು ಸೂಚನೆ ಅಲ್ಲಿಗೆ ಭೇಟಿ ನೀಡಿದಾಗ ಆ ಸ್ಥಳದ ವಿಶೇಷತೆ ತಿಳಿದುಕೊಳ್ಳುವಲ್ಲಿ ಹೆಚ್ಚು ಗಮವಿರಲಿಯೇ ಹೊರತು ಸೆಲ್ಫಿ ಕಡೆ ಗಮನ ಬೇಡ. ಈಗಾಗಲೇ ಮೌತ್ ಕಾ ಖೀಲಾ ಎನ್ನುವಷ್ಟು ಸಾಕಷ್ಟು ಪ್ರವಾಸಿಗರು ತಮ್ಮ ಪ್ರಾಣವನ್ನು ಇಲ್ಲಿ ಕಳೆದುಕೊಂಡಿದ್ದಾರೆ ಎಂದು ಎಚ್ಚರಿಸುತ್ತಾ  ‘ನಮ್ಮ ದೇಶ, ನಮ್ಮ ಹೆಮ್ಮೆ’ ಯ ಮುಂದಿನ ಭಾಗದಲ್ಲಿ ನಮ್ಮ ದೇಶದ ಇನ್ನಷ್ಟು ರಮಣೀಯ ಸ್ಥಳಗಳ ಬಗ್ಗೆ ತಿಳಿಯೋಣ .


  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ತುಂಬ ಉಪಯುಕ್ತ ಮಾಹಿತಿ. ಧನ್ಯವಾದಗಳು

Home
News
Search
All Articles
Videos
About
1
0
Would love your thoughts, please comment.x
()
x
%d
Aakruti Kannada

FREE
VIEW