‘ಅವಳು’ ಎಂದರೆ ಯಾರು?, ಮಗಳೂ- ಮಡದೀ- ತಾಯಿಯೂ ಆಗಿ ‘ಅವಳು’ ಕಾಣುವಳು ಎಂದು ಕವಿ ಖಾದರ್ ಅವರು ಅವಳ ವಿವಿಧ ಪಾತ್ರವನ್ನು ಸುಂದರವಾಗಿ ವರ್ಣಿಸಿದ್ದಾರೆ. ಮುಂದೆ ಓದಿ…
ಅವಳು,
ಸಂತೋಷವೂ ದುಃಖವೂ
ಅಭಿಮಾನವೂ ಅಪಮಾನವೂ
ಧರೆಯ ತಂಪು ಆಗಸದ ಬೆಂಕಿಯು
ಅವಳು,
ಬೇಕು ಎನ್ನುವ ಭಾವಕ್ಕೆ
ಭಾಗ್ಯದ ಹೊನಲು
ಅವಳು,
ಬೇಡ ಎನ್ನುವ ಬೇಸರಕ್ಕೆ
ಭಾರದ ಬುಟ್ಟಿಯು
ಅವಳು,
ನೋವ ಉಂಡು ನರಳಿದರೆ
ನಗುವ ಸಂತಾನವು
ಅವಳು,
ಲೇಖನಿಯ ಹಿಡಿದರೆ ಲೋಕವೆಲ್ಲವ
ರಾರಾಜಿಸುವ ಕುಸುಮವು
ಅವಳು,
ಹೆಸರೊಂದು ಹಲವು ವೇಷವು
ಮಗಳೂ- ಮಡದೀ- ತಾಯಿಯೂ
ಅವಳು,
ಸತಿಯಾಗಿ ಪತಿಗೆ ಸಹ್ಯವಿದ್ದರೆ
ಪರಮಾನ್ನವು ಪರಿವಾರದೀ
ಅವಳು,
ಪತಿಯ ಗೌರವ ಕಿತ್ತಿ ನೀಚಳಾದರೆ
ಪಾಳುಬಿದ್ದ ಮನೆಯು ಜೀವನ
ಅವಳು,
ಹಟವ ಹಿಡಿದು ಆತುರಪಟ್ಟರೆ
ಅಂಟಿಸಲಾಗದ ಚೂರು
ಅವಳು,
ಬಗ್ಗಿ ನಡೆದರೆ ಬಾನೆತ್ತರಕ್ಕೆ
ಹಾರುವ ಬಾವುಟವು
ಅವಳು,
ತನ್ನತನವ ತೊರೆದು ನಿಂತರೆ
ತಲೆ ಉರುಳಿದವು ತಲೆಮಾರಿನವು
- ಖಾದರ್ (ಯುವ ಕವಿ, ಬಳ್ಳಾರಿ)