ಮಳೆಗಾಲದಲ್ಲಿ ಅಲ್ಲಲ್ಲಿ ಕಾಣಸಿಗುವ ಮಶ್ರೂಮ್ ನ್ನು ತಂದು ಅದರಲ್ಲಿ ವಿವಿಧ ಖಾದ್ಯಗಳನ್ನು ಮಾಡಬಹದು .ಇವತ್ತೂ ಮೂರು ಅಣಬೆ ಸಿಕ್ಕಿದೆ. ಅದರಲ್ಲಿ ಸೂಪ್ ಮಾಡುವ ವಿಧಾನವನ್ನು ಹೇಳಿಕೊಡುವೆ, ನೀವು ಮಾಡಿ ರುಚಿಕರ ಮಶ್ರೂಮ್ ಸೂಪ್. – ಶಿವದೇವಿ ಅವನೀಶಚಂದ್ರ, ತಪ್ಪದೆ ಮುಂದೆ ಓದಿ…

ಮಾಡುವ ವಿಧಾನ :
ಅಣಬೆಗಳನ್ನು ಚೆನ್ನಾಗಿ ತೊಳೆದು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಬೇಕು. ಹಾಗೆಯೇ ಕ್ಯಾರೆಟ್ ಒಂದನ್ನು ಸಣ್ಣ ಚೂರುಗಳಾಗಿ ಕೊಚ್ಚಿಕೊಂಡು ಎಣ್ಣೆ ಅಥವಾ ತುಪ್ಪದಲ್ಲಿ ಸ್ವಲ್ಪ ಬಾಡಿಸಿಕೊಳ್ಳಿ. ಈರುಳ್ಳಿಯ ಚೂರುಗಳನ್ನು ಕೂಡಾ ಸೇರಿಸಿಕೊಳ್ಳಬಹುದು. ನಿಮಗೆ ಅದಕ್ಕೆ ಸೂಪ್ ಗೆ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿ, ಅದಕ್ಕೆ ಆಗಲೇ ಎರಡು ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಹಾಕಿ, ಚಮಚದಲ್ಲಿ ಕೈಯಾಡಿಸುತ್ತಾ ಐದು ನಿಮಿಷ ಕುದಿಸಿ ಕೊಳ್ಳಿ. ಉಪ್ಪು, ಹುರಿದ ಜೀರಿಗೆ ಪುಡಿ ಸ್ವಲ್ಪ ಸೇರಿಸಿ. ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಸೇರಿಸಿ ಮುಚ್ಚಿಡಿ. ಬೇಕೆಂದಾಗ ಒಂದು ನಿಂಬೆಹಣ್ಣಿನ ರಸ ಬೆರೆಸಿ ಕುಡಿಯಿರಿ.

ನಿಮಗೆ ಬೇಕೂಂತ ಇದ್ರೆ ಬ್ರೆಡ್ನ ಸಣ್ಣ ಸಣ್ಣ ಸ್ಲೈಸ್ ಮಾಡಿ ತುಪ್ಪದಲ್ಲಿ ಹುರಿದು,ಅದನ್ನು ಸರ್ವ್ ಮಾಡುವಾಗ ಹಾಕಿ ಕೊಡಿ. ನಾನು ಒಂದು ಸಲ ಮಾಡಿದಾಗ ಕಾರ್ನ್ ಫ್ಲೋರ್ ಹಾಕಿದ್ದೆ. ಮತ್ತೊಮ್ಮೆ ಹಾಕದೆ ಹಾಗೇ ಮಾಡಿದ್ದೆ.ಇನ್ನೊಮ್ಮೆ ಬೇಯಿಸಿದ ಕ್ಯಾರೆಟ್ನ ಮ್ಯಾಶ್ ಮಾಡಿ ಬೆರೆಸಿ ಮಾಡಿದ್ದೆ.ಎಲ್ಲವೂ ಚಂದವೇ ಆಗಿತ್ತು.ನೀವು ಮಾಡಿ ನೋಡಿ ಖುಷಿಪಟ್ಟರೆ ನಂಗೆ ತುಂಬಾ ಸಂತೋಷ.
ಬೇಯಿಸಿದ ಮೊಳಕೆ ಕಾಳು, ಸೊಪ್ಪು, ಟೊಮೆಟೋ ಬೇಯಿಸಿ ಮ್ಯಾಷ್ ಮಾಡಿದ ಸೂಪ್ ಸಹ ಹೀಗೆ ಮಾಡಿದಾಗ ಏನೋ ಹೊಸದಾದ ರುಚಿ ಕೊಡುತ್ತೆ. ಒಂದು ಸಣ್ಣ ಚಮಚ ಪೆಪ್ಪರ್ ಪುಡಿ,ಜೊತೆಗೆ ನಾಲ್ಕೈದು ಹಸಿ ಗಾಂಧಾರಿ ಮೆಣಸುಗಳನ್ನು ಜಜ್ಜಿ ಹಾಕಿದ್ರೆ ಖಾರಪ್ರಿಯರಿಗೆ ಇಷ್ಟವಾಗಬಹುದು.
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
