“ಚಿಗುರಿನಿಂದ ವೈವಿಧ್ಯಮಯ ಮೊಗ್ಗಿನೆಡೆಗೆ”

ಮೃತ್ಯುಂಜಯ ಅವರು ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯಿದ್ದವರು.300 ಅಧಿಕ ಕವಿತೆಗಳು ಹಾಗೂ 400 ಅಧಿಕ ಲೇಖನಗಳ ಬರೆಯುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ರೀತಿಯಾಗಿ ಕಾರ್ಯ ನಿರ್ವಹಿಸಿದವರು. ದೀಪಿಕಾ ಬಾಬು ಅವರು ಮೃತ್ಯುಂಜಯ ಅವರ ಮೊಗ್ಗು ಕೃತಿಯ ಕುರಿತು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಮೊಗ್ಗು ‘ವೈವಿಧ್ಯ ಚುಟುಕು ಮತ್ತು ಕವನ ಸಂಕಲನ’. ಮೃತ್ಯುಂಜಯ (ಮೇಷ್ಟು) ಅಪ್ಪಾ ಸಂಪಾದಿಸಿದ ಎರಡನೇ ಕೃತಿ ಇದಾಗಿದ್ದು ಇದರಿಂದಿನ ಸಂಪೂರ್ಣ ಶ್ರಮ ಇವರದ್ದು. ಗೀತಾಂಜಲಿ ಎಂಬ ಒಂದು ಸಾಹಿತ್ಯ ಬಳಗವನ್ನು ಮಾಡಿ ಅವರಿಂದ ಬರೆಸಿದ ಬರಹಗಳಲ್ಲಿ ಆಯ್ದ ಬರಹಗಳ ಸಮಗ್ರವೇ ಈ ಸಂಕಲನದಲ್ಲಿದೆ.

1999 ರಲ್ಲಿ ಚಿಗುರು ಸಂಕಲನ ಹೊರತಂದಿದ್ದರು, ಇದೀಗ ಚಿಗುರಿಂದ ಮೊಗ್ಗು ಅರಳಿದ ಸಮಯ ಪ್ರೀತಿಯ ಅಭಿನಂದನೆಗಳು ಅಪ್ಪಾ. ಬರಹಕ್ಕಂಟಿದ ಬಂಧ ನಮ್ಮದು. ನಿತ್ಯವೂ ಶುಭೋದಯ ಮಗಳೆ ಎಂಬಲ್ಲಿಂದ ಆರಂಭವಾಗುವ ದಿನಚರಿ ಸತತ ನಾಲ್ಕು ವಸಂತಗಳ ಪೂರೈಸಿದ ಸಂಭ್ರಮ. ಪ್ರಸ್ತುತ ಮೊಗ್ಗು ಸಂಕಲನದಲ್ಲಿ ಪತ್ತಂಗಿ ಎಸ್. ಮುರುಳಿ ಸರ್ ಮುನ್ನುಡಿಯು ವಿಶೇಷವಾಗಿದೆ. ವೈವಿಧ್ಯಮಯವಾಗಿ ಎಲ್ಲಾ ರೀತಿಯ ಹನಿಗವಿತೆಗಳು ಇಲ್ಲಿ ಓದ ಸಿಗುತ್ತವೆ. ಒಟ್ಟಾರೆ ನೂರೊಂದು ಕವಿಮನದ ಸಾಹಿತ್ಯವಿಲ್ಲಿ ಓದುಗರಿಗೆ ರಸದೌತಣವಾಗಿದೆ.

ಮೃತ್ಯುಂಜಯ ಅಪ್ಪಾ(ಮೇಷ್ಟು) ಇವರು ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯಿದ್ದವರು. ಪತ್ರಿಕೆಗಳಿಗೆ ಕವನ-ಲೇಖನ ಬರೆಯುತ್ತಾ, 300 ಅಧಿಕ ಕವಿತೆಗಳು ಹಾಗೂ 400 ಅಧಿಕ ಲೇಖನಗಳ ಬರೆಯುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ರೀತಿಯಾಗಿ ಕಾರ್ಯ ನಿರ್ವಹಿಸಿದವರು. ತಮ್ಮ ನಿವೃತ್ತಿ ಬದುಕಿನ ನಂತರವೂ ಸದಾ ಲವಲವಿಕೆಯ ನವತರುಣರಂತಿರುವ ಅಪ್ಪಾ(ಮೇಷ್ಟು) ಉತ್ಸಾಹದಿಂದ ಬರೆಯುವವರಿಗೆ ಪ್ರೋತ್ಸಾಹ ನೀಡುತ್ತಾ ಅವರನ್ನು ಹುರಿದುಂಬಿಸುತ್ತಾ ತಪ್ಪು-ಸರಿಗಳ ವಿವರಿಸುತ್ತಾ ಸಲಹೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇವರ ಎರಡನೇ ಸಂಪಾದಿತ ಕೃತಿ ಇದಾಗಿದ್ದು ನನ್ನಿಂದ ಬರೆಸಿದ ಒಂದು ‘ರುಬಾಯಿ’ ಸಹ ಇದರಲ್ಲಿ ಪ್ರಕಟವಾಗಿದೆ. ಮತ್ತಿನ್ನು ಅಚ್ಚರಿ ಎಂಬಂತೆ “ಮೇಷ್ಟು ಬಗ್ಗೆ ಒಂದೆರಡು ಮಾತು” ಎಂದು ಬರೆದ ಪತ್ರವೊಂದು ಈ ಕೃತಿಯಲ್ಲಿ ಪ್ರಕಟವಾಗಿದೆ. ನಿಮ್ಮ ಪ್ರೀತಿಗೆ ನಾ ಶರಣು ಅಪ್ಪಾ. ಮತ್ತೊಮ್ಮೆ ಪ್ರೀತಿಪೂರ್ವಕ ಅಭಿನಂದನೆಗಳು.


  • ದೀಪಿಕಾ ಬಾಬು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading