ಸರ್ಕಾರಿ ಶಾಲೆಯನ್ನು ಉಳಿಸೋಣ, ಬೆಳೆಸೋಣ. ಬನ್ನಿ ನೀವು ಕೂಡಾ ಭಾಗಿಯಾಗಿ ಇದೆ ಆಗಸ್ಟ್ 6 ಮತ್ತು 7 ರಂದು ಹೆಚ್ಚಿನ ವಿವರ ಕೆಳಗಿನಂತಿದೆ, ಮುಂದೆ ಓದಿ…
ಜನನಿ ಬಾಂಧವ್ಯ ಫೌಂಡೇಶನ್ ತಂಡ ಕೇವಲ ಐದು ಜನ ಸದಸ್ಯರಿರುವ ಒಂದು ಪುಟ್ಟದಾದ ತಂಡ. ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಹುಡುಕಿಕೊಂಡು ಹೋಗಿ ಅದನ್ನು ಪುನಚ್ಛೇತನಗೊಳಿಸುವ ಕಾರ್ಯವನ್ನು ಈ ತಂಡ ಮಾಡುತ್ತಿದೆ. ಯಾವುದೇ ದೊಡ್ಡ ಹಿನ್ನೆಲೆ ಇಲ್ಲದೆ ಇದ್ದರೂ ದೂರ ದೂರದ ಊರಿನಿಂದ ಬಂದು ಸಮಾಜಕ್ಕೆ ತಮ್ಮದೆಯಾದ ಏನಾದ್ರು ಕೊಡುಗೆಯನ್ನು ನೀಡಬೇಕು ಎನ್ನುವ ದೃಢ ಸಂಕಲ್ಪ ಹೊತ್ತಿರುವ ತಂಡವಿದು.
(ಜನನಿ ಬಾಂಧವ್ಯ ಫೌಂಡೇಶನ್ ತಂಡ)
ತಂಡದ ಜೊತೆಗೆ ಮಹಾದೇವಪುರ ವಿಧಾನ ಸಭಾಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತು ಕೈ ಜೋಡಿಸಿದ್ದು, ಮಕ್ಕಳ ಉನ್ನತ ಭವಿಷ್ಯತ್ತಿಗಾಗಿ ನಮ್ಮೂರಿನ ಕನ್ನಡ ಶಾಲೆಗಳನ್ನು ಉಳಿಸುವುದು ಅಭಿವೃದ್ಧಿ ಮಾಡುವುದು. ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಅಂದರೆ ಆಗಸ್ಟ್ 6 ಮತ್ತು 7 ಶನಿವಾರ, ಭಾನುವಾರದಂದು ಯುವ ವಿಕಾಸ ಮಂಡಲ ಪ್ರೌಢಶಾಲೆ, ಮಾರತ್ತಹಳ್ಳಿಯಲ್ಲಿ ಶಾಲೆಯ ಗೋಡೆ, ಕಿಟಕಿ, ಬಾಗಿಲು ,ಮೇಜು, ಕುರ್ಚಿಗಳಿಗೆಲ್ಲ ಬಣ್ಣ ಹಚ್ಚುವುದರ ಜೊತೆಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಗುವುದು. ಈ ಅಭಿಯಾನಕ್ಕೆ ಆಸಕ್ತರು ಕೈ ಜೋಡಿಸುವುದರ ಮೂಲಕ ಒಂದು ಕನ್ನಡ ಸರ್ಕಾರಿ ಶಾಲೆಯನ್ನು ಸುಂದರಗೊಳಿಸಬಹುದು. ಬನ್ನಿ ಕೈ ಜೋಡಿಸೋಣ.
ಈ ತಂಡಗಳಿಗೆ ಇನ್ನಷ್ಟು ‘ಸರ್ಕಾರಿ ಕನ್ನಡ ಶಾಲೆ ಉಳಿಸಿ’ ಅಭಿಯಾನಕ್ಕೆ ಪ್ರೋತ್ಸಾಹಿಸಬೇಕೆಂದು ಜನನಿ ಬಾಂಧವ್ಯ ಫೌಂಡೇಶನ್ ತಂಡ ವಿನಂತಿಸುತ್ತದೆ.
- ಆಕೃತಿ ನ್ಯೂಸ್